SHIMOGA | ಸ್ಫೋಟದ ಎಫೆಕ್ಟ್, ಕಲ್ಲಗಂಗೂರು, ಹುಣಸೋಡು ಸುತ್ತಮುತ್ತ ಕ್ವಾರಿ, ಕ್ರಷರ್‌ನಲ್ಲಿ ಕೆಲಸ ಸ್ಥಗಿತ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021

ಕಲ್ಲುಗಂಗೂರು ಗ್ರಾಮದ ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದ ಬೆನ್ನಿಗೆ, ಅಕ್ರಮ ಗಣಿಗಾರಿಕೆ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ. ಇದೆ ಕಾರಣಕ್ಕೆ ಸುತ್ತಮುತ್ತಲು ಇರುವ ಕ್ವಾರಿಗಳಲ್ಲಿ ಇವತ್ತು ಕೆಲಸ ಸ್ಥಗಿತವಾಗಿದೆ.

ಕಲ್ಲುಗಂಗೂರು, ಹುಣಸೋಡು ಸುತ್ತಮುತ್ತಲು 50ಕ್ಕೂ ಹೆಚ್ಚು ಕಲ್ಲು ಕ್ವಾರಿ, ಕ್ರಷರ್‍ಗಳಿವೆ ಎಂದು ಸ್ಥಳೀಯರು ತಿಳಿಸುತ್ತಾರೆ. ಗುರುವಾರ ರಾತ್ರಿ ಸಂಭವಿಸಿದ ಸ್ಫೋಟದ ಬಳಿಕ ಕ್ವಾರಿಗಳು, ಜೆಲ್ಲಿ ಕ್ರಷರ್‍ಗಳಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ.

ಕ್ರಷರ್‍ಗಳು ಸ್ಥಗಿತವಾಗಿರುವುದರಿಂದ ಹುಣಸೋಡು, ಕಲ್ಲಗಂಗೂರು ರಸ್ತೆಯಲ್ಲಿ ಟಿಪ್ಪರ್ ಲಾರಿಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆಯ ತುಂಬಾ ಅಲ್ಲಲ್ಲಿ ಪೊಲೀಸರು ಬ್ಯಾರಿಕೇಡ್‍ ಹಾಕಿಕೊಂಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಮತ್ತು ಸ್ಥಳೀಯರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡುತ್ತಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 22, 2021 at 3:42 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 22, 2021

Leave a Comment