ಇನ್ಷುರೆನ್ಸ್ ಕಿರಿಕ್, ಪೆಟ್ರೋಲ್ ಸುರಿದು ಸಾಕ್ಷಿ ಸಿಗದಂತೆ ಸುಟ್ಟು ಹಾಕುವುದಾಗಿ ವ್ಯಕ್ತಿಗೆ ಬೆದರಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಕಾರಿನ ಇನ್ಷುರೆನ್ಸ್ (CAR INSURANCE) ಹಣ ಕೇಳಲು ಕರೆ ಮಾಡಿದ ಗ್ರಾಹಕನಿಗೆ ಇನ್ಷುರೆನ್ಸ್ ಕಂಪನಿಯವರು ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ನಕಲಿ ಇನ್ಷುರೆನ್ಸ್ ಸೃಷ್ಟಿ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Shimoga Nanjappa Hospital

ಇನ್ಷುರೆನ್ಸ್ ಕಂಪನಿಯೊಂದರ ಶಿವಮೊಗ್ಗ ಶಾಖೆಯಲ್ಲಿ ಈ ಘಟನೆ ನಡೆದಿದೆ. ಗುರುಪುರದ ಇಂದ್ರ ಕುಮಾರ್ ಎಂಬುವವರು ವಂಚನೆಯಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಏನಿದು ಪ್ರಕರಣ? (CAR INSURANCE) 

ಇಂದ್ರ ಕುಮಾರ್ ಅವರು ಟೊಯೊಟೊ ಇಟಿಯೊಸ್ ಕಾರು ಹೊಂದಿದ್ದಾರೆ. ಸೆ.27ರಂದು ಬಾರಂದೂರು ಸಮೀಪ ರಸ್ತೆಯಲ್ಲಿ ನಾಯಿ ಅಡ್ಡಬಂದಿದ್ದರಿಂದ ಕಾರು ಅಪಘಾತಕ್ಕೀಡಾಗಿತ್ತು. ಶೋ ರೂಮಿನಲ್ಲಿ ಕಾರು ರಿಪೇರಿಯಾಗೆಂದು ಬಿಟ್ಟಿದ್ದು, 1.20 ಲಕ್ಷ ರೂ. ವೆಚ್ಚವಾಗಿದೆ. ಇನ್ಷುರೆನ್ಸ್ ಇದ್ದಿದ್ದರಿಂದ ಕ್ಲೇಮ್ ಮಾಡಲು ಇಂದ್ರ ಕುಮಾರ್ ಮುಂದಾಗಿದ್ದಾರೆ.

Shimoga Nanjappa Hospital

ಕಾರು ಇನ್ಷುರೆನ್ಸ್ (CAR INSURANCE) ಹಣ ನೀಡುವಂತೆ ಇನ್ಷುರೆನ್ಸ್ ಕಂಪನಿಯವರಿಗೆ ಇಂದ್ರ ಕುಮಾರ್ ಮನವಿ ಮಾಡಿದ್ದಾರೆ. ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಆ ಬಳಿಕ ಇನ್ಷುರೆನ್ಸ್ ಕಂಪನಿ ಎಗ್ಸಿಕ್ಯೂಟಿವ್ ಅವರು ಕರೆ ಸ್ವೀಕರಿಸುತ್ತಿರಲಿಲ್ಲ. ಹಾಗಾಗಿ ಇಂದ್ರ ಕುಮಾರ್ ಅವರು ತಮ್ಮ ಸ್ನೇಹಿತನ ಮೊಬೈಲ್ ನಿಂದ ಕರೆ ಮಾಡಿದ್ದಾರೆ. ಆಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಯಾವುದೆ ಸಾಕ್ಷಿ ಸಿಗದಂತೆ ಪೆಟ್ರೋಲ್ ಸುರಿದು ಸುಟ್ಟು ಹಾಕುತ್ತೇವೆ ಎಂದು ಇನ್ಷುರೆನ್ಸ್ ಕಂಪನಿಯವರು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ‘ಮುಂದೆ ಆ ರೈತರ ಮಕ್ಕಳು ಬಂದೂಕು ಹಿಡಿದರೆ ಆರಗ ಜ್ಞಾನೇಂದ್ರ ಅವರೇ ಕಾರಣರಾಗುತ್ತಾರೆ’

ಈ ನಡುವೆ ಇಂದ್ರ ಕುಮಾರ್ ಅವರು ಇನ್ಷುರೆನ್ಸ್ ಕಂಪನಿಯ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿದ್ದಾರೆ. ಆಗ ತಮ್ಮ ಕಾರಿನ ಇನ್ಷುರೆನ್ಸ್ ಗಾಗಿ ಯಾವುದೆ ಹಣ ಜಮಾವಣೆಯಾಗಿಲ್ಲ ಎಂದು ತಿಳಿಸಿದ್ದಾರೆ. ಶಿವಮೊಗ್ಗ ಕಚೇರಿಯ ಸಿಬ್ಬಂದಿ ಪ್ರತಿ ವರ್ಷ ಇನ್ಷುರೆನ್ಸ್ ಹಣ ಪಾವತಿ ಮಾಡಿಸಿಕೊಂಡಿದ್ದಾರೆ. ಸುಮಾರು 1.50 ಲಕ್ಷ ರೂ. ಹಣವನ್ನು ಇನ್ಷುರೆನ್ಸ್ ಗಾಗಿ ಕಟ್ಟಿಸಿಕೊಂಡಿದ್ದಾರೆ ಎಂದು ಇಂದ್ರ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ಷುರೆನ್ಸ್ (CAR INSURANCE) ಹಣ ಕೇಳಿದರೆ ಜೀವ ಬೆದರಿಕೆ ಒಡ್ಡಿರುವುದು, ನಕಲಿ ಬಿಲ್ ಸೃಷ್ಟಿಸಿ ವಂಚನೆ ಮಾಡಿರುವುದರಿಂದ ಇನ್ಷುರೆನ್ಸ್ ಕಂಪನಿಯ ಮ್ಯಾನೇಜರ್ ಮತ್ತು ಎಗ್ಸಿಕ್ಯೂಟಿವ್ ವಿರುದ್ಧ ಇಂದ್ರ ಕುಮಾರ್ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

JNNCE COLLEGE ENGINEERING

ಕ್ಲಿಕ್ ಮಾಡಿ ಇದನ್ನೂ ಓದಿ ರಸ್ತೆ ಪಕ್ಕ ನಿಂತಿದ್ದ ಬೈಕಿಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ, ಯುವತಿ ಕಾಲಿಗೆ ಗಂಭೀರ ಗಾಯ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment