ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ನಿರುದ್ಯೋಗಿ ಯುವಕರಿಗೆ ಆರ್ಥಿಕ ಚೈತನ್ಯ ನೀಡುತ್ತಿರುವ ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಒಳ್ಳೆಯ ಪ್ರಯತ್ನ. ಕೇಂದ್ರ ಸರ್ಕಾರವು ಈಚೆಗೆ ಪಿಎಂ ವಿಶ್ವಕರ್ಮ ಯೋಜನೆ ಮೂಲಕ ವಿವಿಧ ಕಸುಬಿನವರಿಗೆ ಸಾಲ ಯೋಜನೆ ಮೂಲಕ ನೆರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಡಿದ ಅವರು, ಮೀನು ಹಿಡಿಯಲು ಬಲೆ ಕೊಟ್ಟರೆ ಸಾಲದು. ಮೀನು ಹಿಡಿಯುವುದನ್ನು ಕಲಿಸಿಕೊಡಬೇಕು. ಯುವನಿಧಿ ಯೋಜನೆ ಈ ದಿಕ್ಕಿನಲ್ಲಿ ಸಾಗಿದರೆ ಅನುಕೂಲ ಎಂದರು.
ಸಂಸದರಿಂದ 3 ಪ್ರಮುಖ ಬೇಡಿಕೆ
ಬೇಡಿಕೆ 1 : ಸಾಗರ ತಾಲೂಕು ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ.
ಬೇಡಿಕೆ 2 : ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಮತ್ತು ಮಂಜು ಕವಿದ ವಾತಾವರಣದಿಂದ ಲ್ಯಾಂಡಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ, ಯೋಜನೆಯಿಂದ ಏನೇನೆಲ್ಲ ಲಾಭವಿದೆ? ಇಲ್ಲಿದೆ ಸಿಎಂ ಹೇಳಿದ 4 ಪಾಯಿಂಟ್
ಬೇಡಿಕೆ 3 : ವಿಮಾನ ನಿಲ್ದಾಣದ ಪಕ್ಕದಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ 40 ಎಕರೆ ಜಾಗ ಮೀಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ನೀಡಬೇಕು.
ಇದನ್ನೂ ಓದಿ – ‘ಗ್ಯಾರಂಟಿ ಯೋಜನೆ ಉದ್ದೇಶ ಹಣ ಕೊಟ್ಟು ಜೇಬು ತುಂಬಿಸುವುದಲ್ಲ’, ಇಲ್ಲಿದೆ ಡಿಕೆಶಿ ಭಾಷಣದ 3 ಪಾಯಿಂಟ್