ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 AUGUST 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಚಂದ್ರಗುತ್ತಿ ಶ್ರೀ ರಾಣುಕಾಂಬ ದೇವಿ ದೇವಸ್ಥಾನದಲ್ಲಿ ಈಚೆಗೆ ಕಳ್ಳತನ (Theft Attempt) ಯತ್ನವಾಗಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ನಡೆಸಬೇಕು ಎಂದು ದೇವಿಯ ಭಕ್ತರು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಭಕ್ತರ ಆರೋಪವೇನು?
ಚಂದ್ರಗುತ್ತಿ ದೇವಸ್ಥಾನದಲ್ಲಿ ಇತ್ತೀಚೆಗೆ ಕಳ್ಳತನ ಯತ್ನ (Theft Attempt) ನಡೆದಿದೆ. ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ದುಷ್ಕರ್ಮಿಗಳು ಬೆಳ್ಳಿಯ ಉತ್ಸವ ಮೂರ್ತಿಯನ್ನು ಹಾನಿ ಮಾಡಿ ಹೊರಗೆ ಬಿಸಾಕಿದ್ದಾರೆ. ಕಳ್ಳತನ ಮಾಡುವ ಉದ್ದೇಶವಾಗಿದ್ದರೆ ಹುಂಡಿ ಒಡೆಯಬೇಕಿತ್ತು. ಆದರೆ ದೇವಿಯ ಮೂರ್ತಿಗೆ ಹಾನಿ ಮಾಡಲಾಗಿದೆ. ಈ ಹಿಂದೆಯೂ ದೇವಸ್ಥಾನದಲ್ಲಿ ಈ ರೀತಿಯ ಘಟನೆ ನಡೆದಿರುವ ಬಗ್ಗೆ ಹಿರಿಯರು ಹೇಳುತ್ತಾರೆ. ಈ ಘಟನೆಯಿಂದ ಸಮಾಜದ ಸಾಮರಸ್ಯ ಕೆಡಿಸುವ ದುಷ್ಟ ಶಕ್ತಿಗಳಿವೆಯೇ ಎಂಬ ಅನುಮಾನ ಕಾಡುತ್ತಿದೆ.
ಇದನ್ನೂ ಓದಿ – ರಸ್ತೆ ಬದಿ ಹೊಂಡಕ್ಕೆ ಜಾರಿದ KSRTC ಬಸ್, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ
ವಿಶೇಷ ತಂಡ ರಚಿಸಿ
ಚಂದ್ರಗುತ್ತಿ ದೇವಿ ದೇವಾಲಯದಲ್ಲಿ ನಡೆದ ಘಟನೆಯಿಂದ ನಮ್ಮ ಭಾವನೆಗೆ ಧಕ್ಕೆಯಾಗಿದೆ. ಆದ್ದರಿಂದ ಪ್ರಕರಣದ ಕೂಲಂಕಷ ತನಿಖೆಗೆ ವಿಶೇಷ ತಂಡ ರಚಿಸಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಎಸ್ಪಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆರ್.ಶ್ರೀಧರ್ ಹುಲ್ತಿಕೊಪ್ಪ, ಎಸ್.ಸಿ ರಾಮಚಂದ್ರ, ಮಧುಗಣಪತಿ ಮಡೆನೂರು, ಪ್ರೊ.ಕಲ್ಲನ, ಕಾಗೋಡು ರಾಮಪ್ಪ, ಉದಯ್‌ಕುಮಾರ್, ಶೆಟ್ಟಿಹಳ್ಳಿ ಸುಧಾಕರ್, ತೇಕಲೆ ರಾಜಪ್ಪ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.