ಶಿವಮೊಗ್ಗದ ಸಿಟಿ ಬಸ್‌ಗೆ ಮಾರುದ್ದದ ದಂಡದ ರಶೀದಿ ಕೊಟ್ಟ ಟ್ರಾಫಿಕ್‌ ಪೊಲೀಸ್‌, ಕಟ್ಟಿದ ಫೈನ್ ಎಷ್ಟು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 JANUARY 2024

SHIMOGA : ಸಾಲು ಸಾಲು ಸಂಚಾರ ನಿಯಮ ಉಲ್ಲಂಘಿಸಿದ ಎರಡು ವಾಹನ ಮಾಲೀಕರಿಗೆ ಸಂಚಾರ ಪೊಲೀಸರು ಮತ್ತೆ ಮಾರುದ್ದದ ರಶೀದಿ ನೀಡಿ ದಂಟ ಕಟ್ಟಿಸಿಕೊಂಡಿದ್ದಾರೆ.

ಪ್ರಕರಣ 1 : ಸಿಟಿ ಬಸ್‌

ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ನಗರದಲ್ಲಿ ಸಂಚರಿಸುತ್ತಿದ್ದ ಸಿಟಿ ಬಸ್‌ ಒಂದನ್ನು ಪತ್ತೆ ಹಚ್ಚಿ ದಂಡ ಕಟ್ಟಿಸಿಕೊಳ್ಳಲಾಗಿದೆ. 17 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. 18 ಸಾವಿರ ರೂ. ದಂಡ ವಿಧಿಸಲಾಗಿತ್ತು.

ಪ್ರಕರಣ 2 : ದ್ವಿಚಕ್ರ ವಾಹನ

15 ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನವೊಂದನ್ನು ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದಾರೆ. ವಾಹನ ಮಾಲೀಕನಿಂದ 20,500 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ.

bike-fine

ಇದನ್ನೂ ಓದಿ – ಜಿಂಕೆ ಕೊಂಬು, ಹುಲಿ ಉಗುರು, ವನ್ಯಜೀವಿ ಅಂಗಾಂಗ ಹಿಂತಿರುಗಿಸಲು ಗಡುವು

ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಮಾರ್ಗದರ್ಶನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್‌, ಸಿಬ್ಬಂದಿ ಕೃಷ್ಣಪ್ಪ, ಪ್ರಕಾಶ್‌, ನಾಸಿರ್‌, ಪ್ರವೀಣ್‌ ಪಾಟೀಲ್‌, ಗೃಹ ರಕ್ಷಕ ಅವಿನಾಶ್‌ ವಾಹನಗಳ ಪತ್ತೆ ಹಚ್ಚಿ ದಂಡ ಕಟ್ಟಿಸಿಕೊಂಡಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment