ಶಿವಮೊಗ್ಗದ ಕಾರು ಶೋ ರೂಂಗೆ ಉದ್ಯೋಗಿಯಿಂದಲೇ ಲಕ್ಷ ಲಕ್ಷ ವಂಚನೆ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 9 DECEMBER 2023

SHIMOGA : ನಗರದ ಶಂಕರ ಮಠ ರಸ್ತೆಯಲ್ಲಿರುವ ಪ್ರಮುಖ ಕಾರು ಶೋ ರೂಂ ಒಂದರ ವಿಮಾ ವಿಭಾಗದ ಗುಮಾಸ್ತನ ವಿರುದ್ಧ 13.72 ಲಕ್ಷ ರೂ. ವಂಚನೆ ಪ್ರಕರಣ ದಾಖಲಾಗಿದೆ.

ವಿಮಾ ಪಾಲಿಸಿ ನವೀಕರಣಕ್ಕೆ ಕಾರು ಶೋ ರೂಂನ ವಿವಿಧ ಶಾಖೆಗಳಲ್ಲಿ ಸಂಗ್ರಹವಾಗುವ ಹಣವನ್ನು ಸೇಲ್ಸ್‌ ಎಗ್ಸಿಕ್ಯೂಟಿವ್‌ಗಳು ಗುಮಾಸ್ತನ ಬಳಿ ತಂದು ಕೊಡುತ್ತಿದ್ದರು. ಇದನ್ನು ಕೌಂಟರ್‌ನಲ್ಲಿ ಪಾವತಿಸುವ ಜವಾಬ್ದಾರಿ ಆತ ನಿರ್ವಹಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

2021ರ ಜುಲೈ  1ರಿಂದ 2023ರ ಆಗಸ್ಟ್‌ 26ರವರೆಗೆ ತೀರ್ಥಹಳ್ಳಿ ಮತ್ತು ಎನ್‌.ಆರ್‌.ಪುರ ಶಾಖೆಗಳ ಹಣದಲ್ಲಿ 13.72 ಲಕ್ಷ ರೂ. ಹಣವನ್ನು ಕೌಂಟರ್‌ಗೆ ಪಾವತಿಸದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಕಾರು ಶೋ ರೂಂನ ವಿಮಾ ವಿಭಾಗದ ಮುಖ್ಯಸ್ಥ ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ – ಸಕ್ರೆಬೈಲು ಸಮೀಪ ಕೆಟಿಎಂ ಬೈಕ್‌ ಅಪಘಾತ, ಶಿವಮೊಗ್ಗದ ಕಾಲೇಜು ವಿದ್ಯಾರ್ಥಿನಿ ತಲೆಗೆ ಪೆಟ್ಟು

Leave a Comment