ಸಂಬಂಧಿಗೆ ಕರೋನ ಪಾಸಿಟಿವ್, ಸಚಿವ ಈಶ್ವರಪ್ಪ ಕುಟುಂಬದ 21 ಮಂದಿಗೆ ಕೋವಿಡ್ ಟೆಸ್ಟ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜುಲೈ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸಂಬಂಧಿಯೊಬ್ಬರಿಗೆ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕುಟುಂಬ ಇವತ್ತು ಕರೋನ ಪರೀಕ್ಷೆಗೆ ಒಳಗಾಗಿದೆ. ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ.

107095610 909433912869853 8511875037471527700 o.jpg? nc cat=110& nc sid=110474& nc ohc=09EHc nb0TYAX8 0Uch& nc ht=scontent.fblr11 1

21 ಮಂದಿಯ ಪರೀಕ್ಷೆ

ಸಚಿವ ಕೆ.ಎಸ್.ಈಶ್ವರಪ್ಪ, ಅವರ ಕುಟುಂಬದ ಸದಸ್ಯರು, ಅಡುಗೆಯವರು, ಕಾರು ಚಾಲಕರು ಸೇರಿ 21 ಮಂದಿ ಕೋವಿಡ್ ಟೆಸ್ಟ್‍ಗೆ ಒಳಗಾಗಿದ್ದರು. ಇವರೆಲ್ಲರ ವರದಿಯು ನೆಗೆಟಿವ್ ಎಂದು ಬಂದಿದೆ ಎಂದು ಸಚಿವ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಭೆ, ಸಮಾರಂಭ, ಕಾರ್ಯಕ್ರಮ ರದ್ದು

ಸಂಬಂಧಿಯೊಬ್ಬರಿಗೆ ಪಾಸಿಟಿವ್ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಎಲ್ಲಾ ಕಾರ್ಯಕ್ರಮಗಳು, ಸಭೆಗಳನ್ನು ರದ್ದಗೊಳಿಸಿದರು. ಕೋವಿಡ್ ಪರೀಕ್ಷೆಗೆ ಒಳಗಾಗಿ ಇಡೀ ದಿನ ಕುಟುಂಬದವರ ಜೊತೆಗೆ ಮನೆಯಲ್ಲೇ ಉಳಿದಿದ್ದರು.

ಇಷ್ಟು ಬೇಗೆ ರಿಪೋರ್ಟ್ ಹೇಗೆ ಕೊಟ್ಟರು?

ಮತ್ತೊಂದೆಡೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕುಟುಂಬಕ್ಕೆ ಇಷ್ಟು ಬೇಗ ಕೋವಿಡ್ ರಿಪೋರ್ಟ್ ನೀಡಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವರು ಕೋವಿಡ್ ಟೆಸ್ಟ್ ಮಾಡಿಸಿದರೆ, ಅದರ ಮಾಹಿತಿ ತಿಳಿಯಲು ಮೂರ್ನಾಲ್ಕು ದಿನವಾಗುತ್ತದೆ. ಕೆಲವರಿಗಂತೂ ಮಾಹಿತಿಯೇ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಚಿವರ ಕುಟುಂಬಕ್ಕೆ ಇಷ್ಟು ಬೇಗ ರಿಪೊರ್ಟ್ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಸಚಿವರ ಟ್ವೀಟ್‍ನ ಕೆಳಗೆ ಈ ಕಮೆಂಟುಗಳು ಬಂದಿವೆ.

107853086 1166162783745140 3029116546729321320 n.jpg? nc cat=102& nc sid=8024bb& nc ohc=SErhytzq1kwAX8ztcvO& nc ht=scontent.fblr11 1

ನಾಳೆಯಿಂದ ಎಂದಿನಂತೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದಾಗಿ ಸಚಿವ ಕೆ.ಎಸ್.ಈಶ‍್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment