‘ಪ್ರದಕ್ಷಿಣೆ, ಸಲ್ಯೂಟ್‌ ಹೊಡೆಯೋರು ಪಕ್ಷಕ್ಕೆ ಬೇಡʼ, ಶಿವಮೊಗ್ಗದಲ್ಲಿ ಸತ್ಯಶೋಧನಾ ಸಮಿತಿ ಅಧ್ಯಕ್ಷ ಖಡಕ್‌ ಸೂಚನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 7 AUGUST 2024 : ಕಾಂಗ್ರೆಸ್‌ ಪಕ್ಷದಲ್ಲಿ ಮೂರು ಬಗೆಯ ಮುಖಂಡರು, ಕಾರ್ಯಕರ್ತರಿದ್ದಾರೆ (Workers). ಅದರೆ ಪಕ್ಷಕ್ಕೆ ಅಗತ್ಯವಿರುವುದು ಒಂದೇ ಬಗೆಯ ಕಾರ್ಯಕರ್ತ ಎಂದು ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ವಿಶ್ಲೇಷಿಸಿದರು.

ಶಿವಮೊಗ್ಗ ಕಾಂಗ್ರೆಸ್‌ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ತಿಳಿಯುವ ಸತ್ಯಶೋಧನಾ ಸಭೆಯಲ್ಲಿ ವಿ.ಎಸ್‌.ಉಗ್ರಪ್ಪ ಮಾತನಾಡಿದರು.

ಮೂರು ಬಗೆಯ ಮುಖಂಡರು, ಕಾರ್ಯಕರ್ತರು

ಪಕ್ಷಗಳಲ್ಲಿ ಪ್ರದಕ್ಷಿಣೆ ಮಾಡುವ ಒಂದು ವರ್ಗ ಇರುತ್ತದೆ. ಮುಖ್ಯಮಂತ್ರಿ, ಸಚಿವರು, ಪ್ರಮುಖರು ಬಂದಾಗಷ್ಟೆ ಪಕ್ಷದ ಕಚೇರಿಗೆ ಭೇಟಿ ಕೊಡುತ್ತಾರೆ. ಎರಡನೇ ವರ್ಗದ ಕಾರ್ಯಕರ್ತರು ಜನರ ಜೊತೆಗೆ ಇರುತ್ತದೆ. ಜನರಿಗೆ ಕೆಲಸಗಳನ್ನು ಮಾಡಿಕೊಡುತ್ತಲೆ ಇರುತ್ತಾರೆ. ಇಂತಹ ಕಾರ್ಯಕರ್ತರು ಯಾರಿಗೂ ಗೊತ್ತಾಗುವುದಿಲ್ಲ. ಮೂರನೆ ವರ್ಗದ ಕಾರ್ಯಕರ್ತರು ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್‌ ಕೊಡುತ್ತಾರೆ ಎಂದು ವಿ.ಎಸ್‌.ಉಗ್ರಪ್ಪ ವಿಶ್ಲೇಷಿಸಿದರು.

VS-ugrappa-in-Shimoga-with-Minister-Madhu-Bangarappa

ಕಾಂಗ್ರೆಸ್‌ಗೆ ಎಂತಹ ಕಾರ್ಯಕರ್ತರು ಬೇಕು?

ಕಾರ್ಯಕರ್ತರು ವೈಚಾರಿಕತೆ ಬೆಳೆಸಿಕೊಳ್ಳಬೇಕು. ನಾಯಕರ ಜೊತೆಗು ಇರಬೇಕು. ಜನರ ಜೊತೆಗೂ ಇರಬೇಕು. ಕೇವಲ ನಾಯಕರ ಬ್ಯಾಗ್ ಹಿಡಿದು ಓಡಾಡುವುದು, ಸಲ್ಯೂಟ್ ಹೊಡೆಯುವುದಲ್ಲ. ತಪ್ಪು ಮಾಡಿದರೆ ನಾಯಕನಿಗು ಮುಲಾಜಿಲ್ಲದೆ ಪ್ರಶ್ನೆ ಮಾಡುವ ದಮ್ಮು, ತಾಕತ್ತು ಬೆಳೆಸುಕೊಳ್ಳಬೇಕು‌. ಆಗ ಪಕ್ಷ ಬಲವಾಗಿ ಬೇರೂರುತ್ತದೆ ಎಂದು ಉಗ್ರಪ್ಪ ತಿಳಿಸಿದರು.

ಇದನ್ನೂ ಓದಿ ⇓

ಆಗಸ್ಟ್‌ 10ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ 600ಕ್ಕೂ ಹೆಚ್ಚು ಮಹಿಳಾ ನ್ಯಾಯವಾದಿಗಳು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 7, 2024

Leave a Comment