ಕಿಟಕಿ ಕೊರೆದು ವೀಕ್ಷಣಾಲಯದಿಂದ ಪರಾರಿಯಾಗಿದ್ದ ಮೂವರು ಪೊಲೀಸ್‌ ವಶಕ್ಕೆ, ಎಲ್ಲೆಲ್ಲಿ ಸಿಕ್ಕರು?

SHIVAMOGGA LIVE NEWS | 01 MARCH 2024

SHIMOGA : ಆಲ್ಕೊಳದ ಸಮೀಪದ ಸರ್ಕಾರ ವೀಕ್ಷಣಾಲಯದಿಂದ ಪರಾರಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮೂವರು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಮೂವರು ಮಕ್ಕಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಎಲ್ಲೆಲ್ಲಿ ಸಿಕ್ಕರು ಮೂವರು?

ಸಾಗರ, ಭದ್ರಾವತಿ ಮತ್ತು ಶಿವಮೊಗ್ಗ ಮೂಲದ ಮೂವರು, ಸರ್ಕಾರಿ ವೀಕ್ಷಣಾಲಯದ ಶೌಚಾಲಯದ ಕಿಟಕಿ ಕೊರೆದು ಪರಾರಿಯಾಗಿದ್ದರು. ಈ ಪೈಕಿ ಒಬ್ಬಾತ ತನ್ನ ಮನಗೆ ತೆರಳಿದ್ದ. ಇನ್ನಿಬ್ಬರು ಬೆಂಗಳೂರಿಗೆ ಹೋಗುತ್ತಿದ್ದರು. ವಿನೋಬಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

ಇದನ್ನೂ ಓದಿ – ನಿಲ್ದಾಣದ ಗೇಟ್‌ನಲ್ಲೆ ಮಹಿಳೆ ಕಾಲ ಮೇಲೆ ಹತ್ತಿದ KSRTC ಬಸ್‌, CCTVಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

Vinobanagara-Police-Station.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment