ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 APRIL 2021
ಆರನೆ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಕೆಎಸ್ಆರ್ಟಿಸಿ ನೌಕರರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ಶಿವಮೊಗ್ಗದ ಗೋಪಿ ಸರ್ಕಲ್ನಲ್ಲಿ ಮೇಣದ ಬತ್ತಿ ಹಿಡಿದು ನೌಕರರು ಪ್ರತಿಭಟನೆ ನಡೆಸಿದರು. ತಮ್ಮ ಹಕ್ಕೊತ್ತಾಯಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಗೂಢಚರ್ಯೆಗೆ ಆರೋಪ, ಆಕ್ರೋಶ
ಕೆಎಸ್ಆರ್ಟಿಸಿಯ ಸಿಬ್ಬಂದಿಯೊಬ್ಬರು ತಮ್ಮ ಪ್ರತಿಭಟನೆಯ ಗೂಢಚರ್ಯೆ ಮಾಡುತ್ತಿದ್ದಾರೆ. ಪ್ರತಿಭಟನಾನಿರತ ನೌಕರರ ಮಾತುಗಳನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಹಿರಿಯ ಅಧಿಕಾರಿಗಳಿಗೆ ಕಳುಹಿಸುತ್ತಿದ್ದಾರೆ. ಇವರಿಂದಾಗಿ ಹಲವು ನೌಕರರ ವರ್ಗಾವಣೆಯಾಗುತ್ತಿದೆ. ಗೂಢಚರ್ಯೆ ಮಾಡುವ ಅಗತ್ಯವೇನು ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಕೆ.ಪಿ.ಶ್ರೀಪಾಲ್, ದಲಿತ ಸಂಘರ್ಷ ಸಮಿತಿ ಮುಖಂಡ ಗುರುಮೂರ್ತಿ, ಬಂಜಾರ ವಿದ್ಯಾರ್ಥಿ ಸಂಘಟನೆ ಮುಖಂಡ ಗಿರೀಶ್, ಕೆಎಸ್ಆರ್ಟಿಸಿ ನೌಕರರ ಸಂಘದ ಸಂತೋಷ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಪ್ರತಿಭಟನೆಯ ವಿಡಿಯೋ ರಿಪೋರ್ಟ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಊರಗಡೂರಿನ ಸಂಕೇತ್ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

- ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

- ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್ಗೆ ಒಂದೂವರೆ ವರ್ಷದ ಮಗು ಬಲಿ

- ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್, ದಾಖಲಾಯ್ತು ಕೇಸ್

- ಗುಡ್ಡೇಕಲ್ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

About The Editor
ನಿತಿನ್ ಆರ್.ಕೈದೊಟ್ಲು
















