ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮುನಿಸು ತಣಿಸಲು ಇವತ್ತು ಬಿಜೆಪಿ ಮುಖಂಡರು ಇನ್ನಿಲ್ಲದ ಪ್ರಯತ್ನ ನಡೆಸಿದರು. ಬೆಳಗ್ಗೆಯಿಂದಲು ಈಶ್ವರಪ್ಪ ಮನೆಗೆ ರಾಜ್ಯ, ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಭೇಟಿ ನೀಡಿದ್ದರು. ಸಂಧಾನ ನಡೆಸಿ, ಪ್ರಧಾನಿ ಮೋದಿ ಅವರ ಸಮಾವೇಶಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಬೆಳಗ್ಗೆಯಿಂದ ಏನೇನು ನಡೆಯಿತು?
ರಾಜ್ಯ, ಜಿಲ್ಲಾ ಮಟ್ಟದ ನಾಯಕರ ನಿಯೋಗ
ಭಾನುವಾರ ಬೆಳಗ್ಗೆ ವಿಧಾನ ಪರಿಷತ್ ಸಚೇತಕ ಎನ್.ರವಿಕುಮಾರ್, ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ನೇತೃತ್ವದ ನಿಯೋಗ ಶಿವಮೊಗ್ಗದ ಈಶ್ವರಪ್ಪ ಅವರ ಮಲ್ಲೇಶ್ವರ ನಗರದ ಮನೆಗೆ ಭೇಟಿ ನೀಡಿತ್ತು. ಸುಮಾರು ಒಂದು ಗಂಟೆ ಈಶ್ವರಪ್ಪ ಅವರೊಂದಿಗೆ ಚರ್ಚೆ ನಡೆಸಿದರು.
ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ
ನಿಯೋಗದ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ‘ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಅಂತ ಘೋಷಣೆ ಮಾಡಿದ್ದೇನೆ. ಹಿಂದೆ ಸರಿಯುವ ಮಾತೇ ಇಲ್ಲ. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಿಕೊಂಡಿದೆ. ಯಡಿಯೂರಪ್ಪ ಹೇಳಿದಂತೆ ವರಿಷ್ಠರು ಕೇಳುತ್ತಾರೆ. ಕೇಂದ್ರದ ನಾಯಕರು ಯಡಿಯೂರಪ್ಪ ದೊಡ್ಡ ನಾಯಕ ಅಂದುಕೊಂಡಿದ್ದಾರೆ. ಆದರೆ ಅವರು ಕೆಜೆಪಿ ಕಟ್ಟಿದಾಗ 6 ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದರು. ಪಕ್ಷ ಹೇಳಿದಂಗೆ ಇಲ್ಲಿಯವರೆಗೆ ನಾನು ಕೇಳಿದ್ದೇನೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕಪಿಮುಷ್ಠಿಯಲ್ಲಿರುವ ಪಕ್ಷವನ್ನು ತಪ್ಪಿಸಲು ಸ್ಪರ್ಧೆ ಮಾಡುತ್ತಿದ್ದೇನೆʼ ಎಂದು ತಿಳಿಸಿದರು.
ಈಶ್ವರಪ್ಪ ಮನೆಗೆ ಆನಂದ ಗುರೂಜಿ
ಇವೆಲ್ಲದರ ಮಧ್ಯೆ ಆನಂದ ಗುರೂಜಿ ಅವರು ಈಶ್ವರಪ್ಪ ಅವರ ಮನೆಗೆ ಭೇಟಿ ನೀಡಿದ್ದರು. ಕೆಲ ಹೊತ್ತು ಚರ್ಚೆ ನಡೆಸಲಾಯಿತು. ಬಳಿಕ ಮಾತನಾಡಿದ ಆನಂದ ಗುರೂಜಿ, ‘ತಾಯಿ ಚಾಮುಂಡೇಶ್ವರಿ ಹಾಗೂ ಮಾರಿಕಾಂಬೆಯ ಆಶೀರ್ವಾದ ಈಶ್ವರಪ್ಪ ಅವರ ಮೇಲಿದೆ. ಅವರ ಮನಸ್ಸಿನ ನೋವು ಬೇಗ ಪರಿಹಾರವಾಗಲಿ. ಮಾರಿಕಾಂಬ ಫೈನಾನ್ಸ್ ಮೂಲಕ ಸಾವಿರಾರು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಹಾಗಾಗಿ ಅವರಿಗೆ ಮಹಿಳೆಯರ ಆಶೀರ್ವಾದ ಇದೆ. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದಾರೆ. ಹಿಂದೂ ಧರ್ಮವನ್ನು ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರು ಜಯಶಾಲಿಯಾಗಲಿ ಎಂದು ಹಾರೈಸಲು ಬಂದಿದ್ದೇನೆʼ ಎಂದು ತಿಳಿಸಿದರು.
ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರ್ತಾರೆ
ಇನ್ನು, ಅಲ್ಲಮಪ್ರಭು ಮೈದಾನದಲ್ಲಿ ಬಿಜೆಪಿ ಸಮಾವೇಶದ ಸಿದ್ಧತೆ ಪರಿಶೀಲನೆ ಬಳಿಕ ಮಾತನಾಡಿದ ವಿಧಾನ ಪರಿಷತ್ ಸಚೇತಕ ಎನ್.ರವಿಕುಮಾರ್, ‘ಈಶ್ವರಪ್ಪ ಅವರನ್ನು ಆಹ್ವಾನಿಸಿದ್ದೇವೆ. ಅವರು ಸಮಾವೇಶಕ್ಕೆ ಆಗಮಿಸುತ್ತಾರೆ ಎಂಬ ಭರವಸೆ ಇದೆ. ನಮ್ಮ ಪಕ್ಷ ಕಟ್ಟಿದವರಲ್ಲಿ ಈಶ್ವರಪ್ಪ ಅವರು ಅಗ್ರಗಣ್ಯರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಎಂದು ತಿಳಿಸಿದ್ದೇವೆ. ನೋಡೋಣ ಅಂದಿದ್ದಾರೆʼ ಎಂದು ತಿಳಿಸಿದರು.
ಕಾದೂ ಕಾದು ಹೊರ ನಡೆದ ರಾಷ್ಟ್ರೀಯ ನಾಯಕ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಮೋಹನ್ ದಾಸ್ ಅಗರ್ವಾಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸೇರಿದಂತೆ ಹಲವು ಪ್ರಮುಖರು ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ಕೆಲವು ನಿಮಿಷ ಈಶ್ವರಪ್ಪ ಚರ್ಚೆ ನಡೆಸಿದರು. ಬಳಿಕ ಈಶ್ವರಪ್ಪ ಅವರು ಕಾರ್ಯಕ್ರಮಕ್ಕಾಗಿ ಮನೆಯಿಂದ ನಿರ್ಗಮಿಸಿದರು. ಇತ್ತ ಈಶ್ವರಪ್ಪ ಅವರಿಗಾಗಿ ಬಹು ಹೊತ್ತು ಕಾದು ಕುಳಿತ ನಾಯಕರು ಬಳಿಕ ಮನೆಯಿಂದ ತೆರಳಿದರು.
ಮಧ್ಯಾಹ್ನದ ವೇಳೆಗೆ ಈಶ್ವರಪ್ಪ ಆಗಮನ
ಮಧ್ಯಾಹ್ನದ ಹೊತ್ತಿಗೆ ಈಶ್ವರಪ್ಪ ಅವರು ಮಲ್ಲೇಶ್ವರ ನಗರದ ತಮ್ಮ ಮನೆಗೆ ಆಗಮಿಸಿದರು. ಬೆಂಬಲಿಗರು, ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿದರು.
‘ಮೋದಿಗೆ ನನ್ನ ಬೆಂಬಲ’
ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಈಶ್ವರಪ್ಪ, ‘ಬಿಜೆಪಿ ಮುಖಂಡರು ಭೇಟಿ ಮಾಡಿದ್ದರು. ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾರಣವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ನರೇಂದ್ರ ಮೋದಿಯವರ ಆಶಯದಂತೆ ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬರಬೇಕು. ನನ್ನ ಜೊತೆಗಿನ ಚರ್ಚೆಯನ್ನು ಬಿಜೆಪಿ ಹೈಕಮಾಂಡ್ಗೆ ಅವರು ತಿಳಿಸುತ್ತಾರೆ. ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ನಾನು ಬರುವುದಿಲ್ಲ ಚುನಾವಣೆಯಲ್ಲಿ ಗೆದ್ದು ಮೋದಿಗೆ ಬೆಂಬಲಿಸುವುದಾಗಿ ತಿಳಿಸಿದ್ದೇನೆ. ಮೋದಿಯನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಾನು ಜೊತೆಗಿರುವುದಾಗಿ ತಿಳಿಸಿದ್ದೇನೆʼ ಎಂದರು.
ಅಭಿಮಾನಿಗಳು, ಬೆಂಬಲಿಗರ ಭೇಟಿ, ಚರ್ಚೆ
ಸಂಜೆ ವೇಳೆಗೆ ಈಶ್ವರಪ್ಪ ಅವರು ಅಭಿಮಾನಿಗಳು, ಬೆಂಬಲಿಗರ ಜೊತೆ ಚುನಾವಣೆ ರಣತಂತ್ರ ಕುರಿತು ಚರ್ಚೆ ನಡೆಸಿದರು.
ಇದನ್ನೂ ಓದಿ – ಶಿವಮೊಗ್ಗ ಸಮಾವೇಶದಲ್ಲಿ ಜನರ ಬಳಿ ಬರಲಿದ್ದಾರೆ ಪ್ರಧಾನಿ ಮೋದಿ, ಡಿಫರೆಂಟ್ ಎಂಟ್ರಿಗೆ ಬಿಜೆಪಿ ಪ್ಲಾನ್, ಹೇಗದು?