ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 MARCH 2023
SHIMOGA : ನವುಲೆಯಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ (Krushi Mela) ಭಾನುವಾರ ದೊಡ್ಡ ಸಂಖ್ಯೆಯ ಜನರು ಆಗಮಿಸಿದ್ದರು. ನಗರ ಮತ್ತು ವಿವಿಧ ತಾಲೂಕಿನ ರೈತರು ಮೇಳಕ್ಕೆ ಆಗಮಿಸಿ, ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದರು.
ನವುಲೆಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಕೃಷಿ ಮತ್ತು ತೋಟಗಾರಿಕ ಮೇಳ (Krushi Mela) ಆಯೋಜಿಸಲಾಗಿದೆ. ಮಾರ್ಚ್ 20ರವರೆಗೆ ಮೇಳ ನಡೆಯಲಿದೆ. ಭಾನುವಾರ ರಜೆ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೇಳಕ್ಕೆ ಆಗಮಿಸಿದ್ದರು.
ಕುಟುಂಬ ಸಹಿತ ಆಗಮಿಸಿದ್ದ ಜನರು ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸಂಬಂಧ ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು.
ಜನರನ್ನು ಸೆಳೆದ ಕೀಟ ಪ್ರಪಂಚ
ಮೇಳದಲ್ಲಿರುವ ಕೀಟ ಪ್ರಪಂಚ ಜನರನ್ನು ಸೆಳೆಯಿತು. ಕೀಟಗಳ ಕುರಿತು ಪ್ರಮುಖ ಮಾಹಿತಿ, ಪ್ರಾತ್ಯಕ್ಷಿಕೆ ಇಲ್ಲಿದೆ. ಹಾಗಾಗಿ ಜನರು ಕೀಟಗಳ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಅವಕಾಶವಾಯಿತು. ಮಕ್ಕಳು ಕುತೂಹಲದಿಂದ ಬಗೆಬಗೆಯ ಕೀಟಗಳನ್ನು ಕಣ್ತುಂಬಿಕೊಂಡರು.
ರೈತರಿಗೂ ಪ್ರಾತ್ಯಕ್ಷಿಕೆ, ಖರೀದಿಗೆ ವ್ಯವಸ್ಥೆ
ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ವಿವಿಧ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ರೈತರು ಕೃಷಿ ಚಟುವಟಿಕೆಗೆ ಅನುಕೂಲ ಆಗುವ ವಿವಿಧ ಉಪಕರಣಗಳ ಕುರಿತು ಪ್ರದರ್ಶನ ಮಳಿಗೆಗಳಲ್ಲಿ ಮಾಹಿತಿ ಪಡೆದರು. ಕೆಲವು ಕೃಷಿ ಉಪಕರಣಗಳನ್ನು ಖರೀದಿಸಿದರು. ಇನ್ನೂ ಕೆಲವರು ಮಹಿತಿ ಪಡೆದು, ಉಪಕರಣಗಳನ್ನು ಸ್ವತಃ ಬಳಕೆ ಮಾಡಿ ಅನುಭವ ಪಡೆದರು.
ರಜೆ ದಿನವಾದ್ದರಿಂದ್ದ ಶಿವಮೊಗ್ಗ ನಗರ ಮತ್ತು ಅಕ್ಕಪಕ್ಕದ ತಾಲೂಕಿನಿಂದಲು ಜನರು ಕೃಷಿ ಮೇಳಕ್ಕೆ ಆಗಮಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ MRS ಸರ್ಕಲ್ ಗೆ ಹೊಸ ಹೆಸರು ನಾಮಕರಣಕ್ಕೆ ಸಿಎಂಗೆ ಮನವಿ, ಯಾರ ಹೆಸರು ಸೂಚಿಸಲಾಗಿದೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422