ಶಿವಮೊಗ್ಗದಲ್ಲಿ ಯುವ ನಿಧಿ ಉದ್ಘಾಟನೆ ಆಗ್ತಿದ್ದಂತೆ ಕಾರ್ಯಕ್ರಮದಲ್ಲಿ ಚೇರುಗಳು ಖಾಲಿ, ಖಾಲಿ, ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 12 JANUARY 2024

SHIMOGA : ಯುವನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿತ್ತು. ಅದರಂತೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು, ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುವ ಹೊತ್ತಿಗೆ ಊಟದ ಸಮಯವಾಗಿತ್ತು.

ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಪೆಂಡಾಲ್‌ನ ಅಡಿ ಕುಳಿತಿದ್ದರು. ಸಂಗೀತ ಕಾರ್ಯಕ್ರಮದ ವೇಳೆ ಕುಣಿದು ಕಪ್ಪಳಿಸಿದ್ದ ಸುಸ್ತಾಗಿದ್ದರು. ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯವಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳ ಗಮನ ಊಟದ ಕೌಂಟರ್‌ನತ್ತ ಹರಿಯಿತು.

ಇದನ್ನೂ ಓದಿ – ಕೇಸರಿ ಶಾಲು ಧರಿಸಿ ಕಾಂಗ್ರೆಸ್‌ ಮುಖಂಡರ ಮಧ್ಯೆ ಕುಳಿತ ಬಿಜೆಪಿ ನಾಯಕರು

ಹಸಿವಿನಿಂದ ಒದ್ದಾಡುತ್ತಿದ್ದ ವಿದ್ಯಾರ್ಥಿಗಳು, ಊಟದ ವ್ಯವಸ್ಥೆಯಾಗುತ್ತಿದ್ದಂತೆ ಒಬ್ಬೊಬ್ಬರೆ ಎದ್ದು ಪೆಂಡಾಲ್‌ನಿಂದ ಹೊರ ನಡೆದರು. ಮುಖ್ಯ ಪೆಂಡಾಲ್‌ನ ಪಕ್ಕದಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಮುಗಿಸಿ ಕಾರ್ಯಕ್ರಮಕ್ಕೆ ಮರಳುವ ಬದಲು ತಮ್ಮ ಬಸ್ಸುಗಳನ್ನು ಅರಸುತ್ತ ಫ್ರೀಡಂ ಪಾರ್ಕ್‌ನಿಂದ ಹೊರ ನಡೆದರು. ಅವರೊಂದಿಗೆ ಬಂದಿದ್ದ ಉಪನ್ಯಾಸಕರು ಅನಿವಾರ್ಯವಾಗಿ ವಿದ್ಯಾರ್ಥಿಗಳನ್ನು ಹಿಂಬಾಲಿಸಬೇಕಾಯಿತು. ಇದರಿಂದ ಕಾರ್ಯಕ್ರಮದಲ್ಲಿ ಚೇರುಗಳು ಖಾಲಿ ಖಾಲಿ ಕಂಡವು. ಇದು ಕಾಂಗ್ರೆಸ್ಸಿಗರಿಗೆ ಕಸಿವಿಸಿ ಉಂಟು ಮಾಡಿತು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment