ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 DECEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ವಾಹನಗಳ ವೇಗ ತಗ್ಗಿಸಿ ಅಪಘಾತ ತಪ್ಪಿಸಲು ರಸ್ತೆಗಳಲ್ಲಿ ಹಂಪ್ ಅಳವಡಿಸಲಾಗುತ್ತದೆ. ಅದರೆ ಇಲ್ಲಿ ಹಂಪ್‌ಗಳಿಂದಲೆ ಅಪಘಾತ ಸಂಭವಿಸುವಂತಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಎದುರಿನ ರಸ್ತೆಯಲ್ಲಿ ಹಾಳಾದ ಹಂಪ್‌ಗಳು ಅಪಘಾತಕ್ಕೆ ಕಾರಣವಾಗುತ್ತಿವೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರೈಲ್ವೆ ನಿಲ್ದಾಣದ ಎದುರಿನ ನೂರು ಅಡಿ ರಸ್ತೆಯಲ್ಲಿ ಎರಡು ಕಡೆ ರಬ್ಬರ್ ಹಂಪ್ ಹಾಕಲಾಗಿದೆ. ರೈಲ್ವೆ ನಿಲ್ದಾಣದ ತಿರುವಿನ ಎರಡು ಬದಿ ಮತ್ತು ಅಮೀರ್ ಅಹಮದ್ ಕಾಲೋನಿಯಲ್ಲಿ ಎರಡು ಬದಿಯಲ್ಲಿ ರಬ್ಬರ್ ಹಂಪ್‌ಗಳನ್ನು ಅಳವಡಿಸಲಾಗಿದೆ. ಈ ಹಂಪ್‌ಗಳು ಕಿತ್ತು ಹೋಗಿದ್ದು ಅಪಾಘಾತಕ್ಕೆ ಕಾರಣವಾಗಿವೆ.
ಅಪಘಾತಕ್ಕೆ ಕಾರಣವೇನು?
ರಬ್ಬರ್ ಹಂಪ್‌ಗಳ ಮಧ್ಯ ಭಾಗ ಕಿತ್ತು ಹೋಗಿದೆ. ಬಹುತೇಕ ದ್ವಿಚಕ್ರ ವಾಹನ ಸವಾರರು ವೇಗ ತಗ್ಗಿಸುವ ಬದಲು ಕಿತ್ತು ಹೋದ ಜಾಗದಲ್ಲಿಯೇ ಚಲಿಸಲು ಯತ್ನಿಸುತ್ತಾರೆ. ಹಿಂಬದಿಯ ವಾಹನಗಳನ್ನು ಗಮನಿಸದೆ ಏಕಾಏಕಿ ರಸ್ತೆ ಮಧ್ಯೆಗೆ ತರಳುತ್ತಿದ್ದಾರೆ. ಇದರಿಂದ ನಿತ್ಯ ಒಂದಿಲ್ಲೊಂದು ಅಪಘಾತವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ಇನ್ನು ವಾಹನಗಳ ವೇಗ ತಗ್ಗದಿದ್ದರೆ ಹಂಪ್‌ಗಳ ಅಗತ್ಯವೇನು ಎಂದು ಪ್ರಶ್ನಿಸುತ್ತಾರೆ.
ರಬ್ಬರ್ ಹಂಪ್‌ಗಳನ್ನು ಅಳವಡಿಸಲು ಹುಕ್ ಮಾದರಿ ಕಂಬಿಗಳನ್ನು ಹಾಕಲಾಗಿದೆ. ಈಗ ಹಂಪ್‌ಗಳು ಕಿತ್ತು ಹೋಗಿರುವುದರಿಂದ ಈ ಕಂಬಿಗಳು ವಾಹನಗಳ ಚಕ್ರಗಳಿಗೆ ಹಾನಿ ಉಂಟು ಮಾಡುತ್ತಿವೆ. ರೈಲ್ವೆ ನಿಲ್ದಾಣ ಮತ್ತು ಅಮೀರ್ ಅಹಮದ್ ಕಾಲೋನಿ ಸಮೀಪ ದೊಡ್ಡ ಅನಾಹುತ ಸಂಭವಿಸುವ ಮೊದಲು ಹಂಪ್‌ಗಳನ್ನು ಸರಿಪಡಿಸಬೇಕಿದೆ.
ಇದನ್ನೂ ಓದಿ – ಹೊಳೆ ಬಸ್ ಸ್ಟಾಪ್‌ನಿಂದ ಅಮೀರ್ ಅಹಮದ್ ಸರ್ಕಲ್‌ವರೆಗೆ ಪಾರ್ಕಿಂಗ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಆದೇಶ