ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ |SHIMOGA NEWS | 2 DECEMBER 2020
ಇದೆ ಮೊದಲ ಬಾರಿ ಮಕ್ಕಳ ರಾಜ್ಯಮಟ್ಟದ ಚಿತ್ರಕಲಾಸಂತೆ ಆಯೋಜಿಸಲಾಗುತ್ತಿದೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನೀನಾಸಂ ಪದವೀಧರ, ಚಲನಚಿತ್ರ ಕಲಾವಿದ ಜಿ.ಚನ್ನಕೇಶವ ಅವರು, ಡಿಸೆಂಬರ್ 12 ಮತ್ತು 13ರಂದು ಕುವೆಂಪು ರಂಗಮಂದಿರದಲ್ಲಿ ಚಿತ್ರ ಸಂತೆ ಆಯೋಜಿಸಲಾಗತ್ತಿದೆ ಎಂದರು.
VIDEO REPORT
ಚಿತ್ರ ಸಂತೆಯಲ್ಲಿ ಏನೆಲ್ಲ ಇರುತ್ತೆ?
ಬಣ್ಣದಗರಿ ಮಕ್ಕಳ ಚಿತ್ರಸಂತೆ ಹೆಸರಿನಲ್ಲಿ ಚಿತ್ರಕಲಾಸಂತೆ ನಡೆಯಲಿದೆ. ಮಕ್ಕಳು ರಚಿಸಿರುವ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಚಿತ್ರ ರಚಿಸಲು ಮೂರು ವಿಭಾಗ ಮಾಡಲಾಗಿದೆ.
- 4ನೇ ತರಗತಿವರೆಗಿನ ಮಕ್ಕಳು ‘ಶಾಲೆ’ ಎಂಬ ವಿಷಯದ ಕುರಿತು ಚಿತ್ರ ಬಿಡಿಸಬಹುದು.
- 4 ರಿಂದ 8ನೇ ತರಗತಿವರೆಗಿನ ವಿಭಾಗದವರು ‘ಪ್ರಕೃತಿ’ ಎಂಬ ವಿಷಯದ ಕುರಿತು ಚಿತ್ರ ರಚಿಸಬಹುದು.
- 8 ರಿಂದ 12ನೇ ತರಗತಿವರೆಗಿನ ಮಕ್ಕಳು ‘ರೈತ’ ಎಂಬ ವಿಷಯದ ಕುರಿತು ಚಿತ್ರ ರಚಿಸಬಹುದಾಗಿದೆ.
ಪ್ರತಿ ವಿಭಾಗದಲ್ಲಿಯೂ ಮೂರು ಬಹುಮಾನ, ಎರಡು ಸಮಾಧಾನಕರ ಬಹುಮಾನ ಇರಲಿದೆ. ಡಿಸೆಂಬರ್ 12ರಂದು ಬೆಳಗ್ಗೆ 11 ಗಂಟೆಗೆ ಸ್ಪರ್ಧೆ ನಡೆಯಲಿದೆ. ಆಸಕ್ತರು ನೂರು ರು. ಪ್ರವೇಶ ಶುಲ್ಕ ನೀಡಬೇಕಾಗುತ್ತದೆ ಎಂದು ಚನ್ನಕೇಶವ ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗೆ 9844518866 ಮೊಬೈಲ್ ನಂಬರ್‍ಗೆ ಕರೆ ಮಾಡಬಹುದಾಗಿದೆ.
ಆರ್.ಎಸ್.ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ನದಿ, ಚುಕ್ಕಿ, ನಾದ, ಗೌಶಿತ್ ಹೊತ್ತಾರೆ, ಸನ್ಮತಿ, ಲಿಪಿತಾ ಹೊತ್ತಾರೆ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






