ಶಿವಮೊಗ್ಗ: ವರ್ಷದಿಂದ ವರ್ಷಕ್ಕೆ ಶಿವಮೊಗ್ಗ ದಸರಾ ಮೆರಗು ಪಡೆದುಕೊಳ್ಳುತ್ತಿದೆ. ದಸರಾದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಿನಿಮಾ ನಟ, ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಾರಿ ದಸರಾ ಉದ್ಘಾಟನೆಗೆ ನಟ ಶ್ರೀನಾಥ್ ಆಗಮಿಸುತ್ತಿದ್ದಾರೆ. ಯುವ ದಸರಾದ ಮುಖ್ಯ ಅತಿಥಿಗಳಾಗಿ ನಟರಾದ ರವಿಚಂದ್ರನ್, ಸಾಧು ಕೋಕಿಲ ಬರತ್ತಿದ್ದಾರೆ.
ಈ ಬಾರಿ ವಿವಿಧ ಕಾರ್ಯಕ್ರಮಕ್ಕೆ ಕಿರುತೆರೆ ಮತ್ತು ಸಿನಿಮಾ ಕಲಾವಿದರು ಆಗಮಿಸುತ್ತಿದ್ದಾರೆ. ಯಾವೆಲ್ಲ ಕಾರ್ಯಕ್ರಮಕ್ಕೆ ಯಾರೆಲ್ಲ ಆಗಮಿಸುತ್ತಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ನಟ ಶ್ರೀನಾಥ್: ಅ.11ರಂದು ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ 2026ಕ್ಕೆ ಚಾಲನೆ ನೀಡಲಿದ್ದಾರೆ.
ಹಿರಿಯ ನಟಿ ಅಭಿನಯ, ಸರಿಗಮಪ ಗಾಯಕಿ ಸುರಕ್ಷಾ ದಾಸ್: ಅ.13ರಂದು ಬೆಳಿಗ್ಗೆ 10.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ಮಹಿಳಾ ದಸರಾ ಉದ್ಘಾಟನೆ ಕಾರ್ಯಕ್ರಮ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟಿ ಸಂಗೀತಾ ಅನಿಲ್: ಅ.14ರಂದು ಬೆಳಿಗ್ಗೆ 10 ಗಂಟೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಚಲನಚಿತ್ರ ದಸರಾ ಉದ್ಘಾಟನೆ ಕಾರ್ಯಕ್ರಮ. ಇದೇ ಕಾರ್ಯಕ್ರಮದಲ್ಲಿ ಕಲಾವಿದರಾದ ಗಾರ್ಗಿ ಕಾರೇಹಕ್ಲು, ಚಂದ್ರಶೇಖರ ಶಾಸ್ತ್ರಿ, ಚಂದ್ರಶೇಖರ ಹಿರೇಗೋಣಿಗೆರೆ, ದಾನಮ್, ಶಿವಮೊಗ್ಗ ರಾಮಣ್ಣ, ಸಿನಿಮಾ ಸಂಘಟಕ ರಘು ಗುಂಡ್ಲು ಅವರನ್ನು ಅಭಿನಂದಿಸಲಾಗುತ್ತಿದೆ.
ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್ ಶ್ರೀನಾಥ್: ಅ.14ರಂದು ಬೆಳಿಗ್ಗೆ 11 ಗಂಟೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಚಲನಚಿತ್ರ ದಸರಾದಲ್ಲಿ ಪ್ರತಿಬಿಂಬ – ಮಲೆನಾಡಿನ ಪ್ರತಿಭೆಗಳು ನಿರ್ಮಿಸಿದ ಹತ್ತು ಕಿರುಚಿತ್ರಗಳ ಹಬ್ಬ ಮತ್ತು ಸಂವಾದ.
ಸರಿಗಮಪ ಗಾಯಕಿ ಕೀರ್ತಿ.ಎಸ್: ಅ.15ರಂದು ಸಂಜೆ 5 ಗಂಟೆಗೆ ಅಲ್ಲಮಪ್ರಭು ಮೈದಾನದಲ್ಲಿ ಮಕ್ಕಳ ದಸರಾ ಕಾರ್ಯಕ್ರಮ.
ಮಿಮಿಕ್ರಿ ಗೋಪಿ: ಅ.15ರಂದು ಸಂಜೆ 6 ಗಂಟೆಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಕಲಾ ದಸರಾ ಹಾಸ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ.
ನಟ ಆತೀಶ್ ಎಸ್.ಶೆಟ್ಟಿ: ಅ.17ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಕಲಾ ಮತ್ತು ಜ್ಞಾನ ದಸರಾ ಕಾರ್ಯಕ್ರಮ.
ನಟಿ ಪದ್ಮಾ ವಾಸಂತಿ: ಅ.18ರಂದು ಸಂಜೆ 5.30ಕ್ಕೆ ಅಲ್ಲಮ ಪ್ರಭು ಮೈದಾನದಲ್ಲಿ ಉತ್ತಿಷ್ಠತ ಜಾಗ್ರತ ಹಾಗೂ ಭಕ್ತಿ ಝೇಂಕಾರ ಕಾರ್ಯಕ್ರಮ.
ನಟ, ನಿರ್ದೇಶಕ ಪೃಥ್ವಿ ಅಂಬಾರ್: ಅ.19ರಂದು ಸಂಜೆ 5.30ಕ್ಕೆ ಅಲ್ಲಮಪ್ರಭು ಮೈದಾನದಲ್ಲಿ ನಾಟ್ಯ ವೈಭವ ಮತ್ತು ಜಾನಪದ ವೈಭವ ಕಾರ್ಯಕ್ರಮ.
ನಟರಾದ ರವಿಚಂದ್ರನ್, ಸಾಧು ಕೋಕಿಲ: ಅ.20ರಂದು ಸಂಜೆ 5 ಗಂಟೆಗೆ ಅಲ್ಲಮ ಪ್ರಭು ಮೈದಾನದಲ್ಲಿ ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ.
ಗಾಯಕಿ ಸುರೇಖಾ ಹೆಗಡೆ: ಅ.21ರಂದು ಅಲ್ಲಮಪ್ರಭು ಮೈದಾನದಲ್ಲಿ ಸಂಜೆ 4 ಗಂಟೆಗೆ ಸಂಗೀತ ಸೀಮೋಲ್ಲಂಘನ ಕಾರ್ಯಕ್ರಮ.