ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 25 JULY 2023
SHIMOGA : ಸ್ಮಾರ್ಟ್ ಸಿಟಿ ಯೋಜನೆಯ ವಿದ್ಯುತ್ ಕಾಮಗಾರಿಗಳ ಕುರಿತು ಜನರು ಆಕ್ಷೇಪ ಮತ್ತು ಆತಂಕ ವ್ಯಕ್ತಪಡಿಸುತ್ತಿರುವುದು ಹೊಸತೇನಲ್ಲ. ಈಗ ನಗರದ ಹಿರಿಯ ಅಧಿಕಾರಿಗೆ ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ವಿದ್ಯುತ್ ಕಾಮಗಾರಿಯಿಂದ ಕರೆಂಟ್ ಶಾಕ್ (Shock) ತಗುಲಿದೆ. ಇದನ್ನು ಖುದ್ದು ಅಧಿಕಾರಿಯೆ ಬಹಿರಂಗಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್, ಈಚೆಗಷ್ಟೆ ಸ್ಮಾರ್ಟ್ ಸಿಟಿ ಎಂ.ಡಿ. ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮಾಯಣ್ಣ ಗೌಡ ಅವರಿಗೆ ಕರೆಂಟ್ ಶಾಕ್ ಹೊಡೆದಿದೆ. ಇದನ್ನು ಸ್ವತಃ ಮಾಯಣ್ಣಗೌಡ ಅವರೆ ಬಹಿರಂಗಪಡಿಸಿದ್ದಾರೆ.
ಏನಿದು ಕರೆಂಟ್ ಶಾಕ್ ಕೇಸ್?
ಶಿವಮೊಗ್ಗ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಭೂಗತ ವಿದ್ಯುತ್ ಕೇಬಲ್ ಅವೈಜ್ಞಾನಿಕ ಕಾಮಗಾರಿ, ಲೋಪಗಳ ಕುರಿತು ಪಕ್ಷಾತೀತವಾಗಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಮಾತನಾಡಿದ ಕಮಿಷನರ್ ಮಾಯಣ್ಣಗೌಡ, ತಮಗೆ ಕರೆಂಟ್ ಹೊಡೆದ ವಿಚಾರವನ್ನು ಪ್ರಸ್ತಾಪಿಸಿದರು.
ತುಂಗಾ ನದಿ ತೀರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಮಂಟಪ ಮುಳುಗಿರುವುದನ್ನು ಜನರು ವೀಕ್ಷಿಸಲು ಮಂಟಪದ ಸಮೀಪ ತೆರಳಲು ಅವಕಾಶವಿಲ್ಲ. ಅಲ್ಲಿ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಜನರು ಮಂಟಪ ನೋಡಲು ಅವಕಾಶ ಕೊಡಿ ಎಂದು ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಈ ಹಿನ್ನೆಲೆ ಪರಿಶೀಲನೆಗೆ ಸ್ಥಳಕ್ಕೆ ತೆರಳಿದ್ದಾಗ ಕರೆಂಟ್ ಶಾಕ್ (Shock) ಹೊಡೆದಿದೆ ಎಂದು ಮಾಯಣ್ಣ ಗೌಡ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಶಾಲೆಗಳಿಗೆ ರಜೆ ವಿಚಾರ, ಶಿಕ್ಷಣ ಇಲಾಖೆಯಿಂದ ಪ್ರಮುಖ ಸೂಚನೆ, ಯಾವ್ಯಾವ ಶಾಲೆಗೆ ರಜೆ ಸಿಗುತ್ತೆ?
‘ಸ್ಥಳಕ್ಕೆ ಭೇಟಿ ನೀಡಿದಾಗ ವಿದ್ಯುತ್ ವಯರ್ ಒಂದನ್ನು ನೆಲಕ್ಕೆ ಹಾಗೆ ಬಿಡಲಾಗಿತ್ತು. ಅದರ ಮೇಲೆ ಕಲಿಟ್ಟಾಗ ನನಗೆ ಕರೆಂಟ್ ಶಾಕ್ ಹೊಡೆಯಿತು. ಕೂಡಲೆ ಫೋಟೊಗಳನ್ನು ತೆಗೆದು ಸ್ಮಾರ್ಟ್ ಸಿಟಿಯ ವಾಟ್ಸಪ್ ಗ್ರೂಪ್‌ನಲ್ಲಿ ಕಳುಹಿಸಿದೆ. ಇದನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಿದೆʼ ಎಂದು ತಿಳಿಸಿದರು.