ಶಿವಮೊಗ್ಗದಲ್ಲಿ ಸರ್ಕಾರಿ ಕಚೇರಿಯ ಕಂಪ್ಯೂಟರ್, ಚೇರು, ಟೇಬಲ್ ಜಪ್ತಿ, ಕಾರಣವೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 19 JANUARY 2023

SHIMOGA | ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಕಂಪ್ಯೂಟರ್, ಪೀಠೋಪಕರಣಗಳನ್ನು ಜಪ್ತಿ (Seize) ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆ ಜಪ್ತಿ ಕಾರ್ಯ ನಡೆಸಲಾಯಿತು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Chair-Table-Computer-Seized-in-Shimoga

ಶಿವಮೊಗ್ಗ ತಾಲೂಕು ಕಚೇರಿ ಕಟ್ಟಡದಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಇದೆ. ಇಲ್ಲಿನ 5 ಕುರ್ಚಿ, 5 ಕಂಪ್ಯೂಟರ್, 2 ಟೇಬಲ್ ಜಪ್ತಿ (Seize) ಮಾಡಲಾಗಿದೆ.

ಜಪ್ತಿಗೆ ಕಾರಣವೇನು?

ತುಂಗಾ ಮೇಲ್ದಂಡೆ ಯೋಜನೆಗಾಗಿ 1997ರಲ್ಲಿ ರೈತರಿಂದ ಜಮೀನು ಪಡೆಯಲಾಗಿತ್ತು. ಎಕರೆಗೆ 3 ಲಕ್ಷ ರೂ. ನೀಡುವುದಾಗಿ ಆಗ ತಿಳಿಸಲಾಗಿತ್ತು. ಆದರೆ ಹಲವು ರೈತರಿಗೆ ಪರಿಹಾರ ನೀಡಿಲ್ಲ. ಗಾಡಿಕೊಪ್ಪದ ವೆಂಕಟೇಶ್ ಅವರು ಸರ್ವೆ ನಂಬರ್ 75ರಲ್ಲಿ 5 ಎಕರೆ ಜಮೀನನ್ನು ಯೋಜನೆಗಾಗಿ ಬಿಟ್ಟು ಕೊಟ್ಟಿದ್ದರು.

‘ನೀರಾವರಿ ಇಲಾಖೆ ಅರ್ಧದಷ್ಟು ಜನರಿಗೆ ಪರಿಹಾರ ನೀಡಿಲ್ಲ. ಪರಿಹಾರ ವಿಳಂಬ ಮಾಡಿದ್ದರಿಂದ ಹೊಸ ದರದಂತೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆವು. ಹೆಚ್ಚಿನ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದ್ದರೂ ಅಧಿಕಾರಿಗಳು ವಿಳಂಬ ಮಾಡಿದ್ದಾರೆ’ ಎಂದು  ಗಾಡಿಕೊಪ್ಪದ ವೆಂಕಟೇಶ್ ಅವರು ಆರೋಪಿಸಿದರು.

Office Japthi in Shimoga

ಹೈಕೋರ್ಟಿಗೆ ಮೇಲ್ಮನವಿ

‘ವೆಂಕಟೇಶ್ ಅವರ ಪ್ರಕರಣದಲ್ಲಿ ಪ್ರತಿ ಚದರ ಅಡಿಗೆ 105 ರೂ. ನಂತೆ ಒಟ್ಟು 2.40 ಕೋಟಿ ರೂ. ಪರಿಹಾರ ನೀಡುವಂತೆ ಜಪ್ತಿ ಆದೇಶದಲ್ಲಿ ತಿಳಿಸಲಾಗಿದೆ. ಈ ಮೊತ್ತ ಹೆಚ್ಚಾಗಿದೆ ಎಂದು ಕಚೇರಿಯಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ. ತಡೆಯಾಜ್ಞೆ ಪ್ರತಿ ಸಿಕ್ಕಿಲ್ಲ. ನೀರಾವರಿ ನಿಗಮ ಹಣ ಬಿಡುಗಡೆ ಮಾಡಿದಲ್ಲಿ ಅದನ್ನು ನ್ಯಾಯಾಲಯಕ್ಕೆ ಜಮೆ ಮಾಡಲಿದ್ದೇವೆ’ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಉಸ್ತುವಾರಿ ವ್ಯವಸ್ಥಾಪಕ ಸತೀಶ್ ತಿಳಿಸಿದರು.

Shimoga Live 3 Million Views

ಪರಿಹಾರ ವಿತರಣೆ ವಿಳಂಬ ಮಾಡಿದರಿಂದ ಪೀಠೋಪಕರಣ, ಕಂಪ್ಯೂಟರ್ ಗಳ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಅಧಿಕಾರಿಗಳು ತುಂಗಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಗಳನ್ನು ವಶಕ್ಕೆ ಪಡೆದರು.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ದಿನಾಂಕ ಫೈನಲ್, ಕಾಮಗಾರಿ ಪರಿಶೀಲಿಸಿದ ಮಾಜಿ ಸಿಎಂ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment