ಬೆಳಗಿನ ಜಾವ 4 ಗಂಟೆಗೆ ಗಾಂಧಿ ಬಜಾರಲ್ಲಿ ಅನುಮಾನಾಸ್ಪದ ವರ್ತನೆ | 3 CRIME NEWS

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 NOVEMBER 2022

ಬೆಳಗಿನ ಜಾವ 4 ಗಂಟೆಗೆ ಗಾಂಧಿ ಬಜಾರ್ ಕಾಂಪ್ಲೆಕ್ಸ್ ಮುಂದೆ ಇಬ್ಬರು ಅರೆಸ್ಟ್

ಶಿವಮೊಗ್ಗ : ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಅಂಗಡಿಯೊಂದರ NEWS-1-jpg.webpಮುಂದೆ ಅನುಮಾನಾಸ್ಪದವಾಗಿ (crime news) ಓಡಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಗಾಂಧಿ ಬಜಾರ್ ಎಸ್.ಎನ್.ಕಾಂಪ್ಲೆಕ್ಸ್ ಶಟರ್ ಬೀಗ ಅಲುಗಾಡಿಸುತ್ತಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ಇದನ್ನು ಗಮನಿಸಿದ್ದಾರೆ. ಪೊಲೀಸರು ಬರುತ್ತಿರುವುದನ್ನು ನೋಡಿ ಆರೋಪಿಗಳು ಮರೆಯಾಗಲು ಯತ್ನಿಸಿದ್ದಾರೆ.

Shimoga Nanjappa Hospital

ಆರೋಪಿಗಳನ್ನು ಸುತ್ತುವರೆದ ಪೊಲೀಸರು, ‘ಇಲ್ಲೇನು ಮಾಡುತ್ತಿದ್ದೀರ’ ಎಂದು ಪ್ರಶ್ನಿಸಿದ್ದಾರೆ. ಸಮರ್ಪಕ ಉತ್ತರ ನೀಡದ ಹಿನ್ನೆಲೆ ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲು ಮಾಡಿದ್ದಾರೆ. ಬಂಧಿತರನ್ನು ರಾಗಿಗುಡ್ಡದ ಸಯ್ಯದ್ ಶಫಿ ಮತ್ತು ಅಬ್ದುಲ್ ಗನಿ ಎಂದು ಗುರುತಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(crime news)

ನೆಹರೂ ರಸ್ತೆಯಲ್ಲಿ  ಮುಂದುವರೆದ ಬೈಕ್ ಕಳ್ಳರ ಹಾವಳಿ

ಶಿವಮೊಗ್ಗ : ನೆಹರು ರಸ್ತೆಯಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಇಲ್ಲಿನ ಕಲ್ಯಾಣ್ ಜ್ಯುವೆಲರ್ಸ್ NEWS 2 jpgಶೋ ರೂಂ ಮುಂಭಾಗ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ಸುಧೀರ್ ಪಾಟಕೆ ಎಂಬುವವರಿಗೆ ಸೇರಿದ ಹೋಂಡಾ ಶೈನ್ ಬೈಕ್ ಕಳ್ಳತನವಾಗಿದೆ. ರಾತ್ರಿ 8.15ರ ಹೊತ್ತಿಗೆ ಸುಧೀರ್ ಪಾಟಕೆ ಅವರು ಬೈಕ್ ತಂದು ನಿಲ್ಲಿಸಿದ್ದರು. ಸ್ವಲ್ಪ ಸಮಯದ ಬಳಿಕ ಪಾರ್ಕಿಂಗ್ ಜಾಗಕ್ಕೆ ಬಂದು ನೋಡಿದಾಗ ಬೈಕ್ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.  ಕೋಟೆ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

(crime news)

 ಹಳೆ ದ್ವೇಷ, ಫ್ಲೈ ಓವರ್ ಮೇಲೆ ತೆರಳುತ್ತಿದ್ದ ಬೈಕಿಗೆ ಮತ್ತು ಬೈಕಿನಿಂದ ಡಿಕ್ಕಿ, ಹಲ್ಲೆ

ಶಿವಮೊಗ್ಗ : ಹಳೆ ದ್ವೇಷದ ಹಿನ್ನೆಲೆ ದಂಪತಿ ತೆರಳುತ್ತಿದ್ದ ಬೈಕಿಗೆ ಮತ್ತೊಂದು ಬೈಕಿನಿಂದ ಡಿಕ್ಕಿ ಹೊಡೆಸಿ NEWS 3 jpgಅಪಘಾತಪಡಿಸಲಾಗಿದೆ. ಹೊನ್ನಾಳಿ ರಸ್ತೆಯಲ್ಲಿರುವ ಫ್ಲೈ ಓವರ್ ಮೇಲೆ ಘಟನೆ ಸಂಭವಿಸಿದೆ. ಮೆಹದಿ ನಗರದ ಮೀರ್ ಮುದಾಸಿರ್ ಹುಸೇನ್ ಮತ್ತು ಅವರ ಪತ್ನಿ ಸಬಾ ಫಿರ್ದೋಸ್ ಗಾಯಗೊಂಡಿದ್ದಾರೆ. ಹೋಂಡಾ ಆಕ್ಟೀವಾ ಬೈಕಿನಲ್ಲಿ ರಾಗಿಗುಡ್ಡಕ್ಕೆ ತೆರಳುತ್ತಿದ್ದಾಗ ಎದುರಿನಿಂದ ಬೈಕಿನಲ್ಲಿ ಬಂದ ರೆಹಮತ್ ಉಲ್ಲಾ ಷರೀಫ್ ಎಂಬಾತ ಡಿಕ್ಕಿ ಹೊಡೆಸಿದ್ದಾನೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದ ಗ್ರಾಹಕ ನ್ಯಾಯಾಲಯದ ಮಹತ್ವದ ಆದೇಶ, SBI ಬ್ಯಾಂಕಿಗೆ 1 ಲಕ್ಷ ರೂ. ದಂಡ

ಡಿಕ್ಕಿಯಾಗುತ್ತಿದ್ದಂತೆ ಮೀರ್ ಮುದಾಸಿರ್ ಹುಸೇನ್, ಅವರ ಪತ್ನಿ ಮತ್ತು ಮಗ ಕೆಳಗೆ ಬಿದ್ದಿದ್ದಾರೆ. ಆಗ ರೆಹಮತ್ ಉಲ್ಲಾ ಷರೀಫ್, ಮೀರ್ ಮುದಾಸಿರ್ ಹುಸೇನ್ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಪ್ರಕರಣವೊಂದರಲ್ಲಿ ರೆಹಮತ್ ಉಲ್ಲಾ ಷರೀಫ್ ವಿರುದ್ಧ ಮೀರ್ ಮುದಾಸಿರ್ ಹುಸೇನ್ ಸಾಕ್ಷಿಯಾಗಿದ್ದರು. ಆ ದ್ವೇಷದ ಹಿನ್ನೆಲೆ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment