ಶಿವಮೊಗ್ಗ ಲೈವ್.ಕಾಂ | SHIMOGA NEWS | 3 JUNE 2021
ಕಳೆದ ವರ್ಷದ ಲಾಕ್‌ಡೌನ್ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಕುಕ್ಕೋಟೋದ್ಯಮ ಮತ್ತೆ ಸಂಕಷ್ಟಕ್ಕೆ ಒಳಗಾಗಿದೆ. ಖರೀದಿ ಅವ ಸೀಮಿತವಾಗಿರುವುದರಿಂದ ವ್ಯಾಪಾರವೂ ಇಲ್ಲದೇ ಮಾರಾಟವೂ ಇಲ್ಲದೇ ದಿನಕ್ಕೆ ಲಕ್ಷ ಲಕ್ಷ ನಷ್ಟು ಉಂಟಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
2020ರ ಮಾರ್ಚ್‍ನಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಈ ವೇಳೆ ಚಿಕನ್ ಮೇಲಿನ ವದಂತಿ, ಹಕ್ಕಜರ ಭೀತಿ, ಮಾರಾಟಕ್ಕೆ ಅವಕಾಶವೇ ಇಲ್ಲದ ಕಾರಣ ಕೋಳಿ ಸಾಕಣೆದಾರ ರೈತರು ಲಕ್ಷಾಂತರ ಕೋಳಿಗಳನ್ನು ಜೀವಂತ ಹೂತು ಕೋಟಿ ಕೋಟಿ ನಷ್ಟಮಾಡಿಕೊಂಡರು. ಇಂತಹ ಕಹಿ ಘಟನೆಯಿಂದ ಹೊರಬರುವ ಮುನ್ನವೇ ಮತ್ತೆ ಲಾಕ್‌ಡೌನ್ ಎಫೆಕ್ಟ್ ಕಾಡುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆವರೆಗೂ ಚಿಕನ್ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಂಪೂರ್ಣ ಲಾಕ್‌ಡೌನ್ ಇರುವ ಕಡೆ ಅದೂ ಇಲ್ಲ. ಈ ಅವಯಲ್ಲಿ ಸರದಿ ಸಾಲಿನಲ್ಲಿ ನಿಂತು ಖರೀದಿ ಮಾಡುವ ಹಾಗೂ ಕಷ್ಟದ ಸಮಯದಲ್ಲಿ ಹಣ ಖರ್ಚು ಮಾಡಲು ಜನ ಹಿಂದುಮುಂದು ನೋಡುತ್ತಿದ್ದಾರೆ. ಇದರಿಂದ ಒಟ್ಟಾರೆ ಕೋಳಿ ಮಾರಾಟ, ಸೇವನೆಯಲ್ಲಿ ಶೇ.60ರಷ್ಟು ಕುಸಿತ ಕಂಡಿದೆ.
ರಾಜ್ಯದಲ್ಲಿ ಪ್ರತಿದಿನ 8 ರಿಂದ 10 ಲಕ್ಷ ಕೋಳಿ ಮಾರಾಟವಾಗುತಿತ್ತು. ಭಾನುವಾರದಂದು ಈ ಪ್ರಮಾಣ ಡಬಲ್ ಇರುತಿತ್ತು. ಈಗ ಪ್ರತಿ ದಿನ 4ರಿಂದ 5 ಲಕ್ಷ ಕೋಳಿಗಳು ಮಾರಾಟವಾಗುವುದು ಕಷ್ಟವಿದೆ. ಬರೀ ಬೆಂಗಳೂರು ಒಂದರಲ್ಲಿ ಪ್ರತಿದಿನ ಪ್ರತಿದಿನ ಅಂದಾಜು 16 ಲಕ್ಷ ಕೆ.ಜಿ ಚಿಕನ್ ಮಾರಾಟವಾಗುತಿತ್ತು. ಈಗ ಆ ಪ್ರಮಾಣ 8 ಲಕ್ಷಕ್ಕೆ ಕುಸಿದಿದೆ. ಇದರ ನೇರ ಪರಿಣಾಮ ಕೋಳಿ ಉತ್ಪಾದಕರು ಹಾಗೂ ಚಿಕನ್ ಶಾಪ್ ಮೇಲೆ ಉಂಟಾಗುತ್ತಿದೆ.
ರೈತರಿಗಿಲ್ಲ ಬೆಲೆ
ಒಂದು ಕೆ.ಜಿ ಕೋಳಿ ಉತ್ಪಾದನೆಗೆ (40ರಿಂದ 45 ದಿನ) ಮರಿ, ಆಹಾರ, ಸಿಬ್ಬಂದಿ ಖರ್ಚು ಸೇರಿ 90 ರೂ. ಆಗುತ್ತದೆ. ಪ್ರಸ್ತುತ ಹೋಲ್‌ಸೇಲ್ ಬೆಲೆ ಪ್ರತಿ ಕೆ.ಜಿಗೆ 40ರಿಂದ 45 ರೂ. ಇದೆ. ಆದರೆ ಇದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಚಿಕನ್ ಶಾಪ್‌ಗಳಲ್ಲಿ ಕೆ.ಜಿ 180, 200 ರೂ.ವರೆಗೂ ಇದೆ. ಕಟಾವಿಗೆ ಬಂದ ಕೋಳಿಯನ್ನು ಹೆಚ್ಚೆಂದರೆ ಒಂದು ವಾರ ಇಟ್ಟುಕೊಳ್ಳಬಹುದು ಆಮೇಲೆ ಅದು ಆಹಾರವನ್ನು ದುಪ್ಪಟ್ಟು ಸೇವಿಸುತ್ತದೆ. ತೂಕ ಕೂಡ ಹೆಚ್ಚಾಗುವುದಿಲ್ಲ. ಇದೇ ಕಾರಣಕ್ಕೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಾರಾಟ ಪ್ರಮಾಣ ಕುಸಿದಿರುವುದರಿಂದ ಲಕ್ಷ ಲಕ್ಷ ಕೋಳಿಗಳು ಫಾರಂನಲ್ಲೇ ಇವೆ. ಇದೇ ಪರಿಸ್ಥಿತಿ ಮುಂದುವರೆದರೆ ಕೋಳಿಯನ್ನು ಮತ್ತೆ ಜೀವಂತ ಹೂಳುವ ಆತಂಕವಿದೆ.
ಮಾರಾಟ ಸಮಯ ಹೆಚ್ಚಿಸಿ
ಈಗಿರುವ ಮೂರು ಗಂಟೆ ಮಾರಾಟ ಅವಧಿಯಲ್ಲಿ ಹೆಚ್ಚು ಕೋಳಿಗಳು ಸೇಲ್ ಆಗುತ್ತಿಲ್ಲ. ಹೆಚ್ಚು ಜನ ಸೇರುವ ಭಯದಿಂದ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ಈಗಿರುವ ಮಾರಾಟ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೂ ವಿಸ್ತರಿಸಿದರೆ ಮಾರಾಟ ಪ್ರಮಾಣ ಶೇ.70ಕ್ಕೆ ಹೆಚ್ಚಾಗಬಹುದು. ಇದರಿಂದ ಕೋಳಿ ಸಾಕಣೆದಾರರು ಹಗೂ ಚಿಕನ್ ಶಾಪ್‌ಗಳಿಗೂ ಲಾಸ್ ಆಗುವುದಿಲ್ಲ ಎನ್ನುತ್ತಾರೆ ನಂದೀಶ್ ಫೌಲ್ಟ್ರಿ ಮಾಲೀಕ ದಿನೇಶ ಪಟೇಲ್. ಸರಕಾರಕ್ಕೆ ಪೌಲ್ಟ್ರಿ ಫಾರ್ಮಸ್ಸ್ ಆಸೋಸಿಯೇಷನ್‌ನಿಂದ ಸಮಯ ವಿಸ್ತರಣೆಗೆ ಮನವಿ ಮಾಡಲಾಗಿದೆ. ಸರಕಾರ ಆದಷ್ಟು ಬೇಗ ಮನವಿ ಪರಿಗಣಿಸುವಂತೆ ಸಾಕಣೆದಾರರು ಒತ್ತಾಯಿಸಿದ್ದಾರೆ.
ಇನ್ಮುಂದೆ ಕರೋನ ಪರೀಕ್ಷೆ ಆಸ್ಪತ್ರೆಗೆ ಹೋಗೋದೆ ಬೇಡ. ನಿಮ್ಮ ಮನೆಗೆ ಬಂದು ಸ್ವ್ಯಾಬ್ ಪಡೆಯಲಾಗುತ್ತದೆ. ಇಲ್ಲಿರುವ ನಂಬರ್‍ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.
ದುಪ್ಪಟ್ಟಾಗಲಿದೆ ಬೆಲೆ
ಈಗಿರುವ ಕೋಳಿಗಳು ಸೇಲ್ ಆಗದ ಪರಿಣಾಮ ಹೊಸದಾಗಿ ಮರಿ ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಮರಿಗಳು ಸೇಲ್ ಆಗುತ್ತಿಲ್ಲ. ಹೊಸದಾಗಿ ಮರಿ ಬಿಡಲು ಹಣ ಇಲ್ಲ. ಬ್ಯಾಂಕ್‌ನಲ್ಲಿ ಹಳೇ ಸಾಲವೇ ತೀರಿಲ್ಲ. 10 ಸಾವಿರ ಕೋಳಿ ಸಾಕಲು 20ರಿಂದ 23 ಲಕ್ಷ ಬೇಕು. ಪ್ರತಿಯೊಬ್ಬರು ಲಾಸ್‌ನಲ್ಲಿ ಇದ್ದಾರೆ. ಈಗ ಮರಿ ಬಿಡದಿದ್ದರೆ ಮುಂದೆ ಕೋಳಿ ಸಿಗುವುದಿಲ್ಲ. ಆಗ ಕಳೆದ ಬಾರಿಯಂತೆ ಪ್ರತಿ ಕೆ.ಜಿಗೆ 200ರಿಂದ 250 ರೂ. ಸಿಗಬಹುದು ಎನ್ನುತ್ತಾರೆ ಸಾಕಣೆದಾರರು.
ಸರಕಾರದಿಂದ ನಮಗೆ ಪರಿಹಾರ ಬೇಕಿಲ್ಲ. ಈಗಿರುವ ಮಾರಾಟ ಅವಯನ್ನು ಮಧ್ಯಾಹ್ನ 2 ಗಂಟೆವರೆಗೂ ವಿಸ್ತರಣೆ ಮಾಡಲಿ. ಇದರಿಂದ ಸೇಲ್ಸ್ ಹೆಚ್ಚಾಗಿ ಸಾಕಣೆದಾರರಿಗೂ, ಮಾರಾಟಗಾರರಿಗೂ ನಷ್ಟ ಕಡಿಮೆಯಾಗಲಿದೆ. ಕಳೆದ ಬಾರಿ ಲಾಕ್‌ಡೌನ್ ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದೇವೆ. ಸರಕಾರ ಎಚ್ಚೆತ್ತು ತಕ್ಷಣ ಪರಿಹಾರ ಸೂಚಿಸಲಿ ಅನ್ನುತ್ತಾರೆ ದಿನೇಶ್ ಪಟೇಲ್.
ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]