ಚಕ್ರಕ್ಕೆ ಸೀರೆ ಸಿಲುಕಿದೆ ಅಂದರು, ಬೈಕ್ ಸ್ಲೋ ಮಾಡ್ತಿದ್ದಂತೆ ಮಹಿಳೆಯರಿಗೆ ಶಾಕ್‌, 2 ತಿಂಗಳ ಬಳಿಕ ಕೇಸ್‌

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 27 OCTOBER 2023

SHIMOGA : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯರ ಗಮನ ಬೇರೆಡೆ ಸೆಳೆದು ಮಾಂಗಲ್ಯ ಸರ ಕಳ್ಳತನ (Chain Theft) ಮಾಡಲಾಗಿದೆ. ಎರಡು ತಿಂಗಳ ಬಳಿಕ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೈರ್‌ಗೆ ಸೀರೆ ಸಿಲುಕಿದೆ..!’

ಆಲ್ಕೊಳದ ನಂದಾ ಅವರು ತಮ್ಮ ಅತ್ತೆ ಚಂದ್ರಪ್ರಭಾ ಅವರನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ಸಂಬಂಧಿಯೊಬ್ಬರ ಮನೆಯಿಂದ ತಮ್ಮ ಮನೆಗೆ ಮರಳುತ್ತಿದ್ದರು. ವಿನೋಬನಗರದ ಕಟ್ಟೆ ಸುಬ್ಬಣ್ಣ ಬಸ್‌ ನಿಲ್ದಾಣದ ಬಳಿ ಇವರ ಬೈಕಿನ ಹಿಂಬದಿಯಲ್ಲಿ ಮತ್ತೊಂದು ಬೈಕಿನಲ್ಲಿ ಇಬ್ಬರು ಬರುತ್ತಿದ್ದರು. ನಂದಾ ಅವರ ಬೈಕ್‌ ಬಳಿ ಬಂದು ಹಿಂಬದಿ ಕುಳಿತಿರುವವರ ಸೀರೆ ಚಕ್ರಕ್ಕೆ ಸಿಲುಕಿದೆ ಎಂದು ತಿಳಿಸಿದರು. ಕೂಡಲೆ ನಂದಾ ಅವರು ತಮ್ಮ ಬೈಕ್‌ ವೇಗ ತಗ್ಗಿಸಿದ್ದಾರೆ. ಯುವಕರ ಬೈಕಿನಲ್ಲಿ ಹಿಂಬದಿ ಕುಳಿತಿದ್ದವನು ಕೆಳಗಿಳಿದು ಬಂದು ಚಂದ್ರಪ್ರಭಾ ಅವರ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.

ತಡವಾಗಿ ದಾಖಲಾಯ್ತು ಕೇಸ್‌

ಚಂದ್ರಪ್ರಭಾ ಅವರ ಕೊರಳಲ್ಲಿ 75-80 ಗ್ರಾಂ ತೂಕದ ಬಂಗಾರದ ತಾಳಿ ಸರವಿತ್ತು. ಇದರ ಮೌಲ್ಯ 2.65 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆಗಸ್ಟ್‌ 16ರಂದು ಘಟನೆ ಸಂಭವಿಸಿದೆ. ಕುಟುಂಬದವರೊಂದಿಗೆ ಚರ್ಚೆಸಿ ಈಗ ದೂರು ನೀಡಲಾಗಿದೆ. ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಹಿಂಬದಿಯಿಂದ ಬಂದು ವಿದ್ಯಾರ್ಥಿನಿ ಕೊರಳಿಗೆ ಕೈ ಹಾಕಿದ ಅಪರಿಚಿತ, ಕಳ್ಳ ಕಳ್ಳ ಎಂದು ಕೂಗಿಕೊಳ್ಳುವಷ್ಟರಲ್ಲಿ ಮಾಯ

Leave a Comment