ಶಿವಮೊಗ್ಗದ ತುಂಗಾ ನದಿ ಸೇತುವೆಗಳಿಗೆ ಜಾಲರಿ ಅಳವಡಿಕೆ, ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 28 MARCH 2024

SHIMOGA : ತುಂಗಾ ನದಿಗೆ ಕಸ ಎಸೆದು ಮಲಿನಗೊಳಿಸುವುದನ್ನು ತಡೆಯಲು ಮಹಾನಗರ ಪಾಲಿಕೆ ವತಿಯಿಂದ ಸೇತುವೆಗಳಿಗೆ ಮೆಷ್‌ ಅಳವಡಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ಮೆಷ್‌ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ.

Mesh for Tunga River Bridge in Shimoga

ನಗರದ ಹೊಳೆ ಬಸ್‌ ನಿಲ್ದಾಣದ ಬಳಿ ಇರುವ ಹೊಸ ಸೇತುವೆಗೆ ಈಗಾಗಲೆ ಮೆಷ್‌ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ.

ಮೆಷ್‌ ಅಳವಡಿಕೆಗೆ ಕಾರಣವೇನು?

ತುಂಗಾ ನದಿಗೆ ನಿತ್ಯ ತ್ಯಾಜ್ಯ ಎಸೆಯಲಾಗುತ್ತಿದೆ. ಮಾಂಸದ ಅಂಗಡಿಗಳ ತ್ಯಾಜ್ಯ, ಮೆಡಿಕಲ್‌ ವೇಸ್ಟ್‌, ದೇವರ ಪೂಜಾ ಸಾಮಾಗ್ರಿ, ಮನೆ ಕಸವನ್ನೆಲ್ಲ ತಂದು ಕೆಲವರು ತುಂಗಾ ನದಿಗೆ ಸುರಿಯುತ್ತಿದ್ದಾರೆ. ಇದರಿಂದ ತುಂಗಾ ನದಿ ಮಲಿನಗೊಳ್ಳುತ್ತಿದೆ. ಇನ್ನು, ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದು ಅಥವಾ ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ತುಂಗಾ ನದಿಯ ನಾಲ್ಕು ಸೇತುವೆಗಳಿಗೆ ಮೆಷ್‌ ಅಳವಡಿಸಲಾಗುತ್ತಿದೆ.

ಪಾಲಿಕೆ ಸಭೆಯಲ್ಲಿ ಮೆಷ್‌ಗೆ ಸಲಹೆ

ತುಂಗಾ ನದಿ ಮಲಿನಗೊಳ್ಳುತ್ತಿರುವ ಕುರಿತು ಮಹಾನಗರ ಪಾಲಿಕೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿತ್ತು. ನದಿಗೆ ಕಸ ಸೇರದಂತೆ ತಡೆಯಲು ಮೆಷನ್‌ ಅಳವಡಿಸಬೇಕು ಎಂದು ಶಾಸಕ ಎಸ್‌.ಎನ್.ಚನ್ನಬಸಪ್ಪ ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದ್ದರು. ಅದರಂತೆ ಪಾಲಿಕೆ ಆಡಳಿತ ಈಗ ಮೆಷ್‌ ಅಳವಡಿಸುತ್ತಿದೆ. ಚೈನ್‌ ಲಿಂಕ್‌ ಮೆಷ್‌ ಮತ್ತು ತುಂಗಾ ನದಿ ಸ್ವಚ್ಛತೆಗೆ ಅಗತ್ಯವಿರುವ ಸ್ಲೋಗನ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದ್ದಾರೆ.

Mesh for Tunga River Bridge in Shimoga

Mesh for Tunga River Bridge in Shimoga

ಇದನ್ನೂ ಓದಿ – ಶಿವಮೊಗ್ಗದ ಗಾಂಧಿ ಬಜಾರ್‌, ಹೊಸನಗರದ ತೋಟದ ಮನೆ ಮೇಲೆ ಬೆಂಗಳೂರು ಲೋಕಾಯುಕ್ತರಿಂದ ದಾಳಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment