ಇನ್ಷುರೆನ್ಸ್ ಕಚೇರಿಯಲ್ಲಿ ವಿಮೆಗಾಗಿ ಕೈ ಕೈ ಮಿಲಾಯಿಸಿದರು, ದೂರು, ಪ್ರತಿ ದೂರು ದಾಖಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಕಾರಿನ ಇನ್ಷುರೆನ್ಷ್ (CAR INSURANCE) ಕ್ಲೇಮ್ ವಿಚಾರದಲ್ಲಿ ಇನ್ಷುರೆನ್ಸ್ ಕಂಪನಿಯ ಶಿವಮೊಗ್ಗ ಕಚೇರಿಯಲ್ಲಿ ಗಲಾಟೆಯಾಗಿದೆ. ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ.

Shimoga Nanjappa Hospital mammography

ದುರ್ಗಿಗುಡಿಯಲ್ಲಿರುವ ಇನ್ಷುರೆನ್ಸ್ ಕಂಪನಿಯ ಕಚೇರಿಯಲ್ಲಿ ಘಟನೆ ಸಂಭವಿಸಿದೆ. ಇನ್ಷುರೆನ್ಸ್ ಕ್ಲೇಮ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅದರೆ ಇದೆ ವಿಚಾರಕ್ಕೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಕಾರಿನ ಕಡೆಯವರು ಆರೋಪಿಸಿದ್ದಾರೆ.

ಏನಿದು ಪ್ರಕರಣ? (CAR INSURANCE)

ಸೆ.27ರಂದು ಕಾರು ಅಪಘಾತವಾಗಿ ಹಾನಿ ಉಂಟಾಗಿತ್ತು. ಶೋ ರೂಂನಲ್ಲಿ ರಿಪೇರಿಗೆ ಬಿಟ್ಟಿದ್ದಾಗ ಅಂದಾಜು 50 ಸಾವಿರ ರೂ. ಖರ್ಚಾಗಲಿದೆ ಎಂದು ತಿಳಿಸಿದ್ದರು. ಕಾರು ಮಾಲೀಕ ಇನ್ಷುರೆನ್ಸ್ (CAR INSURANCE) ಕ್ಲೇಮ್ ಮಾಡಲು ಮುಂದಾದಾಗ ಸಂಸ್ಥೆಯವರು ನಿರಾಕರಿಸಿದ್ದಾರೆ.

ಇದನ್ನು ಪ್ರಶ್ನಿಸಲು ಕಾರು ಮಾಲೀಕನ ಸಹೋದರ ಮಂಜುನಾಥ್ ಎಂಬುವವರು ಇನ್ಷುರೆನ್ಸ್ ಕಂಪನಿಗೆ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆ ಮಂಜುನಾಥ್ ಮತ್ತು ಇನ್ಷುರೆನ್ಸ್ ಕಂಪನಿ ಸಿಬ್ಬಂದಿ ಮಧ್ಯೆ ಜಗಳವಾಗಿದ್ದು, ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಇನ್ಷುರೆನ್ಸ್ ಕಂಪನಿ ಸಿಬ್ಬಂದಿ ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಂಜುನಾಥ್ ದೂರಿನಲ್ಲಿ ಆಪಾದಿಸಿದ್ದಾರೆ.

ದೂರಿನಲ್ಲಿ ಏನಿದೆ? (CAR INSURANCE)

ಮಂಜುನಾಥ್ ಅವರು ನೀಡಿರುವ ದೂರಿನಲ್ಲಿ, ನಾವು ಡಿ.ಎಸ್.ಎಸ್ ನವರು ಎಂದು ಹೇಳಿದ್ದಕ್ಕೆ ಮ್ಯಾನೇಜರ್ ಮಂಜುನಾಥ್ ಅವಾಚ್ಯವಾಗಿ ಬೈದು ಮತ್ತು ಜಾತಿ ನಿಂದನೆ ಮಾಡಿದ್ದಾರೆ. ಏಜೆಂಟ್ ಶಫಿ ಜೊತೆ ಸೇರಿಕೊಂಡು ತಮ್ಮ ಮೇಲೆ ಹಲ್ಲ ನಡೆಸಿದ್ದಾರೆ. ಈ ವೇಳೆ ಡ್ರಾದಲ್ಲಿದ್ದ ಚಾಕು ತೋರಿಸಿದ್ದಾರೆ. ಅಲ್ಲದೆ ರೌಡಿಗಳನ್ನು ಕರೆಯಿಸಿ ಹೊಡೆಸುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ವರ್ಗಾವಣೆ, ಯಾರು ಹೊಸ ಎಸ್.ಪಿ?

ಇತ್ತ ಇನ್ಷುರೆನ್ಸ್ ಸಂಸ್ಥೆಯ ಮ್ಯಾನೇಜರ್ ಮಂಜುನಾಥ್ ಅವರು ನೀಡಿರುವ ದೂರಿನಲ್ಲಿ, ಕಾರಿನ ಡ್ಯಾಮೇಜ್ ಗೆ ತಾವು ಇನ್ಷುರೆನ್ಸ್ ಕೊಡಲು ಬರುವುದಿಲ್ಲ. ವಿಮಾಧಾರರನ್ನು ಕರೆದುಕೊಂಡಿ ಬನ್ನಿ ಎಂದು ತಿಳಿಸಲಾಯಿತು. ಈ ವೇಳೆ ತಮ್ಮ ಮೇಲೆ ಮತ್ತ ಶಫಿ ಎಂಬುವವರ ಮೇಲೆ ಮಂಜುನಾಥ್ ಹಲ್ಲೆ ನಡೆಸಿದ್ದಾರೆ. ತಮ್ಮ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡುತ್ತೇನೆ ಎಂದು ತಿಳಿಸಿದ್ದರು ಎಂದು ಆಪಾದಿಸಿದ್ದಾರೆ.

ದೊಡ್ಡಪೇಟೆ ಠಾಣೆಯಲ್ಲಿ ಎರಡು ದೂರು ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ವೈಭವದ ತುಂಗಾ ಆರತಿ, ಹೇಗಿತ್ತು ಪೂಜೆ? ಫೋಟೊ ನ್ಯೂಸ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment