ಎರಡು ದಿನದ ಮಳೆಗೆ ನವುಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊಣಕಾಲುದ್ದ ನೀರು

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021

ನವುಲೆಯಲ್ಲಿರುವ ಕ್ರಿಕೆಟ್‍ ಸ್ಟೇಡಿಯಂ ಪುನಃ ಜಲಾವೃತವಾಗಿದೆ. ನೀರು ನಿಂತಿರುವುದರಿಂದ ಪಿಚ್‍ ಸಂಪೂರ್ಣ ಹಾನಿಗೊಳಗಾಗಿದೆ.

ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ನವುಲೆಯಲ್ಲಿ ಇರುವ ಕೆಎಸ್‍ಸಿಎ ಕ್ರಿಕೆಟ್‍ ಸ್ಟೇಡಿಯಂ ಸಂಪೂರ್ಣ ಮುಳುಗಿದೆ. ಪಿಚ್‍ನ ಒಳಗೆ ಕಾಲಿಡುವುದು ಕಷ್ಟವಾಗಿದೆ. ಪ್ರಾಕ್ಟೀಸ್ ಅಂಗಣವು ಜಲಾವೃತವಾಗಿದೆ.

ಸ್ಟೇಡಿಯಂನಿಂದ ನೀರು ಹೊರ ಹಾಯಿಸಿ, ಪುನಃ ಅಂಗಣವನ್ನು ಸಿದ್ಧಪಡಿಸಬೇಕಿದೆ.

ಜೋರು ಮಳೆಯಾದಾಗಲೆಲ್ಲ ಇದೆ ಸ್ಥಿತಿ

ಶಿವಮೊಗ್ಗದಲ್ಲಿ ಜೋರು ಮಳೆಯಾದಾಗಲೆಲ್ಲ ನವುಲೆಯ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತವಾಗುತ್ತಿದೆ. ಇದರಿಂದ ಪ್ರತಿ ಮಳೆಗಾಲದ ಬಳಿಕ ಪಿಚ್ ರಿಪೇರಿ ಕಾರ್ಯ ನಡೆಸುವುದು ಅನಿವಾರ್ಯವಾಗಿದೆ.

ಕೆರೆ ಜಾಗದಲ್ಲಿ ಸ್ಟೇಡಿಯಂ

ಕ್ರಿಕೆಟ್‍ ಸ್ಟೇಡಿಯಂ ನಿರ್ಮಾಣಕ್ಕಾಗಿ ನವುಲೆ ಕೆರೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. 26 ಎಕರೆ ಪ್ರದೇಶದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗಿದೆ. ಕರೆ ಜಾಗ ಮತ್ತು ತಗ್ಗು ಪ್ರದೇಶ ಆಗಿರುವುದರಿಂದ ಮಳೆ ಶುರುವಾದರೆ ಸ್ಟೇಡಿಯಂ ಕೆರೆಯಾಗಿ ರೂಪಾಂತರಗೊಳ್ಳಲಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

240721 Shimoga KSCA Stadium Drowned In water 1

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment