| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ ಸಿಟಿ: ನಗರದಲ್ಲಿ (city news) ಬುಧವಾರ ಇಡೀ ದಿನ ಏನೇನೆಲ್ಲ ನಡೆಯಿತು. ಇದಲ್ಲಿ ಕಂಪ್ಲೀಟ್ ಸುದ್ದಿ. ಒಂದೇ ಕ್ಲಿಕ್‌ನಲ್ಲಿ ಶಿವಮೊಗ್ಗ ನಗರದ ಸಂಪೂರ್ಣ ಸುದ್ದಿ.
ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ
ಕೋಟೆ ರಸ್ತೆ: ಬಾಲಕೀಯರ ವಸತಿ ನಿಲಯದ ಟೆರೇಸ್ ಮೇಲೆ ವಿದ್ಯಾರ್ಥಿನಿ ವನಿಷಾ (21) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವನಿಷಾ, ಭದ್ರಾವತಿ ತಾಲೂಕು ಗಂಗೂರು ಗ್ರಾಮದವರು. ಡಿವಿಎಸ್ ಪದವಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ಓದುತ್ತಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಯಿತು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![]()
ಆದಿಚುಂಚನಗಿರಿ ಶಾಖಾ ಮಠದ ವಾರ್ಷಿಕೋತ್ಸವ
ಶರಾವತಿ ನಗರ: ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ 35ನೇ ವಾರ್ಷಿಕೋತ್ಸವ ನಡೆಯಿತು. ಶ್ರೀ ಅದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಿವಮೊಗ್ಗದಲ್ಲಿಯು ಸೂಪರ್ ಮೂನ್
ಶಿವಮೊಗ್ಗ: ನಗರದಲ್ಲಿ ಬುಧವಾರ ರಾತ್ರಿ ಸೂಪರ್ ಮೂನ್ ದರ್ಶನವಾಯಿತು. ಇದು ಈ ವರ್ಷದ ಮೂರನೆಯ ಸೂಪರ್ ಮೂನ್. ಭೂಮಿಗೆ ಅತಿ ಸಮೀಪಕ್ಕೆ ಚಂದ್ರ ಆಗಮಿಸಿದ್ದರಿಂದ ದೊಡ್ಡ ಗಾತ್ರದಲ್ಲಿ ಚಂದ್ರ ಕಾಣಿಸುತ್ತಿದ್ದ. ಸೂಪರ್ ಮೂನ್ ಕಣ್ತುಂಬಿಕೊಂಡ ಹಲವರು ತಮ್ಮ ಮೊಬೈಲ್‌ಳಲ್ಲಿ ಚಂದ್ರನನ್ನ ಸೆರೆ ಹಿಡಿದರು.

ಮೈ ಸ್ಕೂಲ್‌ನಲ್ಲಿ ರಾಜ್ಯೋತ್ಸವ ಸಂಭ್ರಮ
ಅಚ್ಚುತರಾವ್ ಬಡಾವಣೆ: ಇಲ್ಲಿನ ಮೈ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮಕ್ಕಳು ಕರ್ನಾಟಕ, ಕನ್ನಡದ ಕುರಿತು ತಿಳಿಸಲಾಯಿತು. ವಿವಿಧ ಕನ್ನಡದ ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿದರು. ಶಾಲೆಯ ಟ್ರಸ್ಟಿಗಳು, ಸಿಬ್ಬಂದಿ ಇದ್ದರು.

ಶಿವಮೊಗ್ಗದಲ್ಲಿ ಮೂರು ದಿನ ನಾಟಕೋತ್ಸವ
ಪತ್ರಿಕಾ ಭವನ: ಸಮುದಾಯ ಸಂಘಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಕುವೆಂಪು ರಂಗಮಂದಿರದಲ್ಲಿ ನ.7, 8 ಮತ್ತು 9ರಂದು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನ.7ರಂದು ಸಂಜೆ 6.30ಕ್ಕೆ ನೆನಪು ತಂಡದಿಂದ ಮಾಯಾದೀಪ, ನ.8ರಂದು ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ನೀರೊಳಗಿನ ಕಿಚ್ಚು, ನ.9ರಂದು ಮೂಡುಬಿದಿರೆಯ ಆಳ್ವಾಸ್ ರಂಗಶಿಕ್ಷಣ ಕೇಂದ್ರದಿಂದ ಚಾರುವಸಂತ ನಾಟಕ ಪ್ರದರ್ಶಿಸಲಾಗುತ್ತದೆ ಎಂದು ಸಮುದಾಯ ಶಿವಮೊಗ್ಗದ ಅಧ್ಯಕ್ಷ ಡಾ. ಕೆ.ಜಿ.ವೆಂಕಟೇಶ್ ತಿಳಿಸಿದರು.

ನ.9ರಂದು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಪತ್ರಿಕಾ ಭವನ: ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಅಂಗವಾಗಿ ಅಶ್ವಥನಗರದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ನ.9ರಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಎಲ್‌ಕೆಜಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ವಿವೇಕ್ ಫೌಂಡೇಶನ್ ಉಪಾಧ್ಯಕ್ಷ ಎಸ್.ಎಸ್.ಸತೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿಕಿತ್ಸೆಗೆ ನೆರವು ನೀಡುವಂತೆ ಮನವಿ
ಪತ್ರಿಕಾ ಭವನ: ಭದ್ರಾವತಿ ತಾಲೂಕು ಶಂಕರಘಟ್ಟ ಸಮೀಪದ ತಾವರಘಟ್ಟದ ವೆಳ್ಳಿಯಮ್ಮ ಎಂಬುವವರ ಪುತ್ರ 9 ವರ್ಷ ಮದನ್ ಅತಿ ವಿರಳವಾದ ಚರ್ಮ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನ ಚಿಕಿತ್ಸೆಗೆ ಸಾರ್ವಜನಿಕರು ನೆರವು ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ವೆಳ್ಳಿಯಮ್ಮ ಮನವಿ ಮಾಡಿದ್ದಾರೆ. 8431931532 ನಂಬರ್‌ಗೆ ಗೂಗಲ್ ಪೇ ಅಥವಾ ಫೋನ್ ಪೇ ಮಾಡಬಹುದು ಎಂದು ತಿಳಿಸಿದ್ದಾರೆ.

ಕೆಎಂಎಫ್ ನಿರ್ದೇಶಕರಾಗಿ ಮಂಜುನಾಥಗೌಡ
ಮಾಚೇನಹಳ್ಳಿ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದಿಂದ (ಶಿಮುಲ್) ಕರ್ನಾಟಕ ಹಾಲು ಮಂಡಳಿಗೆ (ಕೆಎಂಎಫ್) ಆರ್.ಎಂ.ಮಂಜುನಾಥ ಗೌಡ ಅವರನ್ನು ನಿರ್ದೆಶಕರಾಗಿ ಆಯ್ಕೆ ಮಾಡಲಾಗಿದೆ. ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಮಂಜುನಾಥ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಶಿಮುಲ್ ಅಧ್ಯಕ್ಷ ವಿದ್ಯಾಧರ ಮತ್ತು ನಿರ್ದೇಶಕರು ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ » 120 ಇನ್ಸ್‌ಪೆಕ್ಟರ್‌ಗಳು ವರ್ಗ, ಶಿವಮೊಗ್ಗಕ್ಕೆ ರಾಘವೇಂದ್ರ ಕಂಡಿಕೆ ವಾಪಸ್, ಯಾರೆಲ್ಲ ಎಲ್ಲೆಲ್ಲಿಗೆ ವರ್ಗವಾಗಿದ್ದಾರೆ?
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
- ಶಿವಮೊಗ್ಗದಲ್ಲಿ ಬಸ್ ಹತ್ತಿ ಆಧಾರ್ ಕಾರ್ಡ್ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?
- ಕೋಟೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ, ಏನೇನೆಲ್ಲ ಪೂಜೆ ನೆರವೇರಿತು?
- ಅಡಿಕೆ ಧಾರಣೆ | 4 ಡಿಸೆಂಬರ್ 2025 | ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್?
- ಶಿವಮೊಗ್ಗ ಸಿಟಿಯ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್ ಇರಲ್ಲ
- ಶಿವಮೊಗ್ಗದ ಮೊಬೈಲ್ ಅಂಗಡಿಯಿಂದ ಹೊರ ಬಂದ ಮೆಕಾನಿಕ್ಗೆ ಕಾದಿತ್ತು ಶಾಕ್
- ಶಿವಮೊಗ್ಗ ಜಿಲ್ಲೆಗೆ ಇವತ್ತೂ ಮಳೆ ಅಲರ್ಟ್, ಎಷ್ಟು ಮಳೆಯಾಗುವ ಸಾಧ್ಯತೆ ಇದೆ? ಎಲ್ಲೆಲ್ಲಿ ಹೇಗಿದೆ ವಾತಾವರಣ?
![]()