ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 17 NOVEMBER 2020
ಎಂಟು ತಿಂಗಳ ಬಳಿಕ ರಾಜ್ಯಾದ್ಯಂತ ಪದವಿ ಕಾಲೇಜುಗಳು ಆರಂಭವಾಗಿವೆ. ಹಾಗಾಗಿ ಕೋವಿಡ್ ಲಾಕ್ಡೌನ್ ಬಳಿಕ ಶಿವಮೊಗ್ಗದ ಎಲ್ಲಾ ಪದವಿ ಕಾಲೇಜುಗಳ ಆವರಣದಲ್ಲಿ, ಇದೆ ಮೊದಲ ದಿನ ವಿದ್ಯಾರ್ಥಿಗಳು ಕಾಣಿಸಿಕೊಂಡರು. ಈ ನಡುವೆ ಕುವೆಂಪು ವಿಶ್ವವಿದ್ಯಾಲಯ ಸರಿಯಾದ ಮಾರ್ಗಸೂಚಿ ಪ್ರಕಟಿಸದೆ ಇರುವುದರಿಂದ ಮೊದಲ ದಿನ ಸಾಲು ಸಾಲು ಗೊಂದಲಗಳು ಉಂಟಾದವು.
ಹೇಗಿತ್ತು ಮೊದಲ ದಿನ?
ಕರೋನ ಆತಂಕದ ಹಿನ್ನೆಲೆ ಜಿಲ್ಲೆಯಾದ್ಯಂತ ಎಲ್ಲಾ ಪದವಿ ಕಾಲೇಜುಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು.
- ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿತ್ತು.
- ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಯ ವರದಿ ತರುವುದು ಕಡ್ಡಾಯವಿತ್ತು.
- ಎಲ್ಲಾ ಕಾಲೇಜುಗಳಲ್ಲಿ ಕ್ಯಾಂಟೀನ್, ಲೈಬ್ರರಿಗಳನ್ನು ಬಂದ್ ಮಾಡಲಾಗಿದೆ.
- ವಿದ್ಯಾರ್ಥಿಗಳು ಪ್ರತ್ಯೇಕವಾಗಿ ನೀರಿನ ಬಾಟಲಿ, ಊಟ ತರುವಂತೆ ಸೂಚಿಸಲಾಗಿತ್ತು.
ಕಾಲೇಜಲ್ಲೇ ಕೋವಿಡ್ ಪರೀಕ್ಷೆ
ಉಪನ್ಯಾಸಕರು ಮತ್ತು ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಎಟಿಎನ್ಸಿ ಸೇರಿದಂತೆ ಕೆಲವು ಕಾಲೇಜುಗಳ ಕ್ಯಾಂಪಸ್ನಲ್ಲೇ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು, ಕಾಲೇಜು ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಫೇಸ್ಶೀಲ್ಡ್, ಮಾಸ್ಕ್, ಗ್ಲೌಸ್
ಉಪನ್ಯಾಸಕರಿಗೆ ಫೇಸ್ಶೀಲ್ಡ್, ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಶಿವಮೊಗ್ಗದ ಡಿವಿಎಸ್ ಪದವಿ ಕಾಲೇಜು ಸೇರಿದಂತೆ ಹಲವು ಖಾಸಗಿ ಕಾಲೇಜುಗಳಲ್ಲಿ, ಉಪನ್ಯಾಸಕರಿಗೆ ಫೇಸ್ಶೀಲ್ಡ್, ಮಾಸ್ಕ್, ಗ್ಲೌಸ್ ವಿತರಿಸಲಾಯಿತು.
ವಿದ್ಯಾರ್ಥಿಗಳ ಸಂಖ್ಯೆ ಕುಸಿತ
ಕೋವಿಡ್ ಆತಂಕ ಮತ್ತು ಮೊದಲ ದಿನವಾದ್ದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಹಾಗಾಗಿ ಹಲವು ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸದೆ, ಆನ್ಲೈನ್ ಕ್ಲಾಸ್ ನಡೆಸಲಾಯಿತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422