ಸೌಂದರ್ಯ ವರ್ಧನೆ, ಕೂದಲು ಕಸಿ ಮಾಡಿಸಿಕೊಳ್ಳುವವರೆ ಹುಷಾರ್‌, ಶಿವಮೊಗ್ಗದಲ್ಲಿ ವೈದ್ಯರ ಎಚ್ಚರಿಕೆ

ಶಿವಮೊಗ್ಗ: ಅರ್ಹತೆ ಇಲ್ಲದವರು ಚರ್ಮ ರೋಗದ ಚಿಕಿತ್ಸೆ, ಸೌಂದರ್ಯ ವರ್ಧನೆಯ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಇದರಿಂದ ಜನರ ಪ್ರಾಣಕ್ಕೆ ಅಪಾಯಕ್ಕೆ ಎದುರಾಗಿದೆ. ಆದ್ದರಿಂದ ಅನರ್ಹರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಸಹ್ಯಾದ್ರಿ ಡರ್ಮಾ ಆಸೋಸಿಯೇಷನ್‌ ಮನವಿ ಮಾಡಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರ್ಮ ರೋಗ ತಜ್ಞರು, ಚರ್ಮರೋಗಕ್ಕೆ ಚಿಕಿತ್ಸೆ ನೀಡುವ ನೆಪದಲ್ಲಿ ಹಲವರು ಜನರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದಾರೆ ಎಂದು ಆರೋಪಿಸಿದರು.

ವೈದ್ಯರು ಏನೇನು ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

POINT-1ಅರ್ಹತೆ ಇಲ್ಲದ ವ್ಯಕ್ತಿಗಳು ಚರ್ಮರೋಗ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಈ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

Nanjappa Hospital Advertisement

Shimoga-Dermatologists-press-meet-at-Press-Trust

POINT-2ಎಂಬಿಬಿಎಸ್‌ ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಪಡೆದವರನ್ನು ಚರ್ಮರೋಗ ತಜ್ಞರು ಎನ್ನುತ್ತಾರೆ. ಇಂತಹ ವೈದ್ಯರು ಮಾತ್ರವೇ ಚರ್ಮ, ಕೂದಲು ಮತ್ತು ಉಗುರುಗಳ ಕಾಯಿಲೆ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಇವರು ಮಾತ್ರವೆ ಸೌಂದರ್ಯವರ್ಧಕ ಲೇಸರ್ ಚಿಕಿತ್ಸೆ ನಿರ್ವಹಿಸಲು ಕಾನೂನುಬದ್ಧವಾಗಿ ಅರ್ಹರು ಎಂದು ಆರೋಪಿಸಿದರು.

POINT-3ನೈಸರ್ಗಿಕ ಚಿಕಿತ್ಸಕರು, ಸೂಕ್ತ ತರಬೇತಿ ಪಡೆಯದ ಬ್ಯೂಟಿ ಕ್ಲಿನಿಕ್‌ನ ಸಿಬ್ಬಂದಿ ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆ ನಡೆಸುತ್ತಿದ್ದಾರೆ. ಲೇಸರ್, ಕೂದಲು ತೆಗೆಯುವಿಕೆ, ಬೊಟಾಕ್ಸ್, ಫಿಲ್ಲರ್ಸ್, ಕೆಮಿಕಲ್ ಪೀಲ್ಸ್, ಮೈಕ್ರೋನೀಡ್ಲಿಂಗ್, ಪಿಆರ್‌ಪಿ ಮತ್ತು ಮಚ್ಚೆ ತೆಗೆಯುವಂತಹ ಚಿಕಿತ್ಸೆ ನೀಡುವುದು ಸಂಪೂರ್ಣವಾಗಿ ಅಸುರಕ್ಷಿತವಾಗಿದೆ ಎಂದು ಚರ್ಮ ರೋಗ ತಜ್ಞರು ಆರೋಪಿಸಿದರು.

Shimoga-Dermatologists-press-meet-at-Press-Trust

POINT-4ಅಸುರಕ್ಷಿತ ವಿಧಾನಗಳಿಂದ ಚರ್ಮದ ಮೇಲೆ ಗಾಯ, ಸೋಂಕು, ಬಣ್ಣ ಬದಲಾವಣೆ, ಹುಣ್ಣು ಉಂಟಾಗಬಹುದು. ಗಂಭೀರ ಚರ್ಮ ರೋಗವಿದ್ದರು ಅದನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚದೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಮಹಿಳೆಗೆ KFD ಪಾಸಿಟಿವ್‌, ಸರ್ವೇಕ್ಷಣಾಧಿಕಾರಿ ಏನಂದ್ರು? ಚಿಕಿತ್ಸೆಗೆ ಏನೆಲ್ಲ ವ್ಯವಸ್ಥೆಯಾಗಿದೆ?

ಕೂದಲು ಕಸಿ ಮಾಡಿಸಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಬ್ಯುಟೀಶಿಯನ್ ಶಾಪ್‌ಗಳಲ್ಲಿಯು ಲೇಸರ್ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನಿರ್ವಹಣೆ ಮಾಡುವುದಿಲ್ಲ. ಇದರಿಂದ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗಿ ಕೊನೆಯ ಹಂತದಲ್ಲಿ ಚರ್ಮರೋಗ ತಜ್ಞರ ಬಳಿ ಬರುತ್ತಾರೆ.ಡಾ. ದಾದಾಪೀರ್‌, ಸಹ್ಯಾದ್ರಿ ಡರ್ಮಾ ಆಸೋಸಿಯೇಷನ್‌ ಅಧ್ಯಕ್ಷ

Shimoga-Dermatologists-press-meet-at-Press-Trust

ಬ್ಯೂಟಿ ಪಾರ್ಲರ್‌ನಲ್ಲಿ ಲೇಸರ್ ಚಿಕಿತ್ಸೆ, ಕೂದಲು ಕಸಿ ಮಾಡುತ್ತಿದ್ದಾರೆ. ಸರಿಯಾದ ಕ್ರಮ ಅನುಸರಿಸದೆ ಇರುವುದರಿಂದ ಶಾಶ್ವತವಾದ ಸಮಸ್ಯೆಗಳು ಉಂಟಾಗುತ್ತಿವೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.ಡಾ. ಶಾಂತಲಾ.ಆರ್.ಎಂ, ಚರ್ಮರೋಗ ತಜ್ಞರು

ಸುದ್ದಿಗೋಷ್ಠಿಯಲ್ಲಿ ಡಾ.ಆದಿನಾಥ ಭಂಡಾರ್ಕರ್, ಡಾ.ಸುಮನ್, ಡಾ.ತೃಷ್ತಿ, ಡಾ.ಭರತ್, ಡಾ.ಪ್ರಗತಿ, ಡಾ. ಲಾವಣ್ಯ, ಡಾ.ಪ್ರೇರಣಾ ಸೇರಿ ಹಲವರು ಇದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment