ಶಿವಮೊಗ್ಗ: ಅಂಬಾರಿ ಸಹಿತ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ್ದ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಂತಪ್ಪ ಅವರು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 56 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ತನಿಖಾ ವರದಿಯಲ್ಲಿ ಏನಿದೆ?
ಹಲವು ಛಾಯಾಚಿತ್ರ ಮತ್ತು ವಿಡಿಯೋ ತುಣಕುಗಳನ್ನು ಪರಿಶೀಲಿಸಲಾಗಿದೆ. ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರ ನಡಿಗೆ ನಿಧಾನವಾಗಿದೆ. ಆಗ ಸೋಮಣ್ಣ ಆನೆಯ ನಡಿಗೆ ನಿಧಾನವಾಯಿತು, ಬಳಿಕ ಅದು ಪಕ್ಕಕ್ಕೆ ತಿರುಗಿ ಹಿಂದೆ ಬರುತ್ತಿದ್ದ ಸಹಪಾಠಿಗಳನ್ನು ಆನೆಗಳನ್ನು ನೋಡಿತು. ಇದ್ದಕ್ಕಿದ್ದಂತೆ ಆತಂಕ, ಗಾಬರಿಯಿಂದ ಓಡಿತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಕ್ಕೆ ಪೂರಕವಾಗಿ ಒಂದಷ್ಟು ಫೋಟೊಗಳನ್ನು ಮಾರ್ಕ್ ಮಾಡಿ ವರದಿಯಲ್ಲಿ ಸೇರಿಸಲಾಗಿದೆ.

ಎಲ್ಲವು ಸರಿಯಾಗಿಯೇ ಇತ್ತು
ರಿಪೋರ್ಟ್‌ನಲ್ಲಿ ದಸರಾ ಮೆರವಣಿಗೆಗೆ ಆನೆಗಳನ್ನು ಒದಗಿಸುವ ಕುರಿತು ಸರ್ಕಾರ ಅನುಮತಿ ನೀಡಿದಾಗಿನಿಂದ ನಡೆದ ಎಲ್ಲ ಬೆಳವಣಿಗೆ, ತಾಲೀಮು, ಆಹಾರದ ಕುರಿತು ಮಾಹಿತಿ ನೀಡಲಾಗಿದೆ. ಒಟ್ಟು 12 ಪಾಯಿಂಟ್‌ಗಳಲ್ಲಿ ಎಲ್ಲವನ್ನು ವಿವರಿಸಲಾಗಿದೆ.
ಯಾರದ್ದೂ ತಪ್ಪಿಲ್ಲ, ಯಾರೂ ಹೊಣೆಗಾರರಲ್ಲ
ಅಂಬಾರಿ ಹೊತ್ತ ಸೋಮಣ್ಣ ಅನೆ ದಿಗಿಲುಗೊಂಡು ದಿಕ್ಕಾಪಾಲಾಗಿ ಓಡಿದ ಪ್ರಕರಣ ಸಂಬಂಧ ಸಾರ್ವಜನಿಕ ವಲಯದಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿವೆ. ಅಧಿಕಾರಿಗಳು ದಿಢೀರ್ ನಿರ್ಧಾರಗಳು, ಏಕಪಕ್ಷೀಯ ಆರ್ಡರ್‌ಗಳು ವಿಡಿಯೋದಲ್ಲಿ ಸೆರೆಯಾಗಿ ಚರ್ಚೆಗಳು ನಡೆಯುತ್ತಿವೆ. ವಿವಿಧ ಸಂಘಟನೆಗಳು ಕೂಡ ಅಧಿಕಾರಿಗಳ ನಡೆ ಖಂಡಿಸಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಹೀಗಿದ್ದು ಸಿಸಿಎಫ್ ನೀಡಿದ ವರದಿಯಲ್ಲಿ ಎಲ್ಲರಿಗು ರಿಲೀಫ್ ನೀಡಲಾಗಿದೆ. ಎಲ್ಲವನ್ನು ಆನೆಯ ಮೇಲೆ ಹೊರಿಸಿ ಕೈತೊಳೆದುಕೊಳ್ಳಲಾಗಿದೆ.