ಶಿವಮೊಗ್ಗದಲ್ಲಿ ವೇ‍ಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ದಾಳಿ, ಯುವತಿ ರಕ್ಷಣೆ, ಮಹಿಳೆ ವಿರುದ್ಧ ಕೇಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 MARCH 2024

SHIMOGA : ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಹಿನ್ನೆಲೆ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಓರ್ವ ಯುವತಿ, ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ. ದಂಧೆ ನಡೆಸುತ್ತಿದ್ದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆಯಲಾಗಿದೆ.

ನಗರದ ಆಲ್ಕೊಳದ ಶಾಂತವೇರಿ ಗೋಪಾಲಗೌಡ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಆರೋಪ ಕೇಳಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಮನೆ ಬಾಡಿಗೆಗೆ ಪಡೆದಿದ್ದ ನಾಗರತ್ನ ಎಂಬ ಮಹಿಳೆ ದಂಧೆ ನಡೆಸುತ್ತಿದ್ದಳು ಆರೋಪಿಸಲಾಗಿದೆ.

ದಂಧೆ ವೇಳೆ ದಾಳಿ

ದಂಧೆ ನಡೆಸುತ್ತಿದ್ದ ಮಹಿಳೆ, ಹಣದ ಆಸೆ ತೋರಿಸಿ ಯುವತಿಯನ್ನು ಮನೆಗೆ ಕರೆಯಿಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ. ಆಕೆಯ ಜೊತೆಗೆ ವ್ಯಕ್ತಿಯೊಬ್ಬ ಕೊಠಡಿಯಲ್ಲಿದ್ದ. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಂಧೆ ನಡೆಸುತ್ತಿದ್ದ ಮಹಿಳೆ ಪ್ರತಿ ಗ್ರಾಹಕರಿಂದ ಒಂದು ಸಾವಿರ ರೂ. ಹಣ ಪಡೆಯುತ್ತಿದ್ದಳು. ಇದರಲ್ಲಿ ಮಹಿಳೆಗೆ 500 ರೂ. ನೀಡಿ, ಉಳಿದ ಮೊತ್ತವನ್ನು ತಾನು ಇಟ್ಟುಕೊಳ್ಳುತ್ತಿದ್ದಳು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ – ಲೋಕಸಭೆ ಚುನಾವಣೆಗೆ ಗೀತಾ, ಶಿವಮೊಗ್ಗದಲ್ಲಿ ನಟ ಶಿವರಾಜ್‌ ಕುಮಾರ್‌ ಹೇಳಿದ್ದೇನು? ಇಲ್ಲಿದೆ 3 ಪ್ರಮುಖ ಪಾಯಿಂಟ್

ದಾಳಿ ವೇಳೆ ಮೂರು ಮೊಬೈಲ್‌ ಫೋನ್‌, ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment