ಶಿವಮೊಗ್ಗದಲ್ಲಿ ಮೈಸೂರಿನ ಮಹಿಳೆ ಸಾವು, ಪೊಲೀಸ್‌ ಸಿಬ್ಬಂದಿ ಕಾರ್ಯಕ್ಕೆ ಜನ ಮೆಚ್ಚುಗೆ, ಆಗಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಆಕೆ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ತನ್ನ ಹೆಸರು ತಿಳಿಸದೆ ಮೈಸೂರು ಎಂದಷ್ಟೇ ಹೇಳಿದ್ದರು. (constable)

ಮೃತ ಮಹಿಳೆ ವಾರಸುದಾರರ ಬಗ್ಗೆ ಪರಿಶೀಲಿಸಿದ ಸಂದರ್ಭದಲ್ಲಿ ಮಾಹಿತಿ ಲಭ್ಯವಾಗಿರಲಿಲ್ಲ. ಆಕೆ ಬಳಿಯಿದ್ದ ಚೀಟಿಯಲ್ಲಿ ಬರೆದಿದ್ದ ಫೋನ್ ನಂಬರ್‌ಗಳಿಗೆ ಕರೆ ಮಾಡಿದಾಗ ಒಂದು ನಂಬ‌ರ್ ಆಕೆಯ ಮಗಳದಾಗಿತ್ತು. ಶಿವಮೊಗ್ಗ ಪೊಲೀಸ್ ಉಪವಿಭಾಗದ ಕಾನ್‌ಸ್ಟೇಬಲ್‌ ಚೌಡಪ್ಪ ಕಮತರ ಆಸಕ್ತಿ ವಹಿಸಿ ಮೃತೆಯ ಮಗಳನ್ನು ಪತ್ತೆ ಮಾಡಿದ್ದರು.

Police-Chowdappa-trace-the-daughter-of-a-deceased-from-mysore.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಾಸ್ಟರ್‌ ಹೆಲ್ತ್‌ ಚೆಕ್‌ ಅಪ್‌ ಪ್ಯಾಕೇಜ್‌ಗೆ ಶೇ.25ರಷ್ಟು ರಿಯಾಯಿತಿ, ಏನೇನೆಲ್ಲ ಚೆಕ್‌ ಮಾಡ್ತಾರೆ?

ಮೃತ ಮಹಿಳೆ ಬಳಿಯಿದ್ದ ₹34,000 ನಗದು, ಒಂದು ಸರ, ಎರಡು ಉಂಗುರಗಳನ್ನು ಆಕೆಯ ಮಗಳಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಚೌಡಪ್ಪ ಕಮತರ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment