ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 AUGUST 2023
SHIMOGA : ಕೇಂದ್ರ ಕಾರಾಗೃಹದ (Central Jail) ಒಳಗೆ ಹುಟ್ಟುಹಬ್ಬ ಆಚರಿಸಿ, ಮೊಬೈಲ್ನಲ್ಲಿ ಫೋಟೊ, ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಈ ಸಂಬಂಧ ಆರು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸೋಗಾನೆಯಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದ (Central Jail) ಕೊಠಡಿ ಸಂಖ್ಯೆ 30ರಲ್ಲಿ ಮೊಹಮ್ಮದ್ ಅಲಿ ಎಂಬ ಕೈದಿಯ ಹುಟ್ಟುಹಬ್ಬ ಆಚರಿಸಲಾಗಿದೆ. ಶಾಹಿದ್ ಅಲಿಯಾಸ್ ಬಚ್ಚನ್, ಶಶಿ ಪೂಜಾರಿ, ಸಿರಾಜ್, ನಿಶಾಕ್ ಪೂಜಾರಿ, ಸಚಿನ್ ಶೆಟ್ಟಿ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹಿಂತಿರುಗಿದ ಎರಡು ಮನೆಗಳ ಮಾಲೀಕರಿಗೆ ಕಾದಿತ್ತು ಶಾಕ್
ವಿಚಾರ ಗೊತ್ತಾಗಿದ್ದು ಹೇಗೆ?
ಜೈಲಿನ ಕಾವೇರಿ ವಿಭಾಗದ ಕೊಠಡಿ ಸಂಖ್ಯೆ 30ರಲ್ಲಿ 2023ರ ಮಾರ್ಚ್ 1ರಂದು ಕೈದಿ ಮೊಹಮ್ಮದ್ ಅಲಿಯ ಹುಟ್ಟುಹಬ್ಬ ಆಚರಿಸಲಾಗಿತ್ತು. ಸಾಗರ ಠಾಣೆ ಪೊಲೀಸರು ವಿಚಾರಣೆಗೆ ಬಂದಾಗ ಕೈದಿಗಳ ಕೊಠಡಿಯನ್ನು ಪರಿಶೀಲಿಸಿದ್ದರು. ಆಗ ಯಾವುದೆ ನಿಷೇಧಿತ ವಸ್ತುಗಳು ಪತ್ತೆಯಾಗಿರಲಿಲ್ಲ. ಆದರೆ ತನಿಖಾಧಿಕಾರಿಗಳು ತಮ್ಮ ಲ್ಯಾಪ್ಟಾಪ್ನಲ್ಲಿದ್ದ ಕೈದಿಗಳು ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿದ ವಿಡಿಯೋ, ವಿಡಿಯೋಗಳನ್ನು ತೋರಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಜೈಲು ಅಧೀಕ್ಷಕಿ ಡಾ.ಅನಿತಾ ಅವರು ಕಾರಾಗೃಹದಲ್ಲಿ ಮೊಬೈಲ್ ಫೋನ್ ನಿಷೇಧಿತ ವಸ್ತುವಾಗಿದೆ. ಹಾಗಿದ್ದು ಅದನ್ನು ಬಳಸಿದ್ದಾರೆ ಎಂದು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಗಾಂಜಾ ಸೇವಿಸಿದ್ದ ಬ್ಯಾಂಕ್ ಉದ್ಯೋಗಿ ಭದ್ರಾವತಿಯಲ್ಲಿ ಅರೆಸ್ಟ್ – 3 ಫಟಾಫಟ್ ಕ್ರೈಮ್ ನ್ಯೂಸ್