ಹೊಳೆ ಬಸ್‌ ಸ್ಟಾಪ್‌ನಿಂದ ಅಮೀರ್‌ ಅಹಮದ್‌ ಸರ್ಕಲ್‌ವರೆಗೆ ಪಾರ್ಕಿಂಗ್‌ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಆದೇಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 DECEMBER 2023

SHIMOGA : ನಗರದ ಬಿ.ಹೆಚ್.ರಸ್ತೆಯ ಹೊಳೆಬಸ್ ಸ್ಟಾಪ್‍ನಿಂದ ಅಮೀರ್ ಅಹಮದ್ ಸರ್ಕಲ್‍ವರೆಗೆ ಸುಗಮ ಸಂಚಾರ ದೃಷ್ಟಿಯಿಂದ ವಿವಿಧೆಡೆ ದ್ವಿಚಕ್ರ ಮತ್ತು ಕಾರ್‌ಗಳ ನಿಲುಗಡೆ ಮತ್ತು ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?

ಅಮೀರ್ ಅಹಮದ್ ಸರ್ಕಲ್‍ನಿಂದ ಮಹಾನಗರಪಾಲಿಕೆ ಕಾಂಪ್ಲೆಕ್ಸ್‍ವರೆಗೆ (ಕುಚಲಕ್ಕಿ ಕೇರಿ ಕ್ರಾಸ್ ಎದುರು) ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.

ಅಮೀರ್ ಅಹಮದ್ ಸರ್ಕಲ್‍ನಿಂದ ಶಿವಪ್ಪನಾಯಕ ಸರ್ಕಲ್ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯ ಬಲಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.

ಸಾವರ್ಕರ್ ನಗರ ಕ್ರಾಸ್ (ಡಯಟ್ ಕಾಲೇಜ್ ಕ್ರಾಸ್) ನಿಂದ ಯೂನಿಲೆಟ್ ಮಳಿಗೆವರೆಗೆ ಬಲಬದಿ ಎಲ್ಲಾ ವಿಧದ ವಾಹನಗಳು ನಿಲುಗಡೆ ನಿಷೇಧ.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಗೇಟ್‍ನಿಂದ ಮೆಡ್‍ಪ್ಲಸ್ ಮೆಡಿಕಲ್ ಶಾಪ್‍ವರೆಗೆ ಎಡ ಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ

parking-in-bh-road

ಲೂರ್ದುನಗರ ಕ್ರಾಸ್‍ನಿಂದ ಸೇಕ್ರೆಡ್ ಹಾರ್ಟ್ ಚರ್ಚ್ 2ನೇ ಗೇಟ್‍ವರೆಗೆ ಎಡಬದಿಯಲ್ಲಿ ಎಲ್ಲ ವಿಧದ ವಾಹನಗಳ ನಿಲುಗಡೆ ನಿಷೇಧ.

ಕರ್ನಾಟಕ ಸಂಘ ಸಿಗ್ನಲ್ ಸರ್ಕಲ್‍ನ 50 ಮೀ. ಸುತ್ತ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.

ಎಲ್ಲೆಲ್ಲಿ ದ್ವಿಚಕ್ರ ವಾಹನ ನಿಲುಗಡೆ?

ಕೋಕಿಲಾ ರೇಡಿಯೋ ಕ್ರಾಸ್‍ನಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಗೇಟ್‍ವರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ

ಸಂಗಮ್ ಟೈಲರ್ ಶಾಪ್‍ನಿಂದ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ

ಮೆಡ್‍ಪ್ಲಸ್ ಮೆಡಿಕಲ್ ಶಾಪ್‍ನಿಂದ ಅಯ್ಯ ಆರ್ಕೇಡ್ (ಲೂರ್ದುನಗರ ಕ್ರಾಸ್) ವರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ

parking-in-bh-road

ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಕರ್ನಾಟಕ ಪಬ್ಲಿಕ್ ಶಾಲೆ ಗೇಟ್‍ವೆರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ.

ಮೀನಾಕ್ಷಿ ಭವನ ಕ್ರಾಸ್‍ನಿಂದ ಗಿರಿಯಾಸ್ ಶೋ ರೂಂವರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ.

ಅರವಿಂದ್ ಮೋಟಾರ್‌ನಿಂದ ಗಣೇಶಪ್ರಸಾದ್ ಹೋಟೆಲ್ ಕ್ರಾಸ್‍ವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ.

ಹರ್ಷ ಕ್ರಾಸ್‍ನಿಂದ ಕಾಸರವಳ್ಳಿ ಕಾಂಪ್ಲೆಕ್ಸ್‌ವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ

ಎಲ್ಲೆಲ್ಲಿ ನಾಲ್ಕು ಚಕ್ರ ವಾಹನಗಳ ನಿಲುಗಡೆ?

ಮಹಾನಗರ ಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ (ಕುಚಲಕ್ಕಿ ಕೇರಿ ಎದುರಿನಿಂದ) ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.

ಸುಗಮ್ ಟೈಲರ್ ಶಾಪ್‍ನಿಂದ ಡಯಟ್ ಕಾಲೇಜ್ ಕ್ರಾಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್

parking-in-bh-road

ಗಿರಿಯಾಸ್ ಶೋ ರೂಂನಿಂದ ಮಾತಾ ಮಾಂಗಲ್ಯ ಮಂದಿರ ಗೇಟ್‍ವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.

ನಂದನ್ ಟವರ್ ಎದುರಿನಿಂದ ಪೆನ್ಶನ್ ಮೊಹಲ್ಲಾ 2ನೇ ಕ್ರಾಸ್ ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.

ಪೆನ್ಶನ್ ಮೊಹಲ್ಲಾ 1ನೇ ಕ್ರಾಸ್‍ನಿಂದ ಡಿಹೆಚ್‍ಓ ಆಫೀಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.

ಕೃಷ್ಣ ಕೆಫೆ ಕ್ರಾಸ್‍ನಿಂದ ದೀಪಕ್ ಪೆಟ್ರೋಲ್ ಬಂಕ್ ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಎದೆ ಹಾಲು ಬ್ಯಾಂಕ್‌, ಮಧ್ಯ ಕರ್ನಾಟಕದಲ್ಲಿ ಇದೆ ಮೊದಲು, ಏನಿದು? ಪ್ರಯೋಜನವೇನು?

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment