ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಜಂಬೂ ಸವಾರಿ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಸಕ್ರೆಬೈಲು ಬಿಡಾರದ ಆನೆಗಳು ಗಜಪಡೆ ಕೊನೆ ಹಂತದ ತಾಲೀಮು ನಡೆಸಿದವು. ಈ ಸಂದರ್ಭ ಸಂಚಾರ ನಿಯಮ (Traffic Rules) ಪಾಲಿಸಿ ಮಾದರಿಯಾದವು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರೆಡ್ ಸಿಗ್ನಲ್‌ನಲ್ಲಿ ನಿಂತ ಆನೆಗಳು
ಗಜಪಡೆ ತಾಲೀಮು ಹಿನ್ನೆಲೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮಾರ್ಗದುದ್ದಕ್ಕು ಸಂಚಾರ ಠಾಣೆ ಪೊಲೀಸರು ವಾಹನಗಳನ್ನು ನಿಯಂತ್ರಿಸುತ್ತಿದ್ದರು. ಗಜಪಡೆ ಜೈಲ್ ಸರ್ಕಲ್‌ಗೆ ಆಗಮಿಸಿದಾಗ ಸಿಗ್ನಲ್‌ನಲ್ಲಿ ರೆಡ್ ಲೈಟ್ ಕಾಣಿಸಿತು. ತಾಲೀಮು ನಡೆಸುತ್ತಿದ್ದ ಆನೆಗಳು ಸಿಗ್ನಲ್‌ನಲ್ಲಿ ನಿಂತವು. ಸಿಗ್ನಲ್ ಲೈಟ್ ಹಸಿರು ಬಣ್ಣಕ್ಕೆ ತಿರುಗುತ್ತಿದ್ದಂತೆ ಆನೆಗಳು ಪುನಃ ತಾಲೀಮು ಮುಂದುವರೆಸಿದವು.
ಮತ್ತೆ ಸಿಗ್ನಲ್‌ನಲ್ಲಿ ನಿಂತ ಆನೆಗಳು
ಫ್ರೀಡಂ ಪಾರ್ಕ್‌ನತ್ತ ತೆರಳುತ್ತಿದ್ದ ಸಾಗರ ಆನೆ ನೇತೃತ್ವದ ಗಜಪಡೆಗೆ ಲಕ್ಷ್ಮೀ ಟಾಕೀಸ್ ಬಳಿ ಸಿಗ್ನಲ್‌ನಲ್ಲಿ ಪುನಃ ರೆಡ್ ಲೈಟ್ ಎದುರಾಯಿತು. ಮೂರು ಆನೆಗಳು ಸಿಗ್ನಲ್‌ನಲ್ಲಿ ನಿಂತು, ಗ್ರೀನ್ ಲೈಟ್ ಕಾಣಿಸುತ್ತಿದ್ದಂತೆ ಮುಂದೆ ಸಾಗಿದವು.
ಇದನ್ನೂ ಓದಲು – ಶಿವಮೊಗ್ಗ ಜಂಬೂ ಸವಾರಿ, ಗಜಪಡೆಗೆ ಕೊನೆ ಹಂತದ ತಾಲೀಮು, ಬನ್ನಿ ಮಂಟಪ ರೆಡಿ, ಹೇಗಿದೆ ವ್ಯವಸ್ಥೆ?
ತಾಲೀಮು ನಡೆಸುತ್ತಿದ್ದ ಗಜಪಡೆಗೆ ಮಾರ್ಗದುದ್ದಕ್ಕೂ ಯಾವುದೇ ಅಡ್ಡಿಯಾಗದಂತೆ ಪೊಲೀಸ್ ಇಲಾಖೆ ಮುತುವರ್ಜಿ ವಹಿಸಿತ್ತು. ಆನೆಗಳು ಸಿಗ್ನಲ್‌ನಲ್ಲಿ ನಿಲ್ಲದೆ ಮುಂದೆ ಸಾಗಿದ್ದರು ಪ್ರಶ್ನೆ ಮಾಡಲು ಆಗುತ್ತಿರಲಿಲ್ಲ. ಆದರೆ ರೆಡ್ ಸಿಗ್ನಲ್‌ನಲ್ಲಿ ಆನೆಗಳನ್ನು ನಿಲ್ಲಿಸಿ, ಮಾವುತರು, ಸಕ್ರೆಬೈಲು ಸಿಬ್ಬಂದಿ ಜನರಲ್ಲಿ ಸಂಚಾರ ನಿಯಮಗಳ ಜಾಗೃತಿ ಮೂಡಿಸಿದರು.
ಅಡ್ಡಾದಿಡ್ಡಿ ಓಡಾಡುವವರಿಗೆ ಪಾಠ
ರೆಡ್ ಸಿಗ್ನಲ್ ಇದ್ದರು ವಾಹನಗಳನ್ನು ಅಡ್ಡಾದಿಡ್ಡಿ ಚಲಿಸುವವರಿಗೇನು ಕಡಿಮೆ ಇಲ್ಲ. ಸಂಚಾರ ನಿಯಮದ ಕುರಿತು ಪೊಲೀಸ್ ಇಲಾಖೆ ಹಲವು ಬಾರಿ ಜಾಗೃತಿ ಮೂಡಿಸಿದೆ. ಅಲ್ಲದೆ ಸ್ಮಾರ್ಟ್ ಸಿಟಿ ಕ್ಯಾಮರಾ ಬಳಸಿ ನಿಯಮ ಉಲ್ಲಂಘಿಸುವವರಿಗೆ ದಂಡವನ್ನೂ ವಿಧಿಸುತ್ತಿದೆ. ಆದರೂ ಸಿಗ್ನಲ್ ಬ್ರೇಕ್ ಮಾಡುವವರಿಗೆ ಬಿಸಿ ಮುಟ್ಟಿದ್ದಂತೆ ತೊರುತ್ತಿಲ್ಲ. ಆದರೆ ಆನೆಗಳು ಸಂಚಾರ ನಿಯಮ ಪಾಲಿಸಿ ಇಂತಹವರಿಗೆ ‘ಬುದ್ದಿ ಕಲಿಸಿವೆ’. ಆನೆಗಳ ಕಾರ್ಯಕ್ಕೆ ಸಂಚಾರ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.