ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿವಿ, ಈ ವರ್ಷದಿಂದಲೆ 3 ಕೋರ್ಸ್‌ ಶುರು, ಯಾರೆಲ್ಲ ಅರ್ಜಿ ಹಾಕಬಹುದು?

SHIVAMOGGA LIVE | 30 MAY 2023

SHIMOGA : ಕೇಂದ್ರ ಗೃಹ ಇಲಾಖೆಯ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (Rashtriya Raksha University) ಕ್ಯಾಂಪಸನ್ನು ಶಿವಮೊಗ್ಗದ ರಾಗಿಗುಡ್ಡದಲ್ಲಿ ಸ್ಥಾಪಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮೂರು ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿವಿಯ ಕ್ರಿಮಿನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವಶ್ರೀ ತಿಳಿಸಿದರು.

300523 Rashtriya Raksha University Shimoga Assistant Professor Divyashree

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿವಶ್ರೀ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಡಿಪ್ಲೋಮಾ ಇನ್‌ ಪೊಲೀಸ್‌ ಸೈನ್ಸ್‌, ಪಿಜಿ ಡಿಪ್ಲೋಮಾ ಇನ್‌ ಪೊಲೀಸ್‌ ಸೈನ್ಸ್‌ ಅಂಡ್‌ ಮ್ಯಾನೇಜ್‌ಮೆಂಟ್‌, ಬ್ಯಾಚುಲರ್‌ ಆಫ್‌ ಆರ್ಟ್ಸ್‌ ಇನ್‌ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್‌ ವಿಷಯಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಯಾವ್ಯಾವ ಕೋರ್ಸ್‌ಗಳಿಗೆ ಅರ್ಹತೆ ಏನು?

ಡಿಪ್ಲೋಮಾ ಇನ್‌ ಪೊಲೀಸ್‌ ಸೈನ್ಸ್‌ : ಒಂದು ವರ್ಷದ ಕೋರ್ಸ್‌. ಯಾವುದೆ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು. ಎರಡು ಸಿಮಿಸ್ಟರ್‌ ಇರಲಿದೆ.

ಬ್ಯಾಚುಲರ್‌ ಆಫ್‌ ಆರ್ಟ್ಸ್‌ ಇನ್‌ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್‌ : ನಾಲ್ಕು ವರ್ಷದ ಕೋರ್ಸ್‌. ಎಂಟು ಸೆಮಿಸ್ಟರ್‌ ಇರಲಿದೆ. ಯಾವುದೆ ವಿಷಯದಲ್ಲಿ ಪಿಯುಸಿ ಉತ್ತೀರ್ಣರಾಗಿರಬೇಕು.

Kalleshwara-Enterprises.webp

ಪಿಜಿ ಡಿಪ್ಲೋಮಾ ಇನ್‌ ಪೊಲೀಸ್‌ ಸೈನ್ಸ್‌ ಅಂಡ್‌ ಮ್ಯಾನೇಜ್‌ಮೆಂಟ್‌ : ಒಂದು ವರ್ಷದ ಕೋರ್ಸ್‌. ಎರಡು ಸೆಮಿಸ್ಟರ್‌ ಇರಲಿದೆ. ಯಾವುದೆ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸುಗಳೇ ನಿಲ್ಲದ ಕಡೆ ಹೈಟೆಕ್‌ ತಂಗುದಾಣ, ನೂರಾರು ಪ್ರಯಾಣಿಕರು ನಿತ್ಯ ಕಾಯುವ ಕಡೆ ಕೇಳುವವರೇ ಇಲ್ಲ

ಪ್ರಸಕ್ತ ವರ್ಷ ಮೆರಿಟ್‌ ಅಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗ ಸಿಗಲಿದೆಯಾ?

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲದಲ್ಲಿ (Rashtriya Raksha University) ಆಂತರಿಕ ಭದ್ರತೆ, ರಕ್ಷಣಾ ವಿಷಯಗಳು, ಸೈಬರ್‌ ಸೆಕ್ಯೂರಿಟಿ ಸೇರಿದಂತೆ ವಿವಿಧ ವಿಷಯಗಳಿಗೆ ಪದವಿ, ಪಿಜಿ ಡಿಪ್ಲೋಮಾ ಕೋರ್ಸ್‌ಗಳನ್ನು ನೆಡಸಲಾಗುತ್ತಿದೆ. ಇಲ್ಲಿ ಪದವಿ ಪಡೆದವರು ಭದ್ರತಾ ಪಡೆ, ಪೊಲೀಸ್‌ ಇಲಾಖೆ, ಸೆಕ್ಯೂರಿಟಿ ಮತ್ತು ಡಿಟೆಕ್ಟೀವ್‌ ಏಜೆನ್ಸಿಗಳಲ್ಲಿ ಕೆಲಸ ನಿರ್ವಹಿಸಬಹುದಾಗಿದೆ ಎಂದು ದಿವ್ಯಶ್ರೀ ತಿಳಿಸಿದರು.

DivyaShree Rashtriya Raksha University

ಗುಜರಾತ್‌ ರಾಜ್ಯದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲದಲ್ಲಿ ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳಿಗು ಪ್ರತಿ ವರ್ಷ ಉದ್ಯೋಗ ದೊರೆಯುತ್ತಿದೆ. ಈ ವಿವಿಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಗುಜರಾತ್‌, ಜಾರ್ಖಂಡ್‌, ದೆಹಲಿ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ 5 – 15 ಗ್ರೇಸ್‌ ಅಂಕಗಳು ಲಭಿಸಲಿದೆ. ಇದೆ ಮಾದರಿ ಗ್ರೇಸ್‌ ಅಂಕಗಳು ಕರ್ನಾಟಕ ಪೊಲೀಸ್‌ ನೇಮಕಾತಿಯಲ್ಲೂ  ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

– ದಿವ್ಯಶ್ರೀ, ಸಹಾಯಕ ಪ್ರಾಧ್ಯಾಪಕಿ, ಕ್ರಿಮಿನಾಲಜಿ ವಿಭಾಗ

ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿ ಮಹೇಶ್‌ ಕುಸಲಾನಿ, ಟೀಚಿಂಗ್‌ ಕಮ್‌ ರಿಸರ್ಚ್‌ ಅಸಿಸ್ಟೆಂಟ್‌ ಡಾ. ಶಿವಲಿಂಗಪ್ಪ ಅಂಗಡಿ ಇದ್ದರು.

SHIVAMOGGA-LIVE-NITIN-KAIDOTLU

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment