ಶಿವಮೊಗ್ಗದಲ್ಲಿ ಪಟಾಕಿ ಮಾರಾಟ ಶುರು, ಹೇಗಿದೆ ಡಿಮಾಂಡ್‌?

 ಶಿವಮೊಗ್ಗ  LIVE 

ಶಿವಮೊಗ್ಗ: ದೀಪಾವಳಿ ಹಿನ್ನೆಲೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ (Crackers) ವ್ಯಾಪಾರ ಆರಂಭವಾಗಿದೆ. ಇಂದು ಬೆಳಗ್ಗೆಯಿಂದಲೆ ಗ್ರಾಹಕರು ಪಟಾಕಿ ಖರೀದಿ ಮಾಡುತ್ತಿದ್ದು, ವ್ಯಾಪಾರ ಬಿರುಸಾಗಿದೆ.

ಫ್ರೀಡಂ ಪಾರ್ಕ್‌ನಲ್ಲಿ ಮೂರು ಪ್ರತ್ಯೇಕ ಲೇನ್‌ಗಳಲ್ಲಿ 90 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಭಾನುವಾರ ಬೆಳಗ್ಗೆಯಿಂದಲೆ ಇಲ್ಲಿ ಪಟಾಕಿ ವಹಿವಾಟು ಆರಂಭವಾಗಿದೆ. ಮಕ್ಕಳು ಪಟಾಕಿ ಬಾಕ್ಸ್‌ಗಳ್ನು ಹಿಡಿದು ಪೋಷಕರ ಜೊತೆಗೆ ಖುಷಿಯಿಂದ ಓಡಾಡುವ ದೃಶ್ಯ ಸಾಮಾನ್ಯವಾಗಿದೆ.

Sigandur-Janthre-2026-scaled.

ಹೇಗಿದೆ ರೇಟ್‌? ಯಾವುದಕ್ಕೆ ಹೆಚ್ಚು ಡಿಮಾಂಡ್‌?

ಹಸಿರು ಪಟಾಕಿ ಮಾರಾಟ ಕಡ್ಡಾಯಗೊಳಿಸಿರುವ ಹಿನ್ನೆಲೆ ಎಲ್ಲ ಅಂಗಡಿಗಳಲ್ಲು ಅವುಗಳನ್ನೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಕೂಡ ಹಸಿರು ಪಟಾಕಿ ಕೇಳಿ ಖರೀದಿ ಮಾಡುತ್ತಿದ್ದಾರೆ. ಈ ಬಾರಿ ಬಿಡಿ ಪಾಟಕಿಗಿಂತಲು ಬಾಕ್ಸ್‌ಗಳಿಗೆ ಹೆಚ್ಚು ಡಿಮಾಂಡ್‌ ಇದೆ ಅನ್ನುತ್ತಾರೆ ವ್ಯಾಪಾರಿಗಳು.

ಒಂದು ಸಾವಿರ ರುಪಾಯಿಯಿಂದ ಪಟಾಕಿ ಬಾಕ್ಸ್‌ಗಳು ಲಭ್ಯವಿವೆ. ಹೆಚ್ಚು ಐಟಂಗಳಿದ್ದರೆ ಬಾಕ್ಸ್‌ ದರ ದುಬಾರಿಯಾಗಲಿದೆ. ಇನ್ನು, ಬಿಡಿ ಪಟಾಕಿ ಮಾರಾಟವು ಸಾಮಾನ್ಯವಾಗಿದೆ. ಲಕ್ಷ್ಮಿ ಪಟಾಕಿ, ಬಿಜಲಿ, ಸುರ್‌ಸುರ್‌ ಬತ್ತಿ, ಹೂವಿನ ಕುಂಡ, ಹೈಡ್ರೋ ಬಾಂಬ್‌, ರಾಕೆಟ್‌ಗಳು, ವಿವಿಧ ಕಾರ್ಟೂನ್‌ ಮಾದರಿಯ ಪಟಾಕಿಗಳು ಹೆಚ್ಚಾಗಿ ಬಿಡಿ ಮಾರಾಟವಾಗುತ್ತಿವೆ.

» ಮತ್ತೆ ಸುರಕ್ಷತೆ ಮರೆತ ಆಡಳಿತ

ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ ವ್ಯಾಪಾರ ಆರಂಭವಾಗಿದ್ದರೂ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಇಲ್ಲಿ ಫೈರ್‌ ಸೇಫ್ಟಿಗಾಗಿ ಬಕೆಟ್‌ಗಳನ್ನು ಇರಿಸಲಾಗಿದೆ. ಆದರೆ ಅವುಗಳಲ್ಲಿ ಮರಳು ಇಟ್ಟಿಲ್ಲ. ಡ್ರಮ್‌ಗಳನ್ನು ಸಾಲಾಗಿ ಇಡಲಾಗಿದೆ. ಆದರೆ ನೀರು ಇಟ್ಟಿಲ್ಲ. ಪಟಾಕಿ ವ್ಯಾಪಾರ ಆರಂಭಕ್ಕು ಮೊದಲು ಸುರಕ್ಷಿತ ಕ್ರಮ ಕೈಗೊಳ್ಳಬೇಕು. ಆದರೆ ಪ್ರತಿ ವರ್ಷ ವ್ಯಾಪಾರ ಆರಂಭವಾಗಿ, ಮಾಧ್ಯಮಗಳು ಸುರಕ್ಷತೆ ಪ್ರಶ್ನೆ ಮಾಡಿದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿರುವುದು ವಿಪರ್ಯಾಸ.

ಪಟಾಕಿ ವ್ಯಾಪಾರ ಹೇಗಿದೆ? ಇಲ್ಲಿವೆ ಫೋಟೊಗಳು

ಇದನ್ನೂ ಓದಿ » ದೀಪಾವಳಿ, ಪ್ರವಾಸಿಗರ ಸಂಖ್ಯೆ ಹೆಚ್ಚಳ, ಅ.21ರಂದೂ ಶಿವಮೊಗ್ಗ ಮೃಗಾಲಯ ಓಪನ್‌

Crackers

deepavali crackers sale at Shimoga Freedom park
ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ ಮಾರಾಟ ಮಳಿಗೆಗಳು
deepavali crackers sale at Shimoga Freedom park
ಪಟಾಕಿ ಖರೀದಿಸುತ್ತಿರುವ ಗ್ರಾಹಕ
deepavali crackers sale at Shimoga Freedom park
ಮಳಿಗೆಯಲ್ಲಿ ಪಟಾಕಿ ಖರೀದಿಸುತ್ತಿರುವ ಗ್ರಾಹಕರು
deepavali crackers sale at Shimoga Freedom park
ಪಟಾಕಿಗಳ ಕುರಿತು ವಿಚಾರಿಸುತ್ತಿರುವ ಗ್ರಾಹಕರು
deepavali crackers sale at Shimoga Freedom park
ಪಟಾಕಿ ಬಾಕ್ಸ್‌ಗಳನ್ನು ಖರೀದಿಸಿ ಪೋಷಕರ ಜೊತೆಗೆ ಸಂಭ್ರಮದಿಂದ ತೆರಳುತ್ತಿರುವ ಮಕ್ಕಳು
deepavali crackers sale at Shimoga Freedom park
ಉದ್ದದ ಊದುಬತ್ತಿ ಖರೀದಿಸುತ್ತಿರುವ ಗ್ರಾಹಕರು
deepavali crackers sale at Shimoga Freedom park
ಪಟಾಕಿ ವ್ಯಾಪಾರ ಆರಂಭವಾದರು ಸುರಕ್ಷತೆ ಕ್ರಮ ಕೈಗೊಂಡಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment