ಶಿವಮೊಗ್ಗ ಲೈವ್
ಶಿವಮೊಗ್ಗ: ಬೆಂಗಳೂರು ಮತ್ತು ಮೈಸೂರಿನಲ್ಲಿ ಹೌಸ್ಫುಲ್ ಪ್ರದರ್ಶನ ಕಂಡು ಜನಮೆಚ್ಚುಗೆ ಗಳಿಸಿರುವ ‘ಕ್ರೇಝಿ ಕುಟುಂಬ’ ಕೌಟುಂಬಿಕ ಹಾಸ್ಯ ನಾಟಕವು ಅಕ್ಟೋಬರ್ 24 ರ ಶನಿವಾರ ಸಂಜೆ 6:30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. (ಈ ಸುದ್ದಿಯನ್ನು ಇನ್ನು 30 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದ ನೇಟೀವ್ ಥಿಯೇಟರ್ ಸಂಸ್ಥೆಯು ಈ ನಾಟಕ ಪ್ರದರ್ಶನ ಆಯೋಜಿಸಿದೆ. ಬೆಂಗಳೂರಿನ ಅಂತರಂಗ ಬಹಿರಂಗ ರಂಗತಂಡವು ಪ್ರಸ್ತುತಪಡಿಸುತ್ತಿರುವ ಈ ನಾಟಕವನ್ನು ಸತೀಶ್ ಹುಳಿಯಾರ್ ರಚಿಸಿದ್ದು, ಸತೀಶ್ ಐತಾಳ್ ನಿರ್ದೇಶಿಸಿದ್ದಾರೆ. ನಾಟಕದ ಟಿಕೆಟ್ಗಳು ಆನ್ಲೈನ್ನಲ್ಲಿ ಹಾಗೂ ಪ್ರದರ್ಶನದ ದಿನ ರಂಗಮಂದಿರದಲ್ಲಿ ಲಭ್ಯವಿರಲಿದೆ. ಪ್ರವೇಶ ದರ ₹100 ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಶಂಕರ್ ಬೆಳಲಕಟ್ಟೆ ಮೊಬೈಲ್ ನಂಬರ್: 9148192739 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
