SHIVAMOGGA LIVE NEWS | 29 JANUARY 2024
SHIMOGA : ಗೇಟ್ ವೇ ಕ್ಯಾಟ್ ಕ್ಲಬ್‌ನಿಂದ ನಗರ ಸೇಕ್ರೆಡ್ ಹಾರ್ಟ್ ಚರ್ಚ್ ಸಮುದಾಯ ಭವನದಲ್ಲಿ ರಾಜ್ಯಮಟ್ಟದ ಕ್ಯಾಟ್ ಶೋ ಆಯೋಜಿಸಲಾಗಿತ್ತು. ಜಿಲ್ಲೆ ಮತ್ತು ಹೊರ ಜಿಲ್ಲೆಯ ಐವತ್ತಕ್ಕೂ ಹೆಚ್ಚು ಬೆಕ್ಕುಗಳು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಪರ್ಶಿಯನ್ ಕ್ಯಾಟ್, ಎಕ್ಸೋಟಿಕ್ ಶಾರ್ಟ್ ಹೇರ್ ಹಿಮಾಲಯ, ಟ್ರೆಡೀಷನಲ್ ಲಾಂಗ್ ಹೇರ್, ಚೆರತೆ ಬೆಕ್ಕು ಸೇರಿದಂತೆ ವಿವಿಧ ತಳಿಯ ಬೆಕ್ಕುಗಳನ್ನು ಪ್ರದರ್ಶನಕ್ಕೆ ತರಲಾಗಿತ್ತು. ಬೆಕ್ಕುಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ವಿವಿಧ ಸ್ಪರ್ಧೆಗಳನ್ನು ಕೂಡ ನಡೆಸಲಾಯಿತು.
ನಾನಾ ತಳಿಯ ಬೆಕ್ಕುಗಳನ್ನು ಕಂಡು ಸಾರ್ವಜನಿಕರು ಅವುಗಳ ಕುರಿತು ಮಾಹಿತಿ ಪಡೆದರು. ಅವುಗಳ ಜೊತೆಗೆ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 3 ಲಕ್ಷ ರೂ. ಮೌಲ್ಯದ ಚಿರತೆ ಬೆಕ್ಕು ಎಲ್ಲರ ಆಕರ್ಷಣೆಯಾಗಿತ್ತು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ, ಹೊಸ ಡಿಸಿ ಯಾರು? ಇಲ್ಲಿದೆ ಅವರ ಕುರಿತ 3 ಪ್ರಮುಖಾಂಶ





