ಗಾಂಧಿ ಬಜಾರ್‌ ಚಿನ್ನದ ಅಂಗಡಿ ಸ್ಟಾಕ್‌ ಚೆಕ್‌ ವೇಳೆ ಮಾಲೀಕನಿಗೆ ಶಾಕ್, ಸಿಸಿಟಿವಿ ಪರಿಶೀಲಿಸಿದಾಗ ಕಾದಿತ್ತು ಆಘಾತ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 24 APRIL 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಆಭರಣದ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು 21 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿ ಸ್ಟಾಕ್‌ ಚೆಕ್‌ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯರು ಚಿನ್ನದ ಸರ ಕಳವು ಮಾಡಿರುವುದು ಸ್ಪಷ್ಟವಾಗಿದೆ.

ಸರ ಕೇಳಿದರು, ಮೂಗುತಿ ಖರೀದಿಸಿದರು

ಗಾಂಧಿ ಬಜಾರ್‌ನ ಜುವೆಲ್ಲರಿ ಅಂಗಡಿಯೊಂದರಲ್ಲಿ ಚಿನ್ನದ ಸರ ಖರೀದಿಗೆ 60 ವರ್ಷ ಮತ್ತು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಬಂದಿದ್ದರು. ಅಂಗಡಿ ಮಾಲೀಕ ಲೋಕೇಶ್‌ ಅವರು ಮಹಿಳೆಯರಿಗೆ ಚಿನ್ನದ ಸರವಿದ್ದ ಟ್ರೇ ತೆಗೆದು ತೋರಿಸುತ್ತಿದ್ದರು. ಈ ವೇಳೆ ಮತ್ತೊಬ್ಬ ಗ್ರಾಹಕರು ಬಂದಿದ್ದು ಮಾಲೀಕ ಲೋಕೇಶ್‌ ಅವರತ್ತ ಗಮನ ಹರಿಸಿದರು. ಈ ಸಂದರ್ಭ ಇಬ್ಬರು ಮಹಿಳೆಯರು ಚಿನ್ನದ ಸರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸರ ಖರೀದಿಗೆ ಬಂದ ಮಹಿಳೆಯರು ಕೊನೆಗೆ ಮೂಗುತಿ ಖರೀದಿಸಿ ತೆರಳಿದ್ದರು.

ಸ್ಟಾಕ್‌ ಚೆಕ್‌, ಸಿಸಿಟಿವಿ ಪರಿಶೀಲನೆ

ಎರಡು ದಿನದ ಬಳಿಕ ಅಂಗಡಿಯ ಸ್ಟಾಕ್‌ ಚೆಕ್‌ ವೇಳೆ ಟ್ರೇನಲ್ಲಿ ಚಿನ್ನದ ಸರ ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸಿಸಿಟಿವಿ ಪರಿಶೀಲಿಸಿದಾಗ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು 1.50 ಲಕ್ಷ ರೂ. ಮೌಲ್ಯದ 21.830 ಗ್ರಾಂ ತೂಕದ ಬಂಗಾರದ ಸರ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಜುವೆಲ್ಲರಿ ಶಾಪ್‌ನ ಮಾಲೀಕ ಲೋಕೇಶ್‌ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment