ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 DECEMBER 2022
ಶಿವಮೊಗ್ಗ : ತುರ್ತು ಕೆಲಸಕ್ಕೆ ಅಗತ್ಯವಿದೆ ಎಂದು ಕೃಷಿಕರೊಬ್ಬರಿಂದ ಕಾರು (car missing) ಪಡೆದು ನಾಲ್ಕು ತಿಂಗಳಾದರು ಹಿಂತಿರುಗಿಸದೆ ವಂಚಿಸಲಾಗಿದೆ. ಈ ಸಂಬಂಧ ಸ್ನೇಹಿತನ ಮಗನ ವಿರುದ್ಧ ಆ ಕೃಷಿಕ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಬಸವನಗೌಡ ಎಂಬುವವರು ತಮ್ಮ ಸ್ನೇಹಿತನ ಮಗ ರೋಹಿತ್ ಐಯ್ಯಂಗಾರ್ ಎಂಬುವವರಿಗೆ ವ್ಯಾಗನಾರ್ ಕಾರು ಕೊಟ್ಟಿದ್ದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
(car missing)
ಏನಿದು ಪ್ರಕರಣ?
ರೋಹಿತ್ ಅಯ್ಯಂಗಾರ್ ಅವರ ತಂದೆ ಮತ್ತು ಬಸವನಗೌಡ ಅವರು ಸ್ನೇಹಿತರು. ರೋಹಿತ್ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದಾನೆ. ಆತನ ಕಾರು ಕೆಟ್ಟು ಹೋಗಿದ್ದು, ರಿಪೇರಿಗೆ ಕೊಟ್ಟಿದ್ದಾಗಿ ತಿಳಿಸಿದ್ದಾನೆ. ಬೇಕರಿ ಕೆಲಸಗಳಿರುವುದರಿಂದ ಒಂದು ವಾರದ ಮಟ್ಟಿಗೆ ವ್ಯಾಗನಾರ್ ಕಾರು ಕೊಡುವಂತೆ ಬಸವನಗೌಡ ಅವರಿಗೆ ಮನವಿ ಮಾಡಿದ್ದ. ಸ್ನೇಹಿತನ ಮಗನಾದ್ದರಿಂದ ಬಸವನಗೌಡ ಅವರು ನಂಬಿಕೆ ಇಟ್ಟು ಕಾರು ಕೊಟ್ಟಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ
ಒಂದು ವಾರ ಕಳೆದರು ಕಾರು ಮರಳಿ ಬಾರದಿದ್ದರಿಂದ ಬಸವನಗೌಡ ಅವರು ಫೋನ್ ಮೂಲಕ ವಿಚಾರಿಸಿದ್ದಾರೆ. ಇನ್ನೊಂದು ಸ್ವಲ್ಪ ದಿನದಲ್ಲಿ ಹಿಂತಿರುಗಿಸುವುದಾಗಿ ರೋಹಿತ್ ಭರವಸೆ ನೀಡಿದ್ದಾನೆ. ನಾಲ್ಕು ತಿಂಗಳು ಕಳೆದರು ಕಾರು ಮರಳಿ ಕೊಡದಿದ್ದಾಗ ಬಸವನಗೌಡ ಅವರು ಹೊಳಲ್ಕೆರೆಯಲ್ಲಿರುವ ರೋಹಿತ್ ಬೇಕರಿ ಬಳಿ ತೆರಳಿದ್ದಾರೆ. ಆತ ಬೇಕರಿ ಮತ್ತು ಮನೆಯನ್ನು ಬಾಡಿಗೆಗೆ ಕೊಟ್ಟು ಮೈಸೂರಿಗೆ ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ – ಅರ್ಧ ವರ್ಷದಲ್ಲಿ 7 ರೌಡಿಗಳ ಕಾಲಿಗೆ ಗುಂಡಿಟ್ಟ ಶಿವಮೊಗ್ಗ ಪೊಲೀಸರು, ಯಾರೆಲ್ಲರಿಗೆ ಫೈರ್ ಮಾಡಲಾಗಿದೆ?
ಕಾರು ಪಡೆದು ನಾಲ್ಕು ತಿಂಗಳು ಕಳೆದರು ಅದನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಬಸವನಗೌಡ ಅವರು ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.