ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 NOVEMBER 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA | ನಗರದ ಅರ್ಚಕ ವೃಂದ, ಭಜನಾ ಪರಿಷತ್, ಸಂಸ್ಕಾರ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.9ರಿಂದ 13ರ ವರೆಗೆ ರವೀಂದ್ರನಗರದ ಬಲಮುರಿ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಲಕ್ಷ ಮೋದಕ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಗಣಪತಿ ದೇವಸ್ಥಾನದ (ganesh temple) ಪ್ರಧಾನ ಅರ್ಚಕ ಅ.ಪ. ರಾಮಭಟ್ಟ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.9ರಂದು ಬೆಳಿಗ್ಗೆ 8.30ಕ್ಕೆ ಗಣಪತಿ (ganesh temple) ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಡಿ.13ರವರೆಗೂ ಪ್ರತಿದಿನ ಬೆಳಿಗ್ಗೆ 8ರಿಂದ ಯಾಗ ಆರಂಭಗೊಂಡು ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗಲಿದೆ. ಪ್ರತಿದಿನವು 10 ಜನ ಋತ್ವಿಜರು ಬೆಳಗಿನ ಜಾವ 3 ಗಂಟೆಯಿಂದ 20 ಸಾವಿರ ಮೋದಕಗಳನ್ನು ತಯಾರಿಸುತ್ತಾರೆ. ಐದು ದಿನಗಳವರೆಗೆ 1 ಲಕ್ಷ ಮೋದಕ ತಯಾರಿಸಿ ಹೋಮ ನಡೆಸಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಸಂಜೆ 5 ಗಂಟೆಗೆ ಭಜನಾ ಮಂಡಳಿಯವರಿಂದ ಭಜನೆ, ಸಹಸ್ರನಾಮ ಅರ್ಚನೆ, ಅಷ್ಟಾವಧಾನ ಸೇವೆ ಹಮ್ಮಿಕೊಳ್ಳಲಾಗುತ್ತದೆ. ಡಿ.9 ಮತ್ತು 10ರಂದು ಸಂಜೆ 6.30ಕ್ಕೆ ಕಾರ್ಕಳದ ವಾಗ್ಮಿ ವಿದ್ವಾಂಸ ಆದರ್ಶ ಗೋಖಲೆಯವರ ಉಪನ್ಯಾಸವಿರುತ್ತದೆ. ಕೊನೆಯ ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಗುವುದು ಎಂದರು.
ಭಜನಾ ಪರಿಷತ್‌ನ ಶಬರೀಶ್ ಕಣ್ಣನ್ ಮಾತನಾಡಿ, ಇದೊಂದು ಅಪರೂಪದ ಯಾಗವಾಗಿದೆ. ಎಲ್ಲ ಕಷ್ಟಗಳಿಗೂ ನಾವು ವಿಜ್ಞೇಶ್ವರನ ಮೊರೆಹೋಗುತ್ತೇವೆ. ಗಣಪತಿ ನಮ್ಮನ್ನು ಅನುಗ್ರಹಿಸುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ. ಹಾಗಾಗಿ ಭಕ್ತರು ಈ ಲಕ್ಷ ಮೋದಕ ಯಾಗದಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥ ಸಂಕಲ್ಪ ಈಡೇರಿಸಿಕೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್. ಶ್ರೀಧರ್, ಶಂಕರನಾರಾಯಣ, ಗಣೇಶ್ ಅಡಿಗ, ಗೋಪಾಲ ಭಟ್ಟ ಇದ್ದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದ ಮನೆ ಮಾಲೀಕರಿಗೆ ಪೊಲೀಸರಿಂದ 4 ಪಾಯಿಂಟ್ ಸೂಚನೆ, ಏನದು? ಯಾಕಾಗಿ ಈ ಪ್ರಕಟಣೆ?
(ganesh temple)
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.