SHIVAMOGGA LIVE NEWS | 25 FEBRURARY 2023
SHIMOGA : ವಿಐಎಸ್ಎಲ್ ಬಂದ್ ಮಾಡುವ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂಭಾಗ ಕ್ಯಾಂಡಲ್ (Candle) ಹಿಡಿದು ಪ್ರತಿಭಟನೆ ನಡೆಸಿದರು.
ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಲು ವಿಫಲವಾಗಿರುವ ಹಿನ್ನೆಲೆ ಪ್ರಧಾನಿ ಮೋದಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗೋ ಬ್ಯಾಕ್ ಮೋದಿ ಘೋಷಣೆ ಮೊಳಗಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರೆಲ್ಲ ಏನೇನು ಹೇಳಿದರು?
ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಕೆ.ಪಿ.ಶ್ರೀಪಲ್ ಮಾತನಾಡಿ, ವಿಐಎಸ್ಎಲ್ ಕಾರ್ಖಾನೆ ಆರಂಭವಾಗಿ ನೂರು ವರ್ಷ ಪೂರೈಸಿದೆ. ಶತಮಾನದ ಸಂಭ್ರಮದಲ್ಲಿರಬೇಕಾದ ಕಾರ್ಮಿಕರು ಈಗ ಸಂಕಷ್ಟದಲ್ಲಿದ್ದಾರೆ. ವಿಐಎಸ್ಎಲ್ ಮುಚ್ಚುವ ನಿರ್ಧಾರವನ್ನು ಈ ಕೂಡಲೆ ಕೈ ಬಿಡಬೇಕು ಎಂದು ಆಗ್ರಹಿಸಿದರು. (Candle)
ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಅವರು ಮಾತನಾಡಿ, ಶಿವಮೊಗ್ಗ ಅಂದರೆ ಬರೀ ವಿಮಾನ ನಿಲ್ದಾಣವಲ್ಲ. ಎಂಪಿಎಂ ಮುಚ್ಚಿ ಹೋಗಿದೆ. ವಿಐಎಸ್ಎಲ್ ಕಾರ್ಖಾನೆಗಾದರೂ ಅನುದಾನ ಕೊಡಿ. ನೀತಿ ಸಂಹಿತೆ ಜಾರಿಯಾಗುವುದರ ಒಳಗೆ ಅನುದಾನ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಕೆ.ಟಿ.ಗಂಗಾಧರ್ ಅವರು ಮಾತನಾಡಿ, ಪ್ರಪಂಚದಾದ್ಯಂತ ಸ್ಟೀಲ್ ಗೆ ಭಾರೀ ಬೇಡಿಕೆ ಇದೆ. ಇಂತಹ ಸಂದರ್ಭ ವಿಐಎಸ್ಎಲ್ ಕಾರ್ಖಾನೆ ನಷ್ಟದಲ್ಲಿದೆ ಎಂದು ಹೇಳುತ್ತಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಸಾಲದು. ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಬೇಕು. ಎಂಪಿಎಂ, ವಿಐಎಸ್ಎಲ್ ಕಾರ್ಖಾನೆಗಳಿಗೆ ಅನುದಾನ ಬಿಡಗಡೆ ಮಾಡಿದರಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರ ಶಿವಮೊಗ್ಗ ಭೇಟಿ ಸಾರ್ಥಕವಾಗಲಿದೆ ಎಂದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ಗುರುಮೂರ್ತಿ ಅವರು ಮಾತನಾಡಿ, ಫ್ಯಾಕ್ಟರಿಗಳಿದ್ದರಷ್ಟೆ ವಿಮಾನ ನಿಲ್ದಾಣಕ್ಕೆ ಲಾಭ. ಆದರೆ ಇಲ್ಲಿ ಫ್ಯಾಕ್ಟರಿಗಳನ್ನು ಬಂದ್ ಮಾಡಿ ವಿಮಾನ ನಿಲ್ದಾಣ ನಿರ್ಮಿಸಿದ್ದಾರೆ. ಇದರ ಪ್ರಯೋಜನವೇನು? ನರೇಂದ್ರ ಮೋದಿ ಅವರು ಗುಜರಾತ್ ನಲ್ಲಿ 3500 ಕೋಟಿ ರೂ. ಖರ್ಚು ಮಾಡಿ ಸರ್ದಾರ್ ವಲಭಬಾಯ್ ಪಟೇಲ್ ಪ್ರತಿಮೆ ನಿರ್ಮಿಸಿದ್ದಾರೆ. ಆದರೆ ವಿಐಎಸ್ಎಲ್, ಎಂಪಿಎಂಗೆ ಅನುದಾನ ಬಿಡುಗಡೆಗೆ ಹಣವಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ – ಭದ್ರಾವತಿ ಬಂದ್, ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ, ಹೇಗಿದೆ ಸದ್ಯದ ಪರಿಸ್ಥಿತಿ?
ಪ್ರಮುಖರಾದ ಬಿ.ಎ.ರಮೇಶ್ ಹೆಗ್ಡೆ, ಪ್ರವೀಣ್, ಗಿರೀಶ್, ವೈ.ಹೆಚ್.ನಾಗರಾಜ್, ಪಲ್ಲವಿ, ತೀ.ನಾ.ಶ್ರೀನಿವಾಸ್, ಎನ್.ರಮೇಶ್, ಮಾಜಿ ಉಪ ಮೇಯರ್ ಪಾಲಾಕ್ಷಿ, ಆಮ್ ಆದ್ಮಿ ಪಾರ್ಟಿಯ ನೇತ್ರಾವತಿ ಸೇರಿದಂತೆ ಹಲವರು ಇದ್ದರು.