ಗುಂಡಿಗೆ ಬಿತ್ತು ಕಾರು, ಕೇಳೋರಿಲ್ಲ ಸ್ಮಾರ್ಟ್ ಸಿಟಿಯೊಳಗಿನ ಗೋಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 MARCH 2021

ಸ್ಮಾರ್ಟ್ ಸಿಟಿ ಆಗಬೇಕಿದ್ದ ಶಿವಮೊಗ್ಗ ಗುಂಡಿ ಸಿಟಿಯಾಗಿದೆ. ಎಲ್ಲೆಂದರಲ್ಲಿ ಗುಂಡಿಗಳು ಇರುವುದರಿಂದ ವಾಹನ ಸವಾರರು ಫಜೀತಿ ಅನುಭವಿಸುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ.

152714427 1338938999800850 4482412192704373465 n.jpg? nc cat=111&ccb=3& nc sid=8bfeb9& nc ohc=AlHLzjiGH8QAX qIJ08& nc ht=scontent.fblr4 1

ಇದು ಶಿವಮೊಗ್ಗದ ಅಚ್ಚುತರಾವ್ ಲೇಔಟ್‍ನ ಮೊದಲ ಅಡ್ಡರಸ್ತೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ನಾಲ್ಕು ಬಾರಿ ಈ ರಸ್ತೆಯಲ್ಲಿ ಗುಂಡಿಗಳನ್ನು ತೋಡಲಾಗಿದೆ. ಈಗ ಕೇಬಲ್ ಅಳವಡಿಸಲು ಜಂಕ್ಷನ್ ಬಾಕ್ಸ್ ಹಾಕಲು ಗುಂಡಿ ಅಗೆಯಲಾಗಿದೆ. ಆದರೆ ಮುನ್ನೆಚ್ಚರಿಕೆ ಫಲಕಗಳಿಲ್ಲದೆ, ಪ್ರತಿದಿನ ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಗುಂಡಿಯಲ್ಲಿ ಸಿಕ್ಕಿಬಿದ್ದ ಕಾರು

ಮಂಗಳವಾರ ಸಂಜೆ ಕಾರೊಂದು ಗುಂಡಿಯೊಳಗೆ ಸಿಕ್ಕಿಬಿದ್ದಿತ್ತು. ರಸ್ತೆಯ ತಿರುವಿನಲ್ಲೇ ಗುಂಡಿ ಅಗೆಯಲಾಗಿದ್ದು, ಸೂಚನಾ ಫಲಕ ಇಲ್ಲದೆ ಇರುವುದರಿಂದ ಅಪಘಾತ ಸಂಭವಿಸಿತು. ಸ್ಥಳೀಯರ ನೆರವಿನಿಂದಾಗಿ ಕಾರನ್ನು ಮೇಲೆತ್ತಲಾಯಿತು.

ಯಾವಾಗ ಮುಗಿಯುತ್ತಪ್ಪ ಈ ಗೋಳು

‘ಆರೇಳು ತಿಂಗಳಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಗುಂಡಿ ಅಗೆದು ರಸ್ತೆಯಲ್ಲ ಧೂಳಾಗಿದೆ. ಮನೆಯೊಳಗೆ ಧೂಳು ರಾಶಿಯೇ ಬರುತ್ತೆ. ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಗುಂಡಿಗಳಿಂದ ಭಾರಿ ಸಮಸ್ಯೆ ಆಗುತ್ತಿದೆ. ಗುಂಡಿಗಳ ಮುಂದೆ ಸೂಚನಾ ಫಲಕಗಳು ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ’  ಅನ್ನುತ್ತಾರೆ ಸತೀಶ್‍.

‘ಸೂಚನಾ ಫಲಕ ಹಾಕದೆ ಇರುವುದರಿಂದ ವಾಹನ ಸವಾರರು ಗುಂಡಿ ಬಂದು ಬೀಳುತ್ತಿದ್ದಾರೆ. ನಾವೇ ಅಲ್ಲಿ ಇಲ್ಲಿ ಟೇಪ್ ತಂದು, ಗಿಡಗಳನ್ನು, ಮರದ ಸಣ್ಣ ರೆಂಬೆಗಳನ್ನು ಇಟ್ಟು ವಾಹನ ಸವಾರರನ್ನು ಎಚ್ಚರಿಸುತ್ತಿದ್ದೇವೆ. ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ರೆಸ್ಪಾನ್ಸ್ ಕೊಡುತ್ತಿಲ್ಲ’ ಅನ್ನುತ್ತಾರೆ ಗುರುರಾಜ್.

152859025 1338939146467502 5896003769425125971 n.jpg? nc cat=105&ccb=3& nc sid=8bfeb9& nc ohc=1pMT5VXRnEcAX Rp3u& nc ht=scontent.fblr4 2

ಸಮಸ್ಯೆ ಇದೊಂದೆ ಏರಿಯಾಗೆ ಸೀಮಿತವಲ್ಲ

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಯುತ್ತಿರುವ ವಾರ್ಡ್‍ಗಳಲ್ಲೂ ಇದೆ ಮಾದರಿ ಸಮಸ್ಯೆ ಇದೆ. ಸೂಚನಾ ಫಲಕಗಳಿಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸಗಳನ್ನು ನಡೆಸಲಾಗುತ್ತಿದೆ. ಕಾಮಗಾರಿಗಳ ವಿಳಂಬದಿಂದಾಗಿ ಸಾರ್ವಜನಿಕರು ಹೈರಾಣಾಗಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 3, 2021

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

Leave a Comment