ಶಿವಮೊಗ್ಗ LIVE
ಶಿವಮೊಗ್ಗ: ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ (Devil movie) ನಾಳೆ ಬಿಡುಗಡೆಯಾಗಲಿದೆ. ಇದು ದರ್ಶನ್ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಶಿವಮೊಗ್ಗದಲ್ಲಿ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಡೆವಿಲ್ ಸಿನಿಮಾ ನಾಳೆಯಿಂದ ಪ್ರದರ್ಶನ ಕಾಣಲಿದೆ. ಈ ಹಿನ್ನೆಲೆ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ. ಚಿತ್ರಮಂದಿರದ ಮುಂಭಾಗ ದೀಪಾಲಂಕಾರ ಮಾಡಲಾಗಿದೆ. ಇನ್ನು ಇಡೀ ಚಿತ್ರಮಂದಿರಕ್ಕೆ ಸೀರಿಯಲ್ ಸೆಟ್ ಹಾಕಿಸಲಾಗಿದೆ.
ಸಂಭ್ರಮಾಚರಣೆಯಲ್ಲಿ ಅಭಿಮಾನಿಗಳು
ಇನ್ನು, ಅಭಿಮಾನಿಗಳು ಇಂದು ಸಂಜೆಯಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಚಿತ್ರಮಂದಿರದ ಮುಂಭಾಗ ಜಮಾಯಿಸಿದ ಅಭಿಮಾನಿಗಳು ದರ್ಶನ್ ಸಿನಿಮಾದ ಹಾಡುಗಳಿಗೆ ಡಾನ್ಸ್ ಮಾಡಿದರು. ಡೈಲಾಗ್‌ಗಳನ್ನು ಹೇಳಿ ಖುಷಿಪಟ್ಟರು. ದರ್ಶನ್ ಪರವಾಗಿ ಘೋಷಣೆ ಕೂಗಿದರು. ಚಿತ್ರಮಂದಿರದ ಮುಂಭಾಗ ದರ್ಶನ್ ಕಟೌಟ್‌ಗೆ ಮಾಲಾರ್ಪಣೆ ಮಾಡಿ ಅಭಿಮಾನ ಪ್ರದರ್ಶಿಸಿದರು.

ಮೊಬೈಲ್ ಕಳ್ಳರ ಹಾವಳಿ
ಅಭಿಮಾನಿಗಳ ಕ್ರೇಜ್‌ನ ಮಧ್ಯೆ ಮೊಬೈಲ್ ಕಳ್ಳರು ಕೈಚಳಕ ತೋರಿಸಿದ್ದಾರೆ. ಗುಂಪಿನಲ್ಲಿದ್ದವರ ಜೇಬಿನಿಂದ ಮೊಬೈಲ್‌ಗಳನ್ನು ಕಳ್ಳತನ ಮಾಡಲಾಗಿದೆ. ಐದಾರು ಮೊಬೈಲ್‌ಗಳು ಕಳ್ಳತನವಾಗಿವೆ ಎಂದು ಮೈಕ್‌ನಲ್ಲಿ ಅನೌನ್ಸ್ ಮಾಡಲಾಯಿತು.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಸಾವಿರ ಸಾವಿರ ಸೆಟ್ ದೋಸೆ ಹಂಚಿದ ಭಕ್ತರು, ಕಾರಣವೇನು?
ಟಿಕೆಟ್‌ಗಳು ಸೋಲ್ಡ್ ಔಟ್
ಇನ್ನು, ಮೊದಲ ದಿನದ ಪ್ರದರ್ಶನದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಈ ಸಂಬಂಧ ಚಿತ್ರಮಂದಿರದ ಮುಂಭಾಗ ಬೋರ್ಡ್ ಹಾಕಲಾಗಿದೆ. ನಟ ದರ್ಶನ್ ಅಭಿಮಾನಿಗಳ ಸಂಭ್ರಮದ ವಿಡಿಯೋ ಇಲ್ಲಿದೆ.
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





