ಗಾಂಧಿ ಬಜಾರ್‌ನಲ್ಲಿ ಬಟ್ಟೆ ವಿಚಾರಕ್ಕೆ ಕಿರಿಕ್, ಕೈ ಕೈ ಮಿಲಾಯಿಸಿದ ಅಂಗಡಿ ಮಾಲೀಕ, ಗ್ರಾಹಕ, ಏನಿದು ಪ್ರಕರಣ?

SHIVAMOGGA LIVE NEWS | 17 APRIL 2023

SHIMOGA : ಮಕ್ಕಳ ಬಟ್ಟೆ ಸೈಸ್ ವ್ಯತ್ಯಾಸವಾಗಿದ್ದು ಬದಲು ಮಾಡಿಕೊಡುವಂತೆ ಬಂದ ಗ್ರಾಹಕ ಮತ್ತು ಅಂಗಡಿ (Shop) ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

200123 Police Jeep With Light jpg

ಗಾಂಧಿ ಬಜಾರ್‍ನ ಬಟ್ಟೆ ಮಾರುಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಅಂಗಡಿಯೊಂದರಲ್ಲಿ (Shop) ಅಬ್ದುಲ್ ಖಾದರ್ ಅವರ ಮನೆಯ ಮಕ್ಕಳಿಗೆ ಬಟ್ಟೆ ಖರೀದಿಸಲಾಗಿತ್ತು. ಆದರೆ ಮನೆಗೆ ಕೊಂಡೊಯ್ದಾಗ ಸೈಸ್ ವ್ಯತ್ಯಸವಾಗಿತ್ತು. ಮರುದಿನ ಬಟ್ಟೆ ಬದಲಾಯಿಸಿಕೊಂಡು ಹೋಗಲು ಅಬ್ದುಲ್ ಖಾದರ್ ಮತ್ತು ಅವರ ಸೊಸೆ ಬಂದಿದ್ದರು. ಈ ವೇಳೆ ಅಂಗಡಿ ಮಾಲೀಕ ಮತ್ತು ಅಬ್ದುಲ್ ಖಾದರ್‍ ಅವರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ಇದನ್ನೂ ಓದಿ – ಕಂಬದ ಮೇಲೆ ಲೈನ್ ಮ್ಯಾನ್‌ಗೆ ಕರೆಂಟ್ ಶಾಕ್, ಕೆಳಗೆ ಬಿದ್ದು ಸಾವು, ಶಿವಮೊಗ್ಗದಲ್ಲಿ ಪ್ರಕರಣ ದಾಖಲು

ಅಂಗಡಿ ಮಾಲೀಕ ಮತ್ತು ಅಂಗಡಿಯಲ್ಲಿ ಇದ್ದವರು ಅಬ್ದುಲ್ ಖಾದರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment