ಕ್ರೆಡಿಟ್‌ ಕಾರ್ಡ್‌ನಿಂದ ಹಣ ಕಡಿತ, ಎಸ್‌ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ

ಶಿವಮೊಗ್ಗ: ಕ್ರೆಡಿಟ್ ಕಾರ್ಡಿನಿಂದ (Credit Card) ಅನಧಿಕೃತವಾಗಿ ಕಡಿತ ಮಾಡಿದ ಹಣವನ್ನು ಗ್ರಾಹಕರಿಗೆ ಮರುಪಾವತಿಸದ ಪ್ರಕರಣದಲ್ಲಿ ಸೇವಾ ನ್ಯೂನತೆ ಎಸಗಿರುವುದು ಸಾಬೀತಾದ ಹಿನ್ನೆಲೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಬೆಂಗಳೂರಿನ ಎಸ್‌ಬಿಐ ಕಾರ್ಡ್ಸ್ (SBI Cards) ಮತ್ತು ಪೇಮೆಂಟ್ ಸರ್ವೀಸ್, ಕಾರ್ಡ್‌ದಾರ ಮಂಜುನಾಥ್ ಅವರಿಗೆ ಹಣ ಮರುಪಾವತಿಸುವಂತೆ ಆದೇಶ ನೀಡಿದೆ.

ತಿಲಕ್‌ನಗರದ ವಾಸಿ ಮಂಜುನಾಥ್ ಸೇವಾ ನ್ಯೂನತೆ ಕುರಿತು ಆಯೋಗಕ್ಕೆ ದೂರು ನೀಡಿದ್ದರು. ತಿಲಕ್‌ ನಗರದ ಎಸ್‌ಬಿಐ ಬ್ಯಾಂಕ್‌ನಿಂದ ನೀಡಿದ್ದ ಕ್ರೆಡಿಟ್ ಕಾರ್ಡನ್ನು ಬಳಸುತ್ತಾ, ವಾರ್ಷಿಕ ಶುಲ್ಕ ಪಾವತಿಸುತ್ತಿದ್ದರು. ಆದರೂ ಮೂರು ಬಾರಿ ಕ್ರೆಡಿಟ್ ಕಾರ್ಡ್‌ನಿಂದ ಹಣ ಕಡಿತಗೊಳಿಸಲಾಗಿತ್ತು .

Shimoga-Consumer-Court.

ಸಿವಿವಿ ಹಾಗೂ ಒಟಿಪಿ ಇಲ್ಲದೆ ವ್ಯವಹಾರ ನಡೆಸಿದ ಬಗ್ಗೆ ಮಂಜುನಾಥ್ ಇ-ಮೇಲ್ ಮೂಲಕ ದೂರು ನೀಡಿದ್ದರು. ಜತೆಗೆ ಆನ್‌ಲೈನ್‌ನಲ್ಲಿ (Online) ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಕ್ರೆಡಿಟ್ ಕಾರ್ಡ್‌ನಿಂದ ಅನಧಿಕೃತವಾಗಿ ಕಡಿತವಾದ ಮೊತ್ತಗಳ ಬಗ್ಗೆ ಆರ್‌ಬಿಐ ಮಾನದಂಡಗಳನ್ನು ಪಾಲಿಸಿಲ್ಲ. ಸೂಕ್ತ ತನಿಖೆ ನಡೆಸದೆ, ಕಡಿತ ಮಾಡಿದ ಹಣವನ್ನು ಕ್ರೆಡಿಟ್ ಕಾರ್ಡ್‌ಗೆ ಮರು ಜಮೆ ಮಾಡದೆ ಸೇವಾನ್ಯೂನತೆ ಎಸಗಿದ್ದಾರೆ ಎಂದು ಮಂಜುನಾಥ್‌ ದೂರು ನೀಡಿದ್ದರು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ, ಯಾಕೆ?

ಮಂಜುನಾಥ್ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೇವಾನ್ಯೂನತೆ ನಡೆದಿದೆ ಎಂದು ತೀರ್ಮಾನಿಸಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್ ಮತ್ತು ಪೇಮೆಂಟ್ಸ್ ಸಂಸ್ಥೆ ಮಂಜುನಾಥ್ ಅವರಿಗೆ 45 ದಿನಗಳ ಒಳಗೆ ಕಟಾವಣೆಯಾದ ಹಣ ಮರುಪಾವತಿಸುವಂತೆ ಆಯೋಗದ ಅಧ್ಯಕ್ಷ ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಪೀಠ ಆದೇಶ ನೀಡಿದೆ.

Shimoga-Consumer-Court.

Leave a Comment