ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 17 DECEMBER 2023
SHIMOGA : ತುಂಗಾ ನದಿಗೆ ಅಡ್ಡಲಾಗಿ ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ನೂತನ ಸೇತವೆಯನ್ನು ಸಂಸದ ಬಿ.ವೈ.ರಾಘವೇಂದ್ರ ಲೋಕಾರ್ಪಣೆ ಮಾಡಿದರು. ಇಂದಿನಿಂದ ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಗಿದೆ.
ಹೇಗಿದೆ ಹೊಸ ಸೇತುವೆ?
ಬೈಪಾಸ್ ರಸ್ತೆಯಲ್ಲಿ ಸೇತುವೆ ಸಮೀಪ ವಾಹನ ದಟ್ಟಣೆ ಹೆಚ್ಚು. ಈ ಹಿನ್ನೆಲೆ ಹಳೆ ಸೇತುವೆ ಪಕ್ಕದಲ್ಲಿಯೇ ಮತ್ತೊಂದು ಸೇತುವೆ ನಿರ್ಮಿಸಲಾಗಿದೆ. 20.16 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ವಿಶಾಲವಾದ ರಸ್ತೆ, ಪಾದಚಾರಿಗಳಿಗೆ ವಾಕಿಂಗ್ ಪಾಥ್ ಇದೆ.
ಯಾರೆಲ್ಲ ಏನೇನು ಹೇಳಿದರು?
ಬಿ.ವೈ.ರಾಘವೇಂದ್ರ, ಸಂಸದ : ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ಭಾಗಕ್ಕೆ ಸೇತುವೆಯ ಅಗತ್ಯವಿತ್ತು. 20.16 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಹಿಂದೆ ಒಂದು ಸರ್ಕಾರ ಶಂಕುಸ್ಥಾಪನೆ ನೆರವೇರಿಸಿ ಮತ್ತೊಂದು ಸರ್ಕಾರ ಬಂದಾಗ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಈಗ ಗುತ್ತಿಗೆದಾರರು ಶೀಘ್ರ ಕಾಮಗಾರಿ ಪೂರ್ಣಗೊಳಿಸಿದರೆ ಬೋನಸ್ ದೊರೆಯಲಿದೆ. ಹಾಗಾಗಿ ಎಲ್ಲ ಕಾಮಗಾರಿಗಳು ವೇಗ ಪಡೆದಿವೆ.
ಇದನ್ನೂ ಓದಿ – ನಟಿ ಮಾಳವಿಕ ಅವಿನಾಶ್ಗೆ ಎದುರಾಗಿದ್ದ ಸಂಕಷ್ಟ ನಾಳೆ ನಿಮ್ಮನ್ನೂ ಕಾಡಬಹುದು, ಏನದು? ಪಾರಾಗೋದು ಹೇಗೆ?
ಎಸ್.ಎನ್.ಚನ್ನಬಸಪ್ಪ, ಶಾಸಕ : ಬಹು ವರ್ಷದಿಂದ ಇಲ್ಲಿ ಸೇತುವೆಯ ಅಪೇಕ್ಷೆ ಇತ್ತು. ಸಂಸದ ರಾಘವೇಂದ್ರ ಅದನ್ನು ಈಡೇರಿಸಿದ್ದಾರೆ. ಯಡಿಯೂರಪ್ಪ, ರಾಘವೇಂದ್ರ ಅವರು ಮಲಗಿದ್ದಾಗ ಕನಸು ಕಾಣಲಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಜನ ಕಂಡ ಕನಸನ್ನು ನನಸು ಮಾಡಿದ್ದಾರೆ.
ಹೇಗಿದೆ ಸೇತುವೆ? ಇಲ್ಲಿದೆ ಫೋಟೊದಲ್ಲಿ ಆಲ್ಬಂ














