ರಾಗಿಗುಡ್ಡದಲ್ಲಿ ಕುರಿ ಮೇಯಿಸಲು ತೆರಳಿದ್ದ ವ್ಯಕ್ತಿಗೆ ಕರೆಂಟ್‌ ಶಾಕ್‌, ಸಾವು

SHIVAMOGGA LIVE NEWS | 30 OCTOBER 2023 ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

SHIMOGA : ಕುರಿ ಮೇಯಸಿಲು ತೆರಳಿದ್ದಾಗ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಲೈನ್‌ ಮ್ಯಾನ್‌ (Line Man), ಮೇಸ್ತ್ರಿ ಮತ್ತು ಸಹಾಯಕ ಇಂಜಿನಿಯರ್‌ ನಿರ್ಲಕ್ಷ್ಯವೇ ಕಾರಣ ಎಂದು ಪ್ರಕರಣ ದಾಖಲಾಗಿದೆ.

Police-Jeep-at-Shimoga-General-Image

ರಾಗಿಗುಡ್ಡದ ಶಾಂತಿ ನಗರದ ಚಾನಲ್‌ ಏರಿಯಾ ರಸ್ತೆಯಲ್ಲಿ ಗಿರೀಶ (26) ಎಂಬುವವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಗಿರೀಶ ಕುರಿ ಮೇಯಿಸಲು ತೆರಳಿದ್ದರು. 11 ಸಾವಿರ ಕೆ.ವಿ. ವಿದ್ಯುತ್‌ ಶಕ್ತಿ ಕಂಬದ ತಂತಿ ಪಕ್ಕದಲ್ಲಿಯೇ ಬಿದ್ದಿದ್ದು ಶಾಕ್‌ ಹೊಡೆದು, ಗಿರೀಶ್‌ ಮೃತಪಟ್ಟಿದ್ದಾರೆ. ಲೈನ್‌ ಮ್ಯಾನ್‌, ಮೇಸ್ತ್ರಿ ಮತ್ತು ಸಹಾಯಕ ಇಂಜಿನಿಯರ್‌ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗಿರೀಶ್‌ ಪತ್ನಿ ಆರೋಪಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- ಚಕ್ರಕ್ಕೆ ಸೀರೆ ಸಿಲುಕಿದೆ ಅಂದರು, ಬೈಕ್ ಸ್ಲೋ ಮಾಡ್ತಿದ್ದಂತೆ ಮಹಿಳೆಯರಿಗೆ ಶಾಕ್‌, 2 ತಿಂಗಳ ಬಳಿಕ ಕೇಸ್‌

Leave a Comment