ಶಿವಮೊಗ್ಗದ ರಾಘವೇಂದ್ರ ಮಠಕ್ಕೆ ಇವತ್ತು ಜನವೋ ಜನ, ಎಲ್ಲ ದೇಗುಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗದ ದೇಗುಲಗಳಲ್ಲಿ ಇವತ್ತು ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಇಡೀ ವರ್ಷ ಸುಭಿಕ್ಷವಾಗಿರಲಿ ಎಂದು ಭಕ್ತರು (devotees) ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಿದರು.

ಎಲ್ಲೆಲ್ಲಿ ಹೇಗಿತ್ತು ಪರಿಸ್ಥಿತಿ?
ರಾಘವೇಂದ್ರ ಸ್ವಾಮಿ ಮಠ

Devotees-Number-Increased-to-Durgigudi-Raghavendra-Swamy-mutt

ದುರ್ಗಿಗುಡಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಗೆ ಇವತ್ತು ಸಾವಿರಾರು ಭಕ್ತರು ಭೇಟಿ ನೀಡಿದ್ದರು. ವರ್ಷದ ಮೊದಲ ದಿನ ಮತ್ತು ಗುರುವಾರವಾದ್ದರಿಂದ ಬೆಳಗ್ಗೆಯಿಂದಲೇ ಭಕ್ತರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ರಾಯರ ಮಠದಲ್ಲಿ ಬೆಳಗ್ಗೆಯಿಂದ ನಿರಂತರ ಪೂಜೆ ನಡೆಯುತ್ತಿದೆ. ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ನೂತನ ಮಡಿ ವಸ್ತ್ರ ಸೇವೆ, ಸಂಪೂರ್ಣ ಹೂವಿನ ಅಲಂಕಾರ ಸೇವೆಗಳು ನಡೆದವು. ಸಂಜೆ ಭಕ್ತರ ಸಂಖ್ಯೆ ಎಂದಿಗಿಂತಲು ಹೆಚ್ಚಿತ್ತು. ರಾಯರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

Devotees-Number-Increased-to-Durgigudi-Raghavendra-Swamy-mutt

ಕೋಟೆ ರಸ್ತೆಯ ದೇಗುಲಗಳು

ಕೋಟೆ ರಸ್ತೆಯಲ್ಲಿರುವ ಕೋಟೆ ಶ್ರೀ ಸೀತಾರಾಮಾಂಜನೇಯ ದೇಗುಲ, ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನ, ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನಗಳಿಗೆ ಇಂದು ಬೆಳಗ್ಗೆಯಿಂದಲೇ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.

Devotees-Number-Increased-to-Durgigudi-Raghavendra-Swamy-mutt

ಕೋಟೆ ಶ್ರೀ ಸೀತಾರಾಮಾಂಜನೇಯ ದೇಗುಲದಲ್ಲಿ ಸೀತಾ ಕಲ್ಯಾಣ ಶತಮಾನೋತ್ಸವದ ಹಿನ್ನೆಲೆ ಇವತ್ತು ಸುದರ್ಶನ ಹೋಮ, ಉರುಟಣೆ ಇತ್ತು. ಹೊಸ ವರ್ಷದ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಿದ ಭಕ್ತರು ಹೋಮದಲ್ಲಿ ಭಾಗವಹಿಸಿ ಪುನೀತರಾದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಈ ಬಾರಿಯು ವೈಭವದ ತೆಪ್ಪೋತ್ಸವ, ಹೇಗಿದೆ ಸಿದ್ಧತೆ? ಏನೆಲ್ಲ ಕಾರ್ಯಕ್ರಮ ಇರಲಿದೆ?

ನಗರದ ಎಲ್ಲ ದೇಗುಲಗಳಲ್ಲಿಯು ಇವತ್ತು ಭಕ್ತರ ಸಂಖ್ಯೆ ಹೆಚ್ಚಿತ್ತು. ಹೊಸ ವರ್ಷ ಸುಖ, ಸಮೃದ್ಧಿ ತರಲಿ ಎಂದು ಭಕ್ತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment