ಶಿವಮೊಗ್ಗದ ಚನ್ನಪ್ಪ ಲೇಔಟ್‌ ರಸ್ತೆ ಸೀಲ್ ಡೌನ್, ಮೂರು ಕಡೆ ಬ್ಯಾರಿಕೇಡ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜೂನ್ 2020

ವ್ಯಕ್ತಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಶಿವಮೊಗ್ಗದ ಚನ್ನಪ್ಪ ಲೇಔಟ್‍ನ ಅಡ್ಡರಸ್ತೆಯೊಂದನ್ನು ಸೀಲ್ ಡೌನ್ ಮಾಡಲಾಗಿದೆ. ಮೂರು ಕಡೆ ಬ್ಯಾರಿಕೇಡ್ ಹಾಕಲಾಗಿದೆ.

https://www.facebook.com/liveshivamogga/videos/604662430446731/?t=1

ಚನ್ನಪ್ಪ ಲೇಔಟ್‍ನ ಎರಡನೇ ಪ್ಯಾರಲಲ್ ಅಡ್ಡರಸ್ತೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. ಹಾಗಾಗಿ ರಸ್ತೆಯನ್ನು ಬಂದ್ ಮಾಡಲಾಗಿದ್ದು, ಮನೆಯಿಂದ ಯಾರೂ ಹೊರ ಬಾರದಂತೆ ಮೈಕ್ ಮೂಲಕ ಅನೌನ್ಸ್ ಮಾಡಲಾಗುತ್ತಿದೆ.

ಏರಿಯಾ ಬಿಟ್ಟ ಜನ

ಮತ್ತೊಂದೆಡೆ ರಸ್ತೆ ಸೀಲ್‍ ಡೌನ್ ಆಗುವುದು ಗೊತ್ತಾಗುತ್ತಿದ್ದಂತೆ ಕೆಲವರು ಮನೆ ಖಾಲಿ ಮಾಡಿ ತೆರಳುತ್ತಿದ್ದಾರೆ. ಲಗೇಜ್ ಪ್ಯಾಕ್ ಮಾಡಿಕೊಂಡು, ಸಂಬಂಧಿಗಳು, ಸ್ನೇಹಿತರ ಮನೆಗೆ ತೆರಳಿದರು.

104490573 1152448941783191 7352127499974442766 n.jpg? nc cat=102& nc sid=110474& nc ohc=CEbWqsNR14MAX8meiSI& nc ht=scontent.fblr11 1

ಮನೆಯಲ್ಲಿರುವವರ ಮಾಹಿತಿ ಸಂಗ್ರಹ

ಮತ್ತೊಂದೆಡೆ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಈ ರಸ್ತೆಯಲ್ಲಿರುವ ಎಲ್ಲ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇವರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಇನ್ನು, ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment