ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2020
ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನೀಡಿರುವ ಹೇಳಿಕೆಯನ್ನು ಕೂಡಲೆ ಹಿಂಪಡೆಯಬೇಕು ಎಂದು ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಅವರು ನಿಷ್ಕ್ರಿಯ ಸಚಿವ ಎಂದು ಪ್ರಸನ್ನಕುಮಾರ್ ಹೇಳಿಕೆ ನೀಡಿರುವುದು ಹಸ್ಯಾಸ್ಪದ ಎಂದು ಟೀಕಿಸಿದರು.

ಈಶ್ವರಪ್ಪ ಅವರು ಐದು ಬಾರಿ ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿದ್ದರು. ಇವರಿಂದ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಶಿವಮೊಗ್ಗ ಅಭಿವೃದ್ಧಿಯಲ್ಲಿ ಇವರದ್ದು ಪ್ರಮುಖ ಪಾತ್ರವಿದೆ. ಇವರನ್ನು ನಿಷ್ಕ್ರಿಯ ಅನ್ನುವುದು ನಿಜಕ್ಕೂ ಹಾಸ್ಯಾಸ್ಪದ. ಹಾಗಾಗಿ ಪ್ರಸನ್ನಕುಮಾರ್ ಅವರು ತಮ್ಮ ಹೇಳಿಕೆಯನ್ನು ಕೂಡಲೆ ಹಿಂಪಡೆಯಬೇಕು. ಅವರು ಶಾಸಕರಾದಾಗ ಒಂದೂ ಕೆಲಸ ಮಾಡಿಲ್ಲ. ಈಗ ಇರುವಿಕೆ ತೋರಿಸಲು ಇಂತಹ ಹೇಳಿಕೆ ನಿಡುತ್ತಿದ್ದಾರೆ ಎಂದು ದತ್ತಾತ್ರಿ ಟೀಕಿಸಿದರು.
ಬಳ್ಳೆಕೆರೆ ಸಂತೋಷ್, ಶಿವರಾಜ್, ನಾಗರಾಜ್, ಕೆ.ವಿ.ಅಣ್ಣಪ್ಪ, ಮೋಹನ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 27 ಮಾರ್ಚ್ 2026

- ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

- ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್ಗಳ ಅನಾವರಣ

- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

About The Editor
ನಿತಿನ್ ಆರ್.ಕೈದೊಟ್ಲು
















